
SUDDIKSHANA KANNADA NEWS/ DAVANAGERE/ DATE:17-04-2025
ಬೆಂಗಳೂರು: ಕರ್ನಾಟಕದಲ್ಲಿ ಜಾತಿ ಗಣತಿ ವಾರ್ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಎಚ್ಚರಿಕೆ ಸಂದೇಶ
ನೀಡಿದ್ದಾರೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಸರ್ಕಾರಕ್ಕೆ ತೊಂದರೆ ಕೊಡಲು ಕೇಂದ್ರ ಸರ್ಕಾರ ಈ ಹಿಂದೆ ಸಂಚು ರೂಪಿಸಿತ್ತು. ಈಗಲೂ ರೂಪಿಸುತ್ತದೆ. ಮುಂದೆಯೂ ರೂಪಿಸಲಿದೆ. ಹಾಗಾಗಿ, ಹುಷಾರಾಗಿರುವಂತೆ ಖರ್ಗೆ ಸೂಚನೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು. ಐಟಿ, ಇಡಿ ಬಳಸಿಕೊಂಡು ಕೇಂದ್ರ ಸರ್ಕಾರವು ದಾಳಿ ನಡೆಸಬಹುದು. ಈ ಬಗ್ಗೆ ಹುಷಾರಾಗಿರಿ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಸಂಚು ರೂಪಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ದಾಳಿ ನಡೆಯಬಹುದು. ಎಚ್ಚರ ವಹಿಸಿ. ಸ್ವಲ್ಪ ಯಾಮಾರಿದರೂ ಅಪಾಯ ಎದುರಿಸುತ್ತೀರಿ ಎಂಬ ಸಂದೇಶ ರವಾನಿಸಿದ್ದಾರೆ.
ಈ ದೇಶಕ್ಕಾಗಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಮೋದಿಯವರೆ ನಿವೇನು ಮಾಡಿದ್ರಿ? ಬರೀ ಇಡಿ, ಐಟಿ ಸಂಸ್ಥೆಗಳಿಂದ ಹೆದರಿಸುತ್ತಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ವ್ಯಂಗ್ಯವಾಡಿದರು.
ಒಳ್ಳೆಯ ಕೆಲಸ ಮಾಡುವವರನ್ನು ಬಿಡದೇ ತೊಂದರೆ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಲೇ ಇದೆ. ನಿಮಗಂತೂ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ ಎಂದರೆ ಸುಮ್ಮನಿರಿ. ಕೆಲಸ ಮಾಡುವರಿಗಾದರೂ ಅವರಪಾಡಿಗೆ
ಬಿಡ್ರಪ್ಪ ಎಂದು ಹೇಳಿದ್ದಾರೆ.