SUDDIKSHANA KANNADA NEWS/ DAVANAGERE/ DATE:01-02-2025
ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಎರಡು ಬೀದಿ ನಾಯಿಗಳು ದಾಳಿ ಮಾಡಿದ ನಂತರ ಗಂಭೀರ ಗಾಯಗೊಂಡಿದ್ದಾನೆ. ಬೀದಿ ನಾಯಿಗಳ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತೆಲಂಗಾಣದ ಹೈದರಾಬಾದ್‌ನಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ಎರಡು ಬೀದಿ ನಾಯಿಗಳು ತನ್ನ ಮನೆಯ ಬಳಿ ದಾಳಿ ಮಾಡಿದವು. ರಾಜೇಂದ್ರನಗರ ಪ್ರದೇಶದ ಗೋಲ್ಡನ್ ಹೈಟ್ಸ್ ಕಾಲೋನಿಯ ರಸ್ತೆಯಲ್ಲಿ ಮಗು ಆಟವಾಡುತ್ತಿದ್ದಾಗ ದಾಳಿ ನಡೆದಿದೆ. ಎರಡು ನಾಯಿಗಳು ಮಗುವಿನ ಮೇಲೆ ಎರಗಿವೆ ಎಂದು ವರದಿಯಾಗಿದೆ.
ಪರಿಸ್ಥಿತಿ ಆತಂಕಕಾರಿಯಾಗಿದ್ದರೂ ಮಗುವಿನ ತಾಯಿ ಕ್ಷಿಪ್ರವಾಗಿ ಮಗು ಕಾಪಾಡಿದ್ದಾರೆ. ನಾಯಿಗಳನ್ನು ಹಿಮ್ಮಿಟ್ಟಿಸಿ ಮಗು ರಕ್ಷಿಸಿದ್ದಾರೆ. ಆದರೂ ಮಗುವಿಗೆ ಕಾಲು, ಸೊಂಟ ಮತ್ತು ತೊಡೆಯ ಭಾಗಕ್ಕೆ ತೀವ್ರ ಗಾಯಗಳಾಗಿವೆ. ದಾಳಿಯ ನಂತರ ಮಗುವನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು
ಮಗುವಿನ ಮೇಲಿನ ದಾಳಿಯು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ದಾಳಿಯ ಬಗ್ಗೆ ಕಳವಳ ಉಂಟು ಮಾಡಿದೆ. ಏಕೆಂದರೆ ಸ್ಥಳೀಯ ಅಧಿಕಾರಿಗಳು ಅನಿಯಂತ್ರಿತ ಬೀದಿನಾಯಿಗಳ ನಿಯಂತ್ರಣವೇ ದೊಡ್ಡ ಸಮಸ್ಯೆ ಆಗಿದೆ.