SUDDIKSHANA KANNADA NEWS/ DAVANAGERE/ DATE:30_07_2025
ದಾವಣಗೆರೆ: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಮಕ್ಕಳು ಸೇರಿದಂತೆ ಐದು ಜನರನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡಿಸಲು ಶಾಸಕ ಕೆ.ಎಸ್.ಬಸವಂತಪ್ಪ ನೆರವಾದರು.
ಬುಧವಾರ ಕ್ಷೇತ್ರ ಸಂಚಾರದಲ್ಲಿ ತೊಡಗಿದ್ದ ಶಾಸಕ ಕೆ.ಎಸ್.ಬಸವಂತಪ್ಪ, ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿಗೆ ಒಳಗಾಗಿ ಐದು ಜನರು ಗಾಯಗೊಂಡಿದ್ದಾರೆ ಎಂಬ
ಸುದ್ದಿ ತಿಳಿದಿದೆ.
READ ALSO THIS STORY: ಮದುವೆಗೆ ವೈಯಕ್ತಿಕ ಸಾಲ ತೆಗೆದುಕೊಳ್ಳಲು ಯೋಚಿಸುತ್ತಿದ್ದೀರಾ: ಸಾಧಕ-ಬಾಧಕಗಳ ಡೀಟೈಲ್ಸ್
ಕೂಡಲೇ ಅವರನ್ನು ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ಸೂಚಿಸಿ ದಾವಣಗೆರೆಗೆ ಬಂದಿದ್ದಾರೆ. ಅವರು ಆಸ್ಪತ್ರೆಗೆ ಬರುತ್ತಿದ್ದಂತೆ ವೈದ್ಯರ ಬಳಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು
ನೆರವಾದರು.
ಸುಮಾ (30), ಶ್ರೇಯಾ (7), ಚಂದ್ರಿಕಾ (2), ಮದನ್ (2), ರುದ್ರಮ್ಮ (65) ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡವರು.
ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಂತೆ ನಮ್ಮ ಕ್ಷೇತ್ರದಲ್ಲೂ ಇಂತಹ ಪ್ರಕರಣಗಳು
ಹೆಚ್ಚಾಗುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ, ಬಸವರಾಜ್, ದಶರತ್, ರವಿ ಸೇರಿದಂತೆ ಗಾಮದ ಕೆಲವರು ಹಾಜರಿದ್ದರು.