ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮತದಾನ ಮುಗಿದರೂ ಬ್ಯುಸಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್: ಎಂ. ಎಲ್. ಸೃಷ್ಟಿಗೆ ಅಭಿನಂದನೆ, ಪುಟಾಣಿಗೆ ಜನುಮದಿನದ ಶುಭಾಶಯ

On: May 15, 2024 6:09 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:15-05-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನ ಮುಗಿದಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮತದಾನ ಮುಗಿದರೂ ಬ್ಯುಸಿಯಾಗಿದ್ದಾರೆ. ನಿತ್ಯವೂ ಮನೆಗೆ ಬರುತ್ತಿರುವ ರಾಜಕೀಯ ಮುಖಂಡರು, ಸಾಧಕರು, ಮಕ್ಕಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕ ಗಳಿಸಿರುವ ತ್ಯಾವಣಗಿ ಗ್ರಾಮದ ಪ್ರಕೃತಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ ಸೃಷ್ಟಿ ಎಂ.ಎಲ್ ಅವರು ಇಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು
ಭೇಟಿ ಮಾಡಿದರು.

ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಸೃಷ್ಟಿ ಅಭಿನಂದಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮುಂಬರುವ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಅಂಕಗಳು ಬರುವಂತಾಗಲಿ. ಏನೇ ಸಹಾಯ ಬೇಕಿದ್ದರೂ ಕೇಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಪೋಷಕರಾದ ಲೋಕೇಶ್ ನಾಯ್ಕ, ವಿಶಾಲ ಬಾಯಿ ಅವರಿಗೂ ಮಗಳ ಈ ಸಾಧನೆಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿನಂದಿಸಿದರು.

ಐದು ವರ್ಷದ ಬಾಲಕಿ ಜನುಮದಿನ ಆಚರಣೆ:

ಕಾಂಗ್ರೆಸ್ ಪಕ್ಷದ ಯುವ ಮುಖಂಡ ಗಜೇಂದ್ರ ಅವರ ಪುತ್ರಿ ಪ್ರತಿಕ್ಷಾಳ ಐದನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಾಕ್ಷಿಯಾದರಲ್ಲದೇ, ಜನುಮದಿನದ ಶುಭಾಶಯ ಕೋರಿದರು.

ಬಾಲಕಿ ಪ್ರತಿಕ್ಷಾಳನ್ನು ಎತ್ತಿಕೊಂಡು ಮುದ್ದಾಡಿದರು. ಆಕೆಯನ್ನು ಖುರ್ಚಿಯಲ್ಲಿ ಕುಳ್ಳಿರಿಸಿ ಜನುಮದಿನದ ಶುಭಾಶಯ ಕೋರಿದರು.

ಮುಖಂಡರು ಭೇಟಿ:

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಳೆಕಟ್ಟೆ ಗ್ರಾಮದ ಮುಖಂಡರು ಇಂದು ಡಾ.ಪ್ರಭಾ ಮಲ್ಲಿಕಾರ್ಜುನ್ ರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚುನಾವಣಾ ಕುರಿತು ಚರ್ಚೆ ನಡೆಸಿ ಗೆಲುವಿಗೆ ಶುಭ ಹಾರೈಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment