Home ಕ್ರೈಂ ನ್ಯೂಸ್ ಸೂಟ್ ಕೇಸ್ ಬಗ್ಗೆ ಬಿಜೆಪಿಯವರು ದೂರು ಕೊಟ್ಟಿಲ್ಲ ಯಾಕೆ: ಡಿಸಿಎಂ ಡಿ. ಕೆ. ಶಿವಕುಮಾರ್ ಖಡಕ್ ಪ್ರಶ್ನೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸೂಟ್ ಕೇಸ್ ಬಗ್ಗೆ ಬಿಜೆಪಿಯವರು ದೂರು ಕೊಟ್ಟಿಲ್ಲ ಯಾಕೆ: ಡಿಸಿಎಂ ಡಿ. ಕೆ. ಶಿವಕುಮಾರ್ ಖಡಕ್ ಪ್ರಶ್ನೆ!

Share
ಡಿ. ಕೆ. ಶಿವಕುಮಾರ್
Share

ದಾವಣಗೆರೆ: “ಸೂಟ್ ಕೇಸ್ ವಿಚಾರವಾಗಿ ಮಾತಾಡಿರುವ ಬಿಜೆಪಿ ಮುಖಂಡ ಸದಾನಂದ ಗೌಡ ಅವರು ಇನ್ನು ಯಾಕೆ ದೂರು ನೀಡಿಲ್ಲ” ಎಂದು ಡಿಸಿಎ ಡಿ. ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಸದಾನಂದ ಗೌಡರು ಸೂಟ್ ಕೇಸ್ ಬಗ್ಗೆ ಮಾತಾಡಿದ್ದಾರೆ ಎಂದು ಗಮನ ಸೆಳೆದಾಗ, “ಸದಾನಂದ ಗೌಡರು ಪ್ರಚಾರಕ್ಕೆ ಬಂದಿದ್ದಾರಾ ಅವರು ಸೂಟ್ ಕೇಸ್ ಎಷ್ಟು ದಪ್ಪ ಇದೆ, ಎಷ್ಟು ಅಗಲವಿದೆ ಎಂದು ಲೆಕ್ಕಾಚಾರ ಹಾಕಿದ್ದಾರಾ? ಅವರು ಈ ಬಗ್ಗೆ ದೂರು ನೀಡಲಿ” ಎಂದು ಡಿಸಿಎಂ ಅವರು ತಿರುಗೇಟು ನೀಡಿದರು.

ಅಲ್ಪಸಂಖ್ಯಾತರ ಮತಗಳನ್ನು ಬಿಜೆಪಿಗೆ ಹೆಚ್ಚು ಸೆಳೆಯಿರಿ, ಶೇಕಡಾ 45 ರಷ್ಟು ಸೆಳೆಯಿರಿ ಎಂಬ ಸದಾನಂದಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ, ಅವರು ಎಲ್ಲರನ್ನೂ ಕರೆದುಕೊಳ್ಳಲಿ. ಇರುವ ಎಲ್ಲ 2.30 ಲಕ್ಷ ಮತಗಳನ್ನು ಅವರೇ ಹಾಕಿಸಿಕೊಳ್ಳಲಿ, ಬಹಳ ಸಂತೋಷ” ಎಂದು ತಿಳಿಸಿದರು.

ಸಮರ್ಥ್ ಅವರ ಕಚೇರಿಯಿಂದ ಕರೆ ಬಂದಿದ್ದು, ಬಿಜೆಪಿ ಗೆದ್ದರೆ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂಬ ಆಡಿಯೋ ಬಗ್ಗೆ ಕೇಳಿದಾಗ, “ಚುನಾವಣೆ ಸಮಯದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ, ಇವೆಲ್ಲ ಮಾಮೂಲಿ” ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *