ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಎಸ್ ಎಸ್ ಎಂ ಜನ್ಮದಿನ: ವಿಶೇಷಚೇತನರು- ಹಿರಿಯ ನಾಗರೀಕರಿಗೆ ಸಾಧನ ಸಲಕರಣೆಗಳ ವಿತರಣೆ: ಡಾ. ಪ್ರಭಾ ಮಲ್ಲಿಕಾರ್ಜುನ್

On: September 21, 2025 4:20 PM
Follow Us:
ಪ್ರಭಾ ಮಲ್ಲಿಕಾರ್ಜುನ್
---Advertisement---

SUDDIKSHANA KANNADA NEWS/ DAVANAGERE/DATE:21_09_2025

ದಾವಣಗೆರೆ; ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58 ನೇ ಜನ್ಮದಿನದ ಪ್ರಯುಕ್ತ ಎಸ್ ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗ ದಾವಣಗೆರೆ ಹಾಗೂ ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆ, ಸಿಆರ್ ಸಿ ದಾವಣಗೆರೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ದಾವಣಗೆರೆಯ ಶ್ರೀ ಸದ್ಯೋಜ್ಯಾತ ಮಠದಲ್ಲಿ ಸೆ.22 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಾಧನಸಲಕರಣೆಗಳನ್ನು ವಿತರಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ ALSO THIS STORY: ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿ ಸಸಿ ನೆಡುವ ಕಾರ್ಯಕ್ರಮ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಗಡಿಗುಡಾಳ್ ಮಂಜುನಾಥ್

ಇದೇ ಸೆಪ್ಟೆಂಬರ್‌ 10 ರಂದು ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಹಾಗೂ ಮಾಯಕೊಂಡ ವಿಧಾನಸಭಾಕ್ಷೇತ್ರದ ವಿಶೇಷಚೇತನರಿಗೆ ಮತ್ತು 60 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಯ ಮೌಲ್ಯಮಾಪನ ಶಿಬಿರ ಆಯೋಜಿಸಲಾಗಿತ್ತು.

ಈ ವೇಳೆ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿದ್ದರು.ಸಮಗ್ರ ಪರಿಶೀಲನೆಯ ನಂತರ ಆಯ್ಕೆಯಾದ‌ 343 ಅರ್ಹ ಫಲಾನುಭವಿಗಳಿಗೆ ಇಂದು ಸುಮಾರು 995 ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.

ಮೊದಲ ಹಂತದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಮತ್ತು ಮಾಯಕೊಂಡ ವಿಧನಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಬಿರ ಆಯೋಜಿಸಲಾಗಿದ್ದು, ಉಳಿದ ಐದು ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನದಿನಗಳಲ್ಲಿ ಶಿಬಿರ ನಡೆಸಲಾಗುವುದು.

ಈ ಕಾರ್ಯಕ್ರಮದಲ್ಲಿ ಅಂಧರಿಗೆ ಮೊಬೈಲ್,ವೈಬ್ರೇಟಿಂಗ್ ಸ್ಟಿಕ್ ಹಾಗೂ ಅಗ ವೀಲ್ ಚೇರ್,ತ್ರಿಚಕ್ರ ವಾಹನ ಸೇರಿದಂತೆ ಸುಮಾರು 28.82 ಲಕ್ಷ ಮೌಲ್ಯದ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ.

ಆದ್ದರಿಂದ ಅರ್ಹ ಫಲಾನುಭವಿಗಳು ಹಿಂದಿನ ಶಿಬಿರದಲ್ಲಿ ನೀಡಲಾಗಿದ್ದ ಟೋಕನ್ ನೊಂದಿಗೆ ಹಾಜರಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಸಂಸದರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಮಂಗಳವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2025: ಈ ರಾಶಿಯವರಿಗೆ ಧನ ಲಾಭ 

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

ದಾವಣಗೆರೆ

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

ದಾವಣಗೆರೆ

ದಾವಣಗೆರೆ ವಿವಿ ಅಂತರಕಾಲೇಜು ಭಾರ ಎತ್ತುವ ಸ್ಪರ್ಧೆ: ಹೊನ್ನೂರು ಗೊಲ್ಲರಹಟ್ಟಿ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

ಪ್ರಭಾ ಮಲ್ಲಿಕಾರ್ಜುನ್

ಅರಣ್ಯ ಇಲಾಖೆ ಹುದ್ದೆಗಳ ನೇರ ನೇಮಕಾತಿಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ವಿದ್ಯಾರ್ಥಿಗಳ ಮನವಿ

ಆರ್ ಎಸ್ ಎಸ್

ಆರ್ ಎಸ್ ಎಸ್ ಬ್ಯಾನ್ ವಿಚಾರಕ್ಕೆ ಕೇಸರಿ ಪಡೆ ನಿಗಿನಿಗಿ, ತಾಕತ್ತೇನೆಂದು ತೋರಿಸ್ತೇವೆ: ಬಿಜೆಪಿ ನಾಯಕರ ಸವಾಲ್!

Leave a Comment