SUDDIKSHANA KANNADA NEWS/ DAVANAGERE/DATE:30_08_2025
ದಾವಣಗೆರೆ: ಶಿಕ್ಷಕರೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿ 22 ಲಕ್ಷದ 40 ಸಾವಿರ ರೂಪಾಯಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
READ ALSO THIS STORY: BIG BREAKING: ದಾವಣಗೆರೆಯ ಮಟ್ಟಿಕಲ್ ಫ್ಲೆಕ್ಸ್ ವಿವಾದ: ಪಿಎಸ್ಐ ಸಚಿನ್ ಸೇರಿ ಮೂವರ ಸಸ್ಪೆಂಡ್!
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕಲೂರಿನ ಹೊಸಳ್ಳಿ ಗ್ರಾಮದ ಬೇಕರಿ ಕೆಲಸ ಮಾಡುತ್ತಿದ್ದ ಮಧುಕುಮಾರ್ (38) ಬಂಧಿತ ಎರಡನೇ ಆರೋಪಿ. ಆರೋಪಿಯ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. 16 ಅಕೌಂಟ್ ಗಳು ಪತ್ತೆಯಾಗಿವೆ. ಅಶ್ರಫ್ ಎಂಬಾತನ ಜೊತೆ ಸೇರಿಕೊಂಡು ಕರ್ನಾಟಕ ಸೇರಿ ವಿವಿಧೆಡೆ 10 ಕಡೆಗಳಲ್ಲಿ ಇದೇ ರೀತಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ:
2025ರ ಮಾರ್ಚ್ 12ರಂದು ಶಿಕ್ಷಕರೊಬ್ಬರು ಶಾಲೆಯಲ್ಲಿರುವಾಗ ಬೆಳಿಗ್ಗೆ 9..30ಕ್ಕೆ +9672786862 ನಂಬರ್ ನಿಂದ ಕರೆ ಮಾಡಿ ನಾನು ಬ್ಲೂ ಡಾಟ್ ಕೋರಿಯಾರ್ ಸರ್ವಿಸ್ ಮುಂಬೈಯಿ ಎಂದು ಪರಿಚಯಿಸಿಕೊಂಡು ನಿಮ್ಮ
ಫೆಡಕ್ಸ್ ಕೊರಿಯರ್ ನಲ್ಲಿ ಕೆಲವು ಔಷಧಗಳು ಮುಂಬೈನಿಂದ ದುಬೈಗೆ ಪಾರ್ಸಲ್ ಹೋಗುತ್ತಿವೆ. ಅದರಲ್ಲಿ ಡ್ರಗ್ಸ್ ಕೂಡ ಇದೆ ಎಂದು ಹೆದರಿಸಿದ್ದರು.
ನಿಮ್ಮ ಗುರುತುದುರುಪಯೋಗಪಡಿಸಿಕೊಂಡಿರುವುದಾಗಿ ಹೇಳಿ ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ನಂತರ ಆಧಾರ ಕಾರ್ಡ್ ಮತ್ತು ಇ ಮೇಲ್ ಐಡಿಯನ್ನು ಹಾಕಿಸಿಕೊಂಡು, 8983204966 ವಾಟ್ಸ್ ಆಪ್ ಕಾಲ್ ನಲ್ಲಿ ಡಿಸಿಪಿ ಮೇಡಂ ಮಾತನಾಡುತ್ತಿರುವುದಾಗಿ ಹೇಳಿದ್ದ ನರೇಶ್ ಗೊಯಿಲ್ ಅನ್ನುವ ವ್ಯಕ್ತಿ ಮನಿಲ್ಯಾಂಡರಿಂಗ್ ಮಾಡುತ್ತಿದ್ದಾನೆ ಆ ಕೇಸಿನಲ್ಲಿ ನೀವು ಕೂಡ ಇದಿರಾ. ಕೆನರಾ ಬ್ಯಾಂಕ್ ಮುಂಬೈಯಲ್ಲಿ ನಿಮ್ಮ ಆಕೌಂಟ್ ಇದೆ. ಇದರ ಎಟಿಎಂ ಕಾರ್ಡ್ ನರೇಶ ಗೋಯಿಲ್ ಹತ್ತಿರ ಸಿಕ್ಕಿದೆ. ಪ್ರತಿ ತಿಂಗಳು 20 ಲಕ್ಷ ನಿಮ್ಮ ಖಾತೆಗೆ ಬರುತ್ತಾ ಇದೆ ನಿಮ್ಮ ಖಾತೆಯಲ್ಲಿರುವ ಹಣ ಲೀಗಲ್ ಅಥಾವ ಅನಧಿಕೃತ ಎಂದು ಚೆಕ್ ಮಾಡಬೇಕು. ನಾವು ಕಳುಹಿಸಿದ ಎರಡು ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಎಂದು ಹೇಳಿ ನನ್ನ ಖಾತೆಯಿಂದ ರೂ 22,40,000 ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುತ್ತಾರೆಂದು ಹೇಳಿ ಸೈಬರ್ ಪೊಲೀಸ್ ಠಾಣೆಗೆ ಶಿಕ್ಷಕರು ದೂರು ನೀಡಿದ್ದರು.
ಪೊಲೀಸರು ಈಗಾಗಲೇ ಪ್ರಕರಣದ ಮೂರನೇ ಆರೋಪಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರುಣ್ ಕುಮಾರ್ (35) ಬಂಧಿಸಿದ್ದು, ಈತನನ್ನು ವಿಚಾರಣೆಗೆ ಒಳಪಡಿಸಿದ್ದರು. ಎರಡನೇ ಆರೋಪಿ ಬಗ್ಗೆ ಬಾಯ್ಬಿಟ್ಟಿದ್ದ. ಪ್ರಕರಣದ
2ನೇ ಆರೋಪಿಯಾದ ಮಧುಕುಮಾರ್ ಮತ್ತಷ್ಟು ಮಾಹಿತಿ ಪೊಲೀಸರಿಗೆ ನೀಡಿದ್ದಾನೆ. ಪ್ರಕರಣದ ಮೊದಲ ಆರೋಪಿ ಆಶ್ರಫ್ ನಾಪತ್ತೆಯಾಗಿದ್ದು, ಈತನ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಯವರಾದ ಅಶೋಕ, ನಿಜಲಿಂಗಪ್ಪ, ಮುತ್ತುರಾಜ್, ಲೋಹಿತ್, ಯೋಗೀಶ್ ನಾಯ್ಕ ಅವರನ್ನು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.