SUDDIKSHANA KANNADA NEWS/ DAVANAGERE/ DATE:11-02-2025
ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ-173 ಮೂಡಿಗೆರೆಯಿಂದ ಹೊಳಲ್ಕೆರೆವರೆಗೆ ಇದ್ದು, ಎನ್. ಹೆಚ್. 369 ಬಳಿ ಮುಕ್ತಾಯಗೊಂಡಿದೆ. ಇದೇ ಹೆದ್ದಾರಿಯನ್ನು ಹೊಳಲ್ಕೆರೆಯಿಂದ ಚಿಕ್ಕಜಾಜೂರಿನ ಮೂಲಕ ಹಾದುಹೋಗಿರುವ
ರಾಜ್ಯ ಹೆದ್ದಾರಿ 47 ಆನಗೋಡು ಸಮೀಪದ ಎನ್ ಹೆಚ್ 48ರವರೆಗೆ ಮೇಲ್ದರ್ಜೆಗೇರಿಸಲು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನವದೆಹಲಿಯ ಸಂಸತ್ ನ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಇದನ್ನು ಮೇಲ್ದರ್ಜೆಗೇರಿಸುವುದರಿಂದ ಪ್ರಮುಖ ಮಾರ್ಗಗಳಿಗೆ ಪ್ರವೇಶವನ್ನು ಸುಗಮಗೊಳಿಸುವುದರೊಂದಿಗೆ ಮಧ್ಯ ಕರ್ನಾಟಕದ ಪ್ರಮುಖ ಖನಿಜ ಅಡಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ನಾಡಾಗಿದ್ದು, ಮಂಗಳೂರಿಗೆ ಸಂಪರ್ಕಿಸುತ್ತದೆ. ಜೊತೆಗೆ ರಫ್ತು ಮಾಡಲು ಉತ್ತೇಜನ ದೊರಕಿದಂತಾಗುತ್ತದೆ.
ಈ ಮಾರ್ಗದ ಪ್ರಾಮುಖ್ಯತೆಯನ್ನು ಮನಗಂಡ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಮನ ಸೆಳೆದಿದ್ದಾರೆ.