SUDDIKSHANA KANNADA NEWS/ DAVANAGERE/ DATE:04-01-2025
ದಾವಣಗೆರೆ: ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ದಾವಣಗೆರೆ ಜಿಲ್ಲೆಯಲ್ಲಿ ನಾಲ್ಕನೇ ಬಾರಿಗೆ ಆಯೋಜನೆ ಮಾಡಲಾಗಿದ್ದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮ ನಡೆಯುವ ಎಂಬಿಎ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಯುವ ಜನ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಜ.5 ಮತ್ತು 6 ರಂದು ಯುವಜನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಸಚಿವರು, ಸಂಸದರು ಹಾಗೂ ಅನೇಕ ಗಣ್ಯರು ಆಗಮಿಸಲಿದ್ದಾರೆ.
ರಾಜ್ಯದ ನಾನಾ ಭಾಗಗಳಿಂದ ಯುವ ಜನತೆಯು ಯುವಜನೋತ್ಸವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾದಿದ್ದು ಕಾರ್ಯಕ್ರಮದ ಹಿನ್ನಲೆ ವಿವಿಧ ಮನರಂಜನಾ ಕಾರ್ಯಕ್ರಮಗಳು, ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮಗಳು ಹಾಗೂ ರಾಕ್ ಕ್ಲೈಮಿಂಗ್ ನಂತಹ ರಸದೌತಣ ನೀಡುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈಗಾಗಲೇ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಗೆ ಸಕಲ ಸಿದ್ದತೆಗಳನ್ನು ಕೈ ಗೊಳ್ಳಲಾಗಿದೆ. ಯಶಸ್ವಿಯಾಗಿ ಯುವಜನೋತ್ಸವ ನಡೆಯಲು ಸರ್ವರು ಸಹಕಾರ ನೀಡಿ ಎಂದು ಸಂಸದರು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾ ಡಾ.ಎಂ.ವಿ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿಗಳಾದ ಲೋಕೇಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ವೀರೇಶ್ ಪಾಟೀಲ್, ಸಿಂಡಿಕೇಟ್ ಸದಸ್ಯ ಪ್ರಶಾಂತ್ ನುಚ್ಚಿನ್, ಯುವಘಟಕದ ಮುಖಂಡರಾದ ಸಾಗರ್ ಎಲ್.ಎಂ.ಹೆಚ್, ಶಂಭು, ಭಾಷ, ಮುಜಾಯುದ್, ರತನ್, ಮಂಜಣ್ಣ, ರಂಗನಾಥ್, ಅಜೀತ್, ಸದ್ದಾಂ ಸೇರಿದಂತೆ ಹಲವರಿದ್ದರು.