ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಭಾರತ ದ್ವೇಷಿಸುವೆ” ಎಂದಿದ್ದ ವೈದ್ಯೆ ಅಫೀಫಾ ಫಾತೀಮಾ: ಕೆಲಸದಿಂದಲೂ ವಜಾ, ಕೇಸೂ ದಾಖಲು!

On: April 30, 2025 11:50 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-30-04-2025

ಮಂಗಳೂರು: ಭಾರತ ದ್ವೇಷಿಸುವೆ ಎಂದಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜೊತೆಗೆ ಈಕೆ ವಿರುದ್ಧ ಕೇಸ್ ಕೂಡ ದಾಖಲಾಗಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಡೀ ಭಾರತವೇ ಆಕ್ರೋಶ ವ್ಯಕ್ತಪಡಿಸಿತ್ತು. ಉಗ್ರರ ಗುಂಡಿಗೆ ಬಲಿಯಾದವರ ಕುಟುಂಬಸ್ಥರ ಕಣ್ಣೀರು ಇನ್ನೂ ನಿಂತಿಲ್ಲ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಇಡಿ ವಿಶ್ವವೇ ಖಂಡಿಸಿದೆ. ಆದ್ರೆ, ಮಂಗಳೂರಿನ ವೈದ್ಯೆ ಎಕ್ಸ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ಆಕ್ರೋಶಕ್ಕೂ ಕಾರಣವಾಗಿತ್ತು.

ಪೆಹಲ್ಗಾಮ್​ನಲ್ಲಿ ನಡೆದ ದಾಳಿ ವಿರುದ್ಧದ ಸಿಟ್ಟು ದಿನಕಳೆಂದಂತೆ ಹೆಚ್ಚಾಗುತ್ತಲೇ ಇದೆ. ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮುಂದಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಈ ಹೊತ್ತಿನಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ವೈದ್ಯೆಯಾಗಿದ್ದ ಅಫೀಫಾ ಫಾತೀಮಾ ಎನ್ನುವ ಯುವತಿ, ಧರ್ಮ ಹಾಗೂ ದೇಶ ವಿರೋಧಿ ಪೋಸ್ಟ್ ಹಾಕಿದ್ದಳು. ವಿವಾದಾತ್ಮಕ ಪೋಸ್ಟ್‌ ಹಿನ್ನೆಲೆಯಲ್ಲಿ ಹೈಲ್ಯಾಂಡ್‌ ಆಸ್ಪತ್ರೆ ಎಚ್‌.ಆರ್‌. ಅಧಿಕಾರಿ ಮಹಮ್ಮದ್‌ ಅಸ್ಲಾಂ ಅವರು ಅಫೀಫಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಕೇಸ್​ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ಆರೋಪ ಹೊತ್ತಿರುವ ನಗರದ ಖಾಸಗಿ ಆಸ್ಪತ್ರೆಯ ವೈದ್ಯೆ ಅಫೀಫಾ ಫಾತೀಮಾ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ನೋಟಿಸ್ ನೀಡಿ, ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಮಾಹಿತಿ ನೀಡಿದ್ದಾರೆ.

ಈಕೆ ಹಾಕಿದ್ದ ಕಮೆಂಟ್ ಗೆ ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು ದೇದ್ರೋಹಿ ವೈದ್ಯೆ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ವೈದ್ಯೆ ಅಫೀಫಾ ಫಾತೀಮಾ ಮಾಡಿದ ದೇಶವಿರೋಧಿ ಪೋಸ್ಟ್ ಆಡಳಿತ ಮಂಡಳಿಗೆ ತಲೆಬಿಸಿ ತಂದಿತ್ತು. ಮಾತ್ರವಲ್ಲ, ಈಕೆಯನ್ನು ಕೂಡಲೇ ಬಂಧಿಸಿ ಈಕೆಯ ಹಿಂದೆ ಯಾರ್ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಕೂಡಲೇ ಎಚ್ಚೆತ್ತ ಆಡಳಿತ ಮಂಡಳಿ ವೈದ್ಯೆಯನ್ನು ಕೆಲಸದಿಂದ ವಜಾಗೊಳಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment