SUDDIKSHANA KANNADA NEWS/ DAVANAGERE/ DATE:13-12-2023
ದಾವಣಗೆರೆ: ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಜನತಾದರ್ಶನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಂಡು ಒಟ್ಟು 1,599 ಅರ್ಜಿಗಳನ್ನು ಆನ್ಲೈನ್ನಲ್ಲಿ ಸ್ವೀಕರಿಸಿ, ಒಟ್ಟು 1,516 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, ವಿಲೇವಾರಿಯಲ್ಲಿ ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ.
48 ವರ್ಷಗಳಿಂದ ಬಾಕಿ ಇದ್ದ ಗ್ರಾಮಠಾಣ ಇ-ಸ್ವತ್ತು ಪ್ರಕರಣದ ಇತ್ಯರ್ಥ:
ಚನ್ನಗಿರಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ 48 ವರ್ಷಗಳ ಹಿಂದೆ ಸ್ಥಳಾಂತರಗೊಂಡ ಆಲೂರು ಗ್ರಾಮವು ಗ್ರಾಮಠಾಣ ವ್ಯಾಪ್ತಿಗೆ ಸೇರದ ಕಾರಣ, ಇ-ಸ್ವತ್ತು ಪಡೆಯಲು ಸಾಧ್ಯವಾಗದೇ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತವಾಗಿದ್ದು, ಪ್ರಕರಣವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಜನವಸತಿ ಇದ್ದ ಜಮೀನುಗಳನ್ನು ಗ್ರಾಮಠಾಣ ಎಂದು ಭೂದಾಖಲೆಗಳಲ್ಲಿ ನಮೂದಿಸಲಾಗಿದೆ. ಹಾಗೂ ದಾವಣಗೆರೆ ತಾಲ್ಲೂಕು ಕಡ್ಲೆಬಾಳು ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುಮಾರು 40 ವರ್ಷದಿಂದ ಮಾಳಗೊಂಡನಹಳ್ಳಿಯಲ್ಲಿ ವಾಸಿಸುತ್ತಿದ್ದ ಜನವಸತಿ ಪ್ರದೇಶವನ್ನು ಗಾಮಠಾಣ ವಿಸ್ತರಣೆ ಮಾಡಿ ಅಮ್ಮತನಗರ ಗ್ರಾಮವನ್ನಾಗಿ ಇಸ್ವತ್ತು ವಿತರಣೆ ಮಾಡಲಾಗಿದೆ.
ಸ್ಮಶಾನ ಒತ್ತುವರಿ ತೆರವು:
ದಾವಣಗೆರೆ ತಾಲ್ಲೂಕು ಬೆಳವನೂರು ಗ್ರಾಮದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮಸ್ಮರ ಬೇಡಿಕೆಯಂತೆ ಬೆಳವನೂರು ಮತ್ತು ತುರ್ಚಘಟ್ಟ ಗ್ರಾಮದ ಸ್ಮಶಾನಗಳನ್ನು ಅಳತೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಿಸಿ ಗ್ರಾಮಸ್ಥರ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ಫ್ರೂಟ್ ತತ್ರಾಂಶ: ಜಿಲ್ಲೆಯ ರೈತರು ಬರ ಪರಿಹಾರದ ಇನ್ಫುಟ್ ಸಬ್ಸೀಡಿ ಪಡೆಯಲು ಜಮೀನಿನ ವಿವರವನ್ನು ಫೂಟ್ಸ್ ತತ್ರಾಂಶಕ್ಕೆ ಕಡ್ಡಾಯವಾಗಿ ದಾಖಲಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,86,330 ಪ್ಲಾಟ್ಗಳು ಇದ್ದು, ಅದರಲ್ಲಿ ಈಗಾಗಲೇ 3,61,280 ಪ್ಲಾಟ್ಗಳು ಪ್ರೂೀಟ್ಸ್ನಲ್ಲಿ ನೊಂದಾಯಿಸಲಾಗಿರುತ್ತದೆ. ಬಾಕಿ ಉಳಿದ 1,25,050 ಪ್ಲಾಟ್ ಗಳು ತತ್ರಾಂಶದಲ್ಲಿ ನೊಂದಾಯಿಸಲು ಆಂದೋಲನದ ರೀತಿಯಲ್ಲಿ ಯೋಜನೆ ರೂಪಿಸಿ ಎಲ್ಲಾ ಪ್ಲಾಟ್ ಗಳನ್ನು ಫೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಒಂದು ವಾರದಲ್ಲಿ ಉಳಿದ ಎಲ್ಲಾ ಪ್ಲಾಟ್ಗಳನ್ನು ಸೇರ್ಪಡೆ ಮಾಡಲು ಕಂದಾಯ, ಕೃಷಿ, ಪಶುಸಂಗೋಪನಾ ಇಲಾಖೆಗಳಿಂದ ಅಗತ್ಯ ಕ್ರಮವಹಿಸಲಾಗಿದೆ. ದಾವಣಗೆರೆ ಜಿಲ್ಲೆಯು ಪ್ರಸ್ತುತ ಅತಿಹೆಚ್ಚು ಪ್ಲಾಟ್ಗಳನ್ನು ನೊಂದಣಿ ಮಾಡಿದ್ದು, ಶೇಕಡವಾರು ಪ್ರಗತಿಯಲ್ಲಿ ರಾಜ್ಯದಲ್ಲಿಯೇ 3 ನೇ ಸ್ಥಾನದಲ್ಲಿರುತ್ತದೆ. ರೈತರು ತಮ್ಮ ಪ್ಲಾಟ್ಗಳನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸಲು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.