ಬೆಂಗಳೂರು: ನಟ ಡಾಲಿ ಧನಂಜಯ ಮತ್ತು ಡಾ.ಧನ್ಯತಾ ರವರು ಕೆಲ ವಾರಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಈಗ ಫೆಬ್ರವರಿಯಲ್ಲಿ ಮದುವೆಮಾಡಿಕೊಳ್ಳುತ್ತಿದ್ದಾರೆ, ಇದೇ ಫೆಬ್ರವರಿ16ರಂದು ನವಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಡಾಲಿ ಮತ್ತು ಧನ್ಯತಾ ಜೋಡಿ ನಿನ್ನೇ ಸಿಎಂ ಸಿದ್ಧರಾಮಯ್ಯ ರವರನ್ನು ಭೇಟಿ ಮಾಡಿ ತಮ್ಮ ಮೊದಲ ಅಹ್ವಾನ ಪತ್ರಿಕೆ ನೀಡಿ ಅಹ್ವಾನಿಸಿದರು.
ನಟ ಡಾಲಿ ಅವರು ತಮ್ಮ ಮದುವೆಯ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದು, ಮೊದಲು ಬಂಡಿ ಮಹಾಂಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮದುವೆ ಅಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ ನಂತರ ದೇವಿಯ ಆಶೀರ್ವಾದ ಪಡೆದುಕೊಂಡರು.
ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಂಬಂಧ ಹೊಂದಿರುವ ನಟ ಡಾಲಿ ಅವರು ಮೊದಲ ಅಹ್ವಾನ ಪತ್ರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿ ತಮ್ಮ ಮದುವೆಗೆ ಬರುವಂತೆ ಅಹ್ವಾನಿಸಿದರು. ಇನ್ನೂ ಸಿಎಂ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಹ್ವಾನಿಸಿದ್ದಾರೆ