Home ಬೆಂಗಳೂರು ಸಿಎಂ ಆಗಿ ಮುಂದುವರಿ ಎಂದ್ರೆ ಮುಂದುವರೀತಿನಿ.. ಹೈಕಮಾಂಡ್ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಒಪ್ಲೇಬೇಕು: ಸಿದ್ದರಾಮಯ್ಯ ಹೊಸ ವರಸೆ!
ಬೆಂಗಳೂರುನವದೆಹಲಿ

ಸಿಎಂ ಆಗಿ ಮುಂದುವರಿ ಎಂದ್ರೆ ಮುಂದುವರೀತಿನಿ.. ಹೈಕಮಾಂಡ್ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಒಪ್ಲೇಬೇಕು: ಸಿದ್ದರಾಮಯ್ಯ ಹೊಸ ವರಸೆ!

Share
ಸಿದ್ದರಾಮಯ್ಯ
Share

SUDDIKSHANA KANNADA NEWS/DAVANAGERE/DATE:24_11_2025

ಚಿಕ್ಕಬಳ್ಳಾಪುರ: ಹೈಕಮಾಂಡ್ ನಿರ್ಧಾರಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಒಪ್ಪಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಹೊಸ ವರಸೆ ಶುರು ಮಾಡಿದ್ದಾರೆ.

ಸಿದ್ದರಾಮಯ್ಯ

READ ASLO THIS STORY: ಮತ್ತೊಬ್ಬಳ ಜೊತೆ ಪತಿ ಸಂಪರ್ಕದಿಂದ ಬೇಸತ್ತು ಪತ್ನಿ ಆತ್ಮಹತ್ಯೆ: ಸಚಿವೆ ಪಂಕಜಾ ಮುಂಡೆ ಆಪ್ತ ಸಹಾಯಕ ಅರೆಸ್ಟ್!

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮುಖ್ಯಮಂತ್ರಿಯಾಗಿ ಮುಂದುವರಿ ಎಂದರೆ ಮುಂದುವರಿಯುತ್ತೇನೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಬದ್ಧ ಎಂದು ತಿಳಿಸಿದರು.

ಹೈಕಮಾಂಡ್ ಹೇಳಿದ ಮೇಲೆ ಮುಗಿಯಿತು. ಹೈಕಮಾಂಡ್ ಹೇಳಿದಂತೆ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ಹೇಳಿದರು.

ನಾಲ್ಕೈದು ತಿಂಗಳ ಹಿಂದೆ ಸಂಪುಟ ಪುನಾರಚನೆಗೆ ಒಪ್ಪಿದ್ದರು. ಖಾಲಿ ಇರುವ ಮೂರು ಸಚಿವ ಸ್ಥಾನ ಹುದ್ದೆ ತುಂಬುವಂತೆ ಕೇಳಿದ್ದೆ. ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ. ಅವರ ಆದೇಶ ಪಾಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಹೈಕಮಾಂಡ್ ಹೇಳಿದ ಮೇಲೆ ಮುಗಿಯಿತು. ಡಿ. ಕೆ. ಶಿವಕುಮಾರ್ ಅವರೂ ಕೇಳಬೇಕು. ಬೇರೆಯವರೂ ಪಾಲಿಸಲೇಬೇಕು. ನಮ್ಮದು ಹೈಕಮಾಂಡ್ ಇರುವ ಪಕ್ಷ. ಹಾಗಾಗಿ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *