ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಬೇಡಿ: ಎಂ. ಜಿ. ಶ್ರೀಕಾಂತ್ ರಿಂದ ಎಸಿಗೆ ದೂರು!

On: October 17, 2025 9:29 PM
Follow Us:
ಪಟಾಕಿ
---Advertisement---

SUDDIKSHANA KANNADA NEWS/DAVANAGERE/DATE:17_10_2025

ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿ ಶಾಲಾ ಪ್ರಾಂಶುಪಾಲರ ಅನುಮತಿ ಇಲ್ಲದೇ ತಾತ್ಕಾಲಿಕ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಬಾರದು ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಅವರಿಗೆ ದೂರು ಸಲ್ಲಿಕೆಯಾಗಿದೆ.

READ ALSO THIS STORY: 1984ರಲ್ಲಿ ರಾಜೀವ್ ಗಾಂಧಿ ಸಾರಥ್ಯದ ಕಾಂಗ್ರೆಸ್ ಭರ್ಜರಿ ಬಹುಮತಕ್ಕೆ ಕಾರಣ ಆರ್‌ಎಸ್‌ಎಸ್! ಬಿಜೆಪಿ ಬಿಟ್ಟು “ಕೈ” ಬೆಂಬಲಿಸಿದ್ಯಾಕೆ? ಇಂಟ್ರೆಸ್ಟಿಂಗ್ ಸ್ಟೋರಿ

ನಗರದ ಹೊರ ವಲಯದಲ್ಲಿ ಪಟಾಕಿ ಅಂಗಡಿಗಳಿಗೆ ಪಟಾಕಿ ಮಾರಾಟ ಮಾಡಲು ಕ್ರಮ ವಹಿಸದೇ, ಜನದಟ್ಟಣೆ ಹಾಗೂ ಸಂಚಾರ ದಟ್ಟಣೆ ಇರುವ ಸ್ಥಳದಲ್ಲಿ ಅನುಮತಿ ನೀಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೇ, ನಗರದ ಒಳಗೂ ಸಹ ಕೆಲವು ಅಂಗಡಿಗಳು ಸಹ ಇರುತ್ತವೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಕಾಡಲಾರಂಭಿಸಿದೆ.

ಹಬ್ಬದ ಸಮಯದಲ್ಲಿ ಗಾಂಧಿ ವೃತ್ತ ಕಾಮಗಾರಿ ನಡೆಯುತ್ತಿದೆ. ಅಲ್ಲದೇ ಕೆಇಬಿ ವೃತ್ತವನ್ನೂ ಸಹ ಮುಚ್ಚಲಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಸರ್ಕಾರಿ ಸ್ಥಳದಲ್ಲಿ ಶೈಕ್ಷಣಿಕ, ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಹೊರತುಪಡಿಸಿದಂತೆ ಖಾಸಗಿಯವರಿಗೆ ನೀಡಬಾರದೆಂದು ಹೇಳಲಾಗಿದೆ. ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಪಟಾಕಿ ಅಂಗಡಿಗಳನ್ನು ತೆರೆಯಲು ಹೈಸ್ಕೂಲ್ ಮೈದಾನದಲ್ಲಿ ತೆರೆಯಲು ಅನುಮತಿ ನೀಡಿಲ್ಲ. ಮೈದಾನದಲ್ಲಿ ಸಂಬಂಧಪಟ್ಟವರ ಅನುಮತಿ ಇಲ್ಲದೇ ತಾತ್ಕಾಲಿಕ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡದಂತೆ ಈ ಬಗ್ಗೆ ಪರಿಶೀಲನೆ ಮಾಡಲು ಹಾಗೂ ಹೈಸ್ಕೂಲ್ ಮೈದಾನದ ಬಗ್ಗೆ ಈಗಾಗಲೇ ಉಪ ಲೋಕಾಯುಕ್ತರಲ್ಲಿ ದೂರು ಸಹ ದಾಖಲಾಗಿದೆ ಎಂದು ಶ್ರೀಕಾಂತ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆಯವರಿಗೂ ಸಹ ದೂರನ್ನು ಎಂ. ಜಿ. ಶ್ರೀಕಾಂತ್ ದೂರು ನೀಡಿದ್ದಾರೆ.

ಸಜ್ಜಾಗುತ್ತಿದೆ ಹೈಸ್ಕೂಲ್ ಮೈದಾನ:

ಇನ್ನು ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಮಾಡಲು ತೆರಯಲು ಸಿದ್ಧತೆ ನಡೆಸಲಾಗುತ್ತಿದೆ. ಶಾಲಾ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಅನುಮತಿ ನೀಡಬಾರದೆಂಬ ಆದೇಶವಿದ್ದರೂ ಮೈದಾನದಲ್ಲಿ ಅನುಮತಿ ನೀಡುತ್ತಿರುವುದರ ಹಿಂದೆ ಪ್ರಭಾವಿಗಳ ಕೈವಾಡ ಇದ್ದು, ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಎಂ. ಜಿ. ಶ್ರೀಕಾಂತ್ ಒತ್ತಾಯಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment