ನವದೆಹಲಿ/ದಾವಣಗೆರೆ; ನವದೆಹಲಿಯ ಸಂಸತ್ ಭವನದಲ್ಲಿ ಬುಧವಾರ ನಡೆದ ಪ್ರಶ್ನೋತ್ತರ ಸಮಯದ ಚರ್ಚೆಯ ವೇಳೆ ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಸರ್ಕಾರದ ಗಮನ ಸೆಳೆದರು.
ಕಳೆದ ಐದು ವರ್ಷಗಳಲ್ಲಿ ಇಸ್ರೋ ನಡೆಸಿದ ಉನ್ನತಿ, ರೆಸ್ಪಾಂಡ್ ಮತ್ತು ಐಐಆರ್‌ಎಸ್ ಔಟ್ರೀಚ್ ಕಾರ್ಯಕ್ರಮಗಳ ಮೂಲಕ ಎಷ್ಟು ಮಂದಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ತರಬೇತಿ ಪಡೆದಿದ್ದಾರೆ ಎಂಬ ಬಗ್ಗೆ ಆಡಳಿತ ಪಕ್ಷ ಮಾಹಿತಿ ಒದಗಿಸಬೇಕೆಂದು ಒತ್ತಾಯಿಸಿದರು.
READ ALSO THIS STORY: ಅನಾರೋಗ್ಯ ಅಥವಾ ಕಡೆಗಣನೆ: ಶಾಸಕರ ಜೊತೆಗಿನ ಸಿದ್ದರಾಮಯ್ಯರ ಸಭೆಗಳಿಂದ ಶಿವಕುಮಾರ್ ಹೊರಗುಳಿದಿದ್ಯಾಕೆ?
ಇಸ್ರೋ ತರಬೇತಿ ಪಡೆದವರಲ್ಲಿ ಶ್ರೇಣಿ 2 ಹಾಗೂ ಶ್ರೇಣಿ 3 ನಗರಗಳು ಅಥವಾ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಂದ ಎಷ್ಟು ಮಂದಿ ಬಂದಿದ್ದಾರೆ ಎಂಬುದರ ಕುರಿತು ಸರ್ಕಾರವು ನಿರ್ದಿಷ್ಟ ಮತ್ತು ಸಂಪೂರ್ಣ ಡೇಟಾ ಹಂಚಿಕೊಳ್ಳಬೇಕೆಂದು ಕೇಳಿದರು.
ಇದಕ್ಕೆ ಉತ್ತರಿಸಿದ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಮಂತ್ರಿ ಡಾ.ಜಿತೇಂದ್ರ ಸಿಂಗ್ ಅವರು ಇಸ್ರೋ ಶಿಕ್ಷಣ ಕೇಂದ್ರಗಳ ಬಗ್ಗೆ ಮಾಹಿತಿ ಒದಗಿಸಿದರು.ಆದರೆ ಪ್ರಶ್ನೆಯ ಪ್ರಮುಖ ಅಂಶಗಳನ್ನು ನೀಡದೆ.ಕೇವಲ ಇಸ್ರೋ ಶಿಕ್ಷಣ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದರು.