SUDDIKSHANA KANNADA NEWS/DAVANAGERE/DATE:28_09_2025
ದಾವಣಗೆರೆ: ನಗರದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.
READ ALSO THIS STORY: ದಾವಣಗೆರೆಯಲ್ಲಿ ಸಮೀಕ್ಷೆಗೆ ಗೈರು: ಶಿಕ್ಷಕರು ಸೇರಿದಂತೆ ಮೂವರು ಸಿಬ್ಬಂದಿ ಸಸ್ಪೆಂಡ್!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಕೆಲವರು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಜನಾಂಗ, ಧರ್ಮ, ಸಮುದಾಯದವರು ಅಶಾಂತಿಗೆ ಮುಂದಾದರೆ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. 1992ರ ಘಟನೆಯಿಂದ ನಗರದಲ್ಲಿ ವ್ಯಾಪಾರ ವಹಿವಾಟುಗಳು ಹಾಳಾಗಿದ್ದು ಇನ್ನೂ ಸಹ ಚೇತರಿಸಿಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.
ಇತ್ತೀಚಿಗೆ ನಗರದಲ್ಲಿ ಅಭಿವೃದ್ಧಿ ಬರಲು ಪ್ರಾರಂಭವಾಗಿದ್ದು ಇದನ್ನು ಸಹಿಸಿಕೊಳ್ಳಲಾಗಿದೆ ಇಂತಹ ಕೃತಗಳನ್ನು ಮಾಡಲು ಹೊರಟಿದ್ದು ಶಾಂತಿ ಕೆಡಿಸಲು ಹೊರಟಿದ್ದು ಪ್ರಚೋದನಕಾರಿ ಭಾಷಣ ಮಾಡುವುದು, ಕೋಮು ಗಲಭೆಗಳನ್ನು ನಡೆಸುವುದು ಇವರ ಉದ್ದೇಶವಾಗಿದ್ದು ಯಾವುದೇ ಧರ್ಮದವರಾದರೂ ಮುಲಾಜಿಲ್ಲದೇ ಕ್ರಮ ಜರುಗಿಸಿ. ಅಶಾಂತಿಗೆ ಆಸ್ಪದ ಕೊಡಬಾರದು. ತಪ್ಪು ಮಾಡಿದವರಿಗೆ ಬುದ್ದಿ ಕಲಿಸಬೇಕು ಎಂದು ದಿನೇಶ್ ಕೆ. ಶೆಟ್ಟಿ ಹೇಳಿದರು.
ಗೋಷ್ಠಿಯಲ್ಲಿ ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್, ಆಯೂಬ್ ಪೈಲ್ವಾನ್, ಎ. ನಾಗರಾಜ್ ಮತ್ತಿತರರು ಹಾಜರಿದ್ದರು.