ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಥೇಟ್ ಮೋದಿ ತದ್ರೂಪಿ ಯಾರು ಗೊತ್ತಾ…? ಎಲ್ಲಿಯವರು…? ಥೇಟ್ ಮೋದಿಯವರ ಹೋಲುವ ಇವ್ರ ಕುರಿತ ಎಲ್ಲೂ ಸಿಗದ ಇಂಟ್ರೆಸ್ಟಿಂಗ್ ಸ್ಟೋರಿ

On: April 29, 2023 12:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-04-2023

 

ದಾವಣಗೆರೆ(DAVANAGERE): ಪ್ರಧಾನಿ ನರೇಂದ್ರ ಮೋದಿ (NARENDRA MODI) ಅಂದ್ರೆ ಯಾರಿಗೆ ಇಷ್ಟ ಎಲ್ಲ ಹೇಳಿ. ಕೋಟ್ಯಂತರ ಭಾರತೀಯರ ಮನ ಗೆದ್ದಿರುವ ಜನಪ್ರಿಯ ನಾಯಕ. ಇಂದು ರಾಜ್ಯಕ್ಕೆ ಕಾಲಿಟ್ಟಿರುವ ನರೇಂದ್ರ ಮೋದಿ (NARENDRA MODI) ನೋಡಲು ಲಕ್ಷಲಕ್ಷಗಟ್ಟಲೇ ಜನರು ಸೇರುತ್ತಾರೆ. ಕ್ರೇಜ್ ನೋಡಿದರೂ ಮೋದಿ ಅವರಿಗೆ ಮೋದಿ (MODI) ಅವರೇ ಸಾಟಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದೇಶದಲ್ಲಿ ಮೋದಿ ಅವರದ್ದೇ ಹವಾ. ಚುನಾವಣೆ ಬಂದ್ರೆ ಮೋದಿ ಅವರೇ ಸ್ಟಾರ್ ಪ್ರಚಾರಕರು. ಕರೆದಲ್ಲೆಲ್ಲಾ ಮೋದಿಗೆ ಹೋಗೋಕಾಗುತ್ತಾ, ಹಾಗಾಗಿ ಈಗ ಡ್ಯೂಬ್ಲಿಕೇಟ್ ಮೋದಿ ( MODI)ಅವರಿಗೂ ಭಾರೀ ಡಿಮ್ಯಾಂಡ್ (DEMAND) ಬರುತ್ತೆ.

ಉಡುಪಿ(UDUPI)ಯ ಸದಾನಂದ ನಾಯಕ್ (SADANANDA NAYAK) ಎಂಬುವವರು ಥೇಟ್ ಮೋದಿ ಅವರಂತೆ ತದ್ರೂಪಿ ಆಗಿದ್ದಾರೆ. ಹಾಗಾಗಿ, ಕೆಲ ಕ್ಷೇತ್ರಗಳಲ್ಲಿ ಸದಾನಂದ ನಾಯಕ್ (SADANANDA NAYAK) ಅವರಿಗೆ ಎಲ್ಲಿಲ್ಲದ ಬೇಡಿಕೆ. ಕಳೆದ ಕೆಲ ವರ್ಷಗಳಿಂದ ಮೋದಿ ಅವರಂತೆ ಗಡ್ಡ, ವೇಷಭೂಷಣ ತೊಟ್ಟು ಎಲ್ಲಿಯೇ ಚುನಾವಣೆ ಆಗಲಿ ಹೋಗಿ ಬರುತ್ತಾರೆ. ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ಹೋಗಿ ಬಂದಿದ್ದಾರೆ. ನಾಯಕ್, ಈಗ ಕರ್ನಾಟಕದಲ್ಲಿಯೂ ಸುತ್ತುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಇವ್ರಿಗೆ ಭಾರೀ ಬೇಡಿಕೆ ಇದೆ.

ಗುಜರಾತ್ ಸೇರಿದಂತೆ ಹಲವೆಡೆ ಉಡುಪಿ ಮೋದಿ ಅವರದ್ದೇ ಹವಾ ಇದೆ. ಅಡುಗೆಭಟ್ರಾಗಿದ್ದವರು ಮೋದಿಯಾದ ಕಥೆ ಇದು. ಗಡ್ಡ ನೋಡಿ ಮೋದಿ ಅಂತ ಸೆಲ್ಫೀ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಾರೆ. ಕೆಲ ಕ್ಷೇತ್ರಗಳಲ್ಲಿ ಮೋದಿ ಕರೆತರಲು ಸಾಧ್ಯವಾಗದಿದ್ರೆ ಉಡುಪಿ ಮೋದಿ (UDUPI MODI) ಅವರನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಈಗ ಮಾಯಕೊಂಡ ಕ್ಷೇತ್ರಕ್ಕೆ ಭೇಟಿ ನೀಡಿ ಸದಾನಂದ ನಾಯಕ್ (SADANANDA NAYAK) ಅವರು ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಪ್ರಚಾರ ನಡೆಸುವ ಮೂಲಕ ಜನರ ಗಮನ ಸೆಳೆದಿದ್ದರು. ಸದಾನಂದ ನಾಯಕ್ ಅವರು ಕಳೆದ ಹತ್ತು ವರ್ಷಗಳಿಂದಲೂ ಮೋದಿ ವೇಷಧಾರಿಯಾಗಿಯೇ ಕಾಣಿಸಿಕೊಳ್ಳುತ್ತಾರೆ. ನರೇಂದ್ರ ಮೋದಿ ಅವರ ರೀತಿಯ ನಿಲುವು, ಹಾವಭಾವ, ಮಾತುಕತೆ, ಭಾಷಣವನ್ನೂ ಮಾಡುವುದು ಸದಾನಂದ ನಾಯಕ್ ರ
ಹೆಗ್ಗಳಿಕೆ.

ಎಲ್ಲಿಯವರು ಈ ಮೋದಿ…?

ಮೋದಿ ಅವರ ಹಾವಭಾವ ನೋಡಿ ಕೆಲವರು ಒಮ್ಮೊಮ್ಮೆ ಮೋದಿ ಬಂದುಬಿಟ್ಟರಾ ಅಂದುಕೊಂಡದ್ದು ಉಂಟು. ಉಡುಪಿ ತಾಲೂಕಿನ ಹಿರಿಯಡಕ ಗ್ರಾಮದ ಪಾಪುಂಜೆ ಪ್ರದೇಶದ ನಿವಾಸಿ ಸದಾನಂದ ನಾಯಕ್ (SADANANDA NAYAK).  ಚಿಕ್ಕವಯಸ್ಸಿನಿಂದಲೂ ಕಷ್ಟಪಟ್ಟು ಬೆಳೆದವರು. ಈಗ ಇವ್ರಿಗೆ ಎಲ್ಲಿಲ್ಲದ ಬೇಡಿಕೆ. ಮೇಲಾಗಿ ಸದಾನಂದ ನಾಯಕ್ (SADANANDA NAYAK)   ಅವ್ರು ಬಿಜೆಪಿಯ ಕಟ್ಟಾ ಅಭಿಮಾನಿ ಬೇರೆ. ಕರ್ನಾಟಕ ಮಾತ್ರವಲ್ಲ, ಗುಜರಾತ್ ನಲ್ಲೂ ಇವರ ಖದರ್ ಬೇರೆಯೇ ಇದೆ.

ಗುಜರಾತ್ (GUJARATH) ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುವ ಚುನಾವಣಾ ರ್ಯಾಲಿಗಳಲ್ಲಿ ಇವರೇ ಈಗ ಪ್ರಧಾನ ಆಕರ್ಷಣೆ. ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ ಕಚೇರಿಗೂ ಕರೆದು ಗುಜರಾತ್ ಕಾರ್ಯಕರ್ತರು ಇವರಿಗೆ ಆತಿಥ್ಯ ನೀಡಿದ್ರಂತೆ. ಅಲ್ಲಿ ಪ್ರಚಾರ ಮುಗಿಸಿ, ಬಿಜೆಪಿಯನ್ನ ಗೆಲ್ಲಿಸಿ ಸದಾನಂದ ನಾಯಕ್ ಈಗ ಎಲ್ಲೆಡೆ ಸುತ್ತಾಡುತ್ತಿದ್ದಾರೆ. ಅಂದ ಹಾಗೆ ಇವ್ರು 2018ರ ವಿಧಾನಸಭಾ ಚುನಾವಣೆ ವೇಳೆ ಉಡುಪಿಗೂ ಬಂದಿದ್ರು.

ಅಡುಗೆ ಭಟ್ಟರು ಮೋದಿಧಾರಿಯಾಗಿದ್ದೇ ರೋಚಕ:

ಪ್ರಧಾನಿ ನರೇಂದ್ರ ಮೋದಿ ಚಾಯ್ ವಾಲಾ ಆದ್ರೆ, ಸದಾನಂದ ನಾಯಕ್ ಅಡುಗೆ ಭಟ್ಟರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಡುಗೆಭಟ್ಟರಾಗಿ ಕೆಲಸ ಮಾಡುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಕಳೆದ ಆರು ವರ್ಷದ ಹಿಂದೆ ಹರಿದ್ವಾರಕ್ಕೆ ಪ್ರವಾಸ ಹೋದ ತಂಡದಲ್ಲಿ ಇವರು ಅಡುಗೆ ಕಾರ್ಯ ನಿರ್ವಹಿಸ್ತಾ ಇದ್ರು. ಪ್ರವಾಸ ಇದ್ದ ಕಾರಣ ಗಡ್ಡ ತೆಗೆದಿರಲಿಲ್ಲ. ಗಡ್ಡ ಬಿಟ್ಟ ನಾಯಕ್ ರನ್ನು ನೋಡಿದ ಉತ್ತರ ಭಾರತದ ಜನ ಮೋದಿ ಅಂತ ಮುಗಿಬಿದ್ರಂತೆ. ಆವತ್ತೇ ತನ್ನಲ್ಲಿ ನರೇಂದ್ರ ಮೋದಿಯ ತದ್ರೂಪ ಇದೆ ಅಂತ ಅರಿವಿಗೆ ಬಂದಿದ್ದು. ಆ ದಿನದಿಂದ ಒಂದು ಕ್ಷಣ ವಿರಾಮ ಇಲ್ದೆ ಸಂಚಾರ ಮಾಡ್ತಿದಾರೆ. ಎಲ್ಲೆಡೆ ಮೋದಿ ಮೋದಿ ಅಂತಾ ಜನ ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ತಾರೆ.

ಸದಾನಂದ ನಾಯಕ್ (SADANANDA NAYAK) ರ ಜೊತೆ ಗೋವಾ (GOA)ಮೂಲದ ಅಗಸ್ಟಿನ್ ಡಿ ಅಲ್ಮೆಡಾ ಕೂಡ ಓಡಾಡುತ್ತಾರೆ. ಮಹಾತ್ಮ ಗಾಂಧೀಜಿಯನ್ನು ಹೋಲುವ ಈ ವ್ಯಕ್ತಿ ಎಲ್ಲೇ ಹೋದ್ರೂ ಸಾಥ್ ನೀಡ್ತಿದ್ದರು. ಈ ಜೋಡಿ ಗುಜರಾತ್ ನಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅಲ್ಲಿನ ನ್ಯಾಷನಲ್ ಮೀಡಿಯಾಗಳಲ್ಲೂ ಇವರದ್ದೇ ಮಿಂಚಾಗಿತ್ತು.

ಸೆಲ್ಫಿ ಕೊಡೋದೇ ದೊಡ್ಡ ತಲೆನೋವು:

ಸದಾನಂದ ನಾಯಕ್ರಿಗೆ ಸೆಲ್ಪೀಗೆ ಪೋಸ್ ಕೊಡದೇ ದೊಡ್ಡ ಕೆಲಸ. ಎಲ್ಲೇ ಹೋದ್ರು ಜನ ಇವರಿಗೆ ಮುಗಿಬೀಳ್ತಾರೆ. ಈ ಸೆಲೆಬ್ರಿಟಿ ಫೀಲಿಂಗ್ ಇವರಿಗೆ ಬಯಸದೆ ಬಂದ ಭಾಗ್ಯ. ಉಡುಪಿಯ ಕೆಎಂಸಿಯಲ್ಲಿ ಅಡುಗೆ ಭಟ್ಟರಾಗಿಯೂ ಕೆಲ ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಈಗ ಡ್ಯುಪ್ಲಿಕೇಟ್ ಮೋದಿ ಥರ ವೇಷಭೂಷ ಧರಿಸಿ ಓಡಾಡುತ್ತಿರುವ ಇವ್ರನ್ನು ಕಂಡ್ರೆ ಉಡುಪಿ ಮಂದಿಗೂ ಎಲ್ಲಿಲ್ಲದ ಖುಷಿ.

ಒಟ್ಟಿನಲ್ಲಿ ಸದಾನಂದ ನಾಯಕ್ ಮೋದಿ ಧರಿಸುವ ರೀತಿಯ ಬಟ್ಟೆಗಳನ್ನು, ಪೇಟಾವನ್ನು ಧರಿಸುತ್ತಾರೆ. ದೇಶದ ನಾನಾ ಮೂಲೆಗಳಲ್ಲಿ ಓಡಾಡುತ್ತಿದ್ದಾರೆ. ಗುಜರಾತ್ ನ ಮಂದಿ ಇಲ್ಲಿಯೇ ಬಂದು ಇರುವಂತೆ ಆಫರ್ ಕೂಡ ಕೊಟ್ಟಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ನರೇಂದ್ರ ಮೋದಿ ಭೇಟಿಯಾಗಬೇಕು ಎಂಬ ಆಸೆ ಸದಾನಂದ ನಾಯಕ್ ಅವರಿಗಿತ್ತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment