SUDDIKSHANA KANNADA NEWS/ DAVANAGERE/ DATE-16-05-2025
ಬೆಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಒಂದೊಂದೇ ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ನಂದಿನಿ ಹಾಲು, ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆಯಾಗಿವೆ.
ಕರ್ನಾಟಕ ರಾಜ್ಯ ಸರ್ಕಾರವು ಮತ್ತೆ ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದೆ. ಇದನ್ನು ಕೇಳಿ ಎಣ್ಣೆ ಹೊಡೆಯುವ ಮುನ್ನವೇ ಕಿಕ್ ಇಳಿಯುತ್ತಿದೆ. ಮದ್ಯಪ್ರಿಯರು ರಾಜ್ಯ ಸರ್ಕಾರದ ವಿರುದ್ಧ ರೋಷಾಗ್ನಿ ಹೊರ ಹಾಕಿದ್ದಾರೆ.
ಬಿಯರ್ ದರ ಜಾಸ್ತಿಯಾದ ಬಳಿಕ ವಿಸ್ಕಿ, ರಮ್, ಜಿನ್, ವೋಡ್ಕಾ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಎರಡು ಬಾರಿ ಮದ್ಯದ ಮೇಲೆ ದರ ಹೆಚ್ಚಳವಾಗಿದೆ. ಇದೀಗ ಮತ್ತೆ ಐಎಂಎಲ್ ಮೇಲಿನ ದರ ಏರಿಕೆ ಆಗಲಿದ್ದು, ಮೂರನೇ ಬಾರಿ ಮದ್ಯ ದರ ಹೆಚ್ಚಳವಾಗಲಿದ್ದು, ಪರಿಷ್ಕೃತ ದರ ಜಾರಿಯಾಗಿದೆ.
ಕರ್ನಾಟಕದಲ್ಲಿ ಬಿಯರ್ ಬೆಲೆ ಏರಿಕೆಯಾಗಲಿದ್ದು, ಸರ್ಕಾರವು ಎಲ್ಲಾ ಬಿಯರ್ ಗಳ ಮೇಲಿನ ತೆರಿಗೆಯನ್ನು ಉತ್ಪಾದನಾ ವೆಚ್ಚದ 195% ರಿಂದ 205% ಕ್ಕೆ ಹೆಚ್ಚಿಸಿದೆ. ರಾಜ್ಯದ ಹೊಸ ಕರಡು ನಿಯಮಗಳ ಪ್ರಕಾರ, ಹೆಚ್ಚುವರಿ ಅಬಕಾರಿ ಸುಂಕಕ್ಕೆ ಹೆಚ್ಚುವರಿಯಾಗಿ 10% ಸೇರಿಸಲಾಗಿದೆ.
ಒಂದು ಕ್ವಾಟ್ರು ಮೇಲೆ 10 ರಿಂದ 25 ರೂಪಾಯಿ ದರ ಏರಿಕೆ, ಆದರೆ ಒಂದು ಫುಲ್ ಬಾಟಲ್ ಮೇಲೆ 50 ರಿಂದ 100 ರೂಪಾಯಿ ವರೆಗೆ ಏರಿಕೆ ಇದೆ. ಇದು ಕೇವಲ ಎಂಆರ್‌ಪಿ ದರ ಮಾತ್ರ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಈ ದರದ ಮೇಲೆ 10 ರಿಂದ 15 ರೂಪಾಯಿ ಇನ್ನಷ್ಟು ಹೆಚ್ಚುವರಿ ಬರೆ ಬೀಳುವುದು ಖಚಿತ.
ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38600 ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅದನ್ನು 40 ಸಾವಿರ ಕೋಟಿ ರೂಪಾಯಿಯನ್ನಾಗಿ ಮಾಡಿದೆ. ಈ ಹೊಸ ಟಾರ್ಗೆಟ್‌ನ್ನು ತಲುಪಲು, ಎಲ್ಲಾ ರೀತಿಯ ಐಎಂಎಲ್‌ಗಳ ಮೇಲೆ 10% ರಿಂದ 20% ರಷ್ಟು ದರ ಏರಿಕೆ ಮಾಡಲಾಗಿದೆ.
16 ಸ್ಲ್ಯಾಬ್‌ಗಳಲ್ಲಿ 1 ರಿಂದ 4 ಸ್ಲ್ಯಾಬ್‌ಗಳ ಮೇಲೆ ದರ ಹೆಚ್ಚಳವಾಗಿದೆ. ಸ್ಲ್ಯಾಬ್-1 ನಲ್ಲಿ, ಒಂದು ಕ್ವಾರ್ಟರ್ 65 ರೂಪಾಯಿ ಇದ್ದು, ಅದರ ಮೇಲೆ 15 ರೂಪಾಯಿ ಏರಿಕೆಯಾಗಿದೆ. ಸ್ಲ್ಯಾಬ್-2 ನಲ್ಲಿ, 80 ರೂಪಾಯಿ ಇದ್ದು, ಅದರ ಮೇಲೆ 15 ರೂಪಾಯಿ ಏರಿಕೆಯಾಗಿದೆ. ಸ್ಲ್ಯಾಬ್-3 ನಲ್ಲಿ, 120 ರೂಪಾಯಿ ಇದ್ದು, ಅದರ ಮೇಲೆ 10 ರಿಂದ 15 ರೂಪಾಯಿ ಜಾಸ್ತಿಯಾಗಿದೆ. ಸ್ಲ್ಯಾಬ್-4 ನಲ್ಲಿ, 130 ರೂಪಾಯಿ ಇದ್ದು, ಅದರ ಮೇಲೆ 10 ರಿಂದ 15 ರೂಪಾಯಿ ಏರಿಕೆಯಾಗಿದೆ
ಈ ವರ್ಷ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಕೂಡ ಏರಿಕೆ ಆಗಿದೆ. ಇರದ ಜೊತೆಗೆ ಮದ್ಯ ಪ್ರಿಯರು ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಇಲಾಖೆ ಸರ್ಕಾರ ಕೊಟ್ಟ ಟಾರ್ಗೆಟ್ ರೀಚ್ ಮಾಡಲು ಈ ರೀತಿ ಪದೇ ಪದೇ ಮದ್ಯದ ಬೆಲೆ ಏರಿಕೆ ಮಾಡೋದು ಸರಿಯಲ್ಲ ಎಂದು ಮದ್ಯಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.