SUDDIKSHANA KANNADA NEWS/ DAVANAGERE/ DATE:02-08-2023
ದಾವಣಗೆರೆ (Davanagere) : ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಬಾಪೂಜಿ ಆಡಳಿತ ಮಂಡಳಿ ನಿರ್ದೇಶಕಿ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಜೊತೆ ಸಂವಾದ ನಡೆಸಿ ಸ್ತನಪಾನದ ಬಗ್ಗೆ ಅವರಿಗಿರುವ ಮಾಹಿತಿ ಸಂದೇಹ, ಮಹತ್ವ ಮತ್ತು ಅವರ ಅನುಭವಗಳ ಕುರಿತು ಚರ್ಚೆ ನಡೆಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಮಗು ಹಾಗೂ ತಾಯಿಯ ಉತ್ತಮ ಆರೋಗ್ಯಕ್ಕಾಗಿ ಸ್ತನ ಪಾನ ಬಹಳ ಮುಖ್ಯವಾಗಿದ್ದು, ಎಲ್ಲರೂ ಇದರ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ಸ್ತನ್ಯ ಹಾಲು ಬ್ಯಾಂಕ್ ಪ್ರಾರಂಭಿಸುವ ಚಿಂತನೆ ಇದ್ದು, ಅನೇಕ ಸಂದರ್ಭಗಳಲ್ಲಿ ತಾಯಿಯ ಎದೆ ಹಾಲು ಮಗುವಿಗೆ ಉಣಿಸಲು ಸಾಧ್ಯವಾಗದ ಸ್ಥಿತಿ ಇದ್ದಾಗ, ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ಸಂಸದ ಸಿದ್ದೇಶ್ವರರ ಸಿಡಿಗುಂಡು ವಾಗ್ಬಾಣಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ “ಮಲ್ಲಗುದ್ದಿನೇಟು…”!
ಮಕ್ಕಳ ತಜ್ಞರಾದ ಡಾ. ಸಿ.ಆರ್ ಬಾಣಾಪುರ್ ಮಠ ಮಾತನಾಡಿ ಗರ್ಭಿಣಿ ಸ್ತ್ರೀಯರ ಆರೈಕೆ ಹೆರಿಗೆಯಾದ ನಂತರ ಮಕ್ಕಳು ಹಾಗೂ ತಾಯಿಯ ಬಾಂಧವ್ಯ ಬೆಳೆಯಲು ಮೊದಲು ಮಾಡಬೇಕಾದಂತಹ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ ತಾಯಿ ಮತ್ತು ಮಗುವಿನ ಹಾರೈಕೆ ಹಾಗೂ ಆರೋಗ್ಯವಂತ ಮಗುವಿನ ಲಾಲನೆ ಪಾಲನೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದು ಅದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿ ಆರೋಗ್ಯವಂತ ಮಗುವಿಗೆ ತಾಯಿಯ ಎದೆಯ ಹಾಲು ಎಷ್ಟು ಮುಖ್ಯ ಎಂಬುದರ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಬಿ.ಎಸ್ ಪ್ರಸಾದ್, ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಅಜ್ಜಪ್ಪ, ಮಕ್ಕಳ ವಿಭಾಗದ ಡಾ. ಎನ್.ಕೆ ಕಾಳಪ್ಪನವರ್, ಡಾ. ಲತಾ ಜಿ.ಎಸ್ ಮಾತನಾಡಿದರು. ಬಾಪೂಜಿ ಮಕ್ಕಳ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಮೂಗನಗೌಡ ಪಾಟೀಲ್, ಡಾ. ಚಂದ್ರಶೇಖರ್ ಗೌಳಿ, ಡಾ. ಶಾಂತಲಾ ಸೇರಿದಂತೆ ವೈದ್ಯರು ನರ್ಸಿಂಗ್ ಸಿಬ್ಬಂದಿ ಬಾಪೂಜಿ ಸಂಸ್ಥೆಯ ವಿವಿಧ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.
Davanagere, Davanagere News, Davanagere News Updates, Prabha Mallikarjun News, Prabha Mallikarjun Suddi, Prabha Mallikarjun Program