SUDDIKSHANA KANNADA NEWS/ DAVANAGERE/DATE:25_08_2025
ದಾವಣಗೆರೆ: ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ನೂರಾರು ರೈತರು ನೂರಾರು ಕುರಿಗಳೊಂದಿಗೆ ತಹಶೀಲ್ದಾರ್ ಕಚೇರಿಯ ಮುಂಭಾಗ ಕುರಿ ಸಾಕಣೆದಾರರು ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆ ಕೂಗುತ್ತಾ
ಪ್ರತಿಭಟನೆ ನಡೆಸಿದರು.
ಈ ಸುದ್ದಿಯನ್ನೂ ಓದಿ: ಹಸಿದವರಿಗೆ ಆಹಾರ, ಸಾಲದಿಂದ ಕುಟುಂಬಗಳ ಮುಕ್ತಿ ಕೊಟ್ಟ ಧರ್ಮಸ್ಥಳ: ವಿವಾದ ಸೃಷ್ಟಿಸಿರುವ ನಿಜವಾದ ಶಕ್ತಿಗಳು ಯಾವುವು?
ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ಸರ್ವೇ ನಂಬರ್ 32 ರಲ್ಲಿ ಸಿವಿಲ್ ನ್ಯಾಯಾಲಯದ ಕಟ್ಟಡಕ್ಕೆ ಭೂಮಿಯನ್ನು ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೆತೃತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಎಂ.ಆರ್.ಮಹೇಶ್ ಮಾತನಾಡಿ ಹಲವಾರು ವರ್ಷಗಳಿಂದ ಗ್ರಾಮಸ್ಥರು ಹೈನುಗಾರಿಕೆ, ಕುರಿ ಸಾಕಣೆಯಿಂದ ರೈತರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರೆ , ಹಲವಾರು ಕುಟುಂಬಗಳಿಗೆ ಇಂದಿಗೂ ನಿವೇಶನವಿಲ್ಲ ಬಾಡಿಗೆಯ ಮನೆಗಳಲ್ಲಿ ಜೀವನ ನಡೆಸುತ್ತಿದ್ದಾರೆ ಅಲ್ಲದೇ ಇದೇ ಜಾಗದಲ್ಲಿ 35 ವರ್ಷಗಳಿಂದ ಅನುಭೋಗದಲ್ಲಿದ್ದು 2017 ರಿಂದ ನಿವೇಶನಕ್ಕಾಗಿ, ಕಳೆದ 6 ತಿಂಗಳ ಹಿಂದೆ ಗ್ರಾಮ ಸಭೆಯನ್ನು ನಡೆಸಿ 300 ಜನರು ಅರ್ಜಿಗಳನ್ನು ಹಾಕಿ ಕಾಯುತ್ತಿದ್ದಾರೆ. ಆದರೆ ಇದೀಗ ಸರ್ವೆ ನಂಬರ್‌ನಲ್ಲಿ 32 ರಲ್ಲಿ ನ್ಯಾಯಾಲಯಕ್ಕೆ, ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಲು ಭೂಮಿ ನೀಡಲು ಹೋಗುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಬೇಕಾದರೆ ನ್ಯಾಮತಿ ಪಟ್ಟಣದ ಹತ್ತಿರ ಸರಕಾರ ಭೂಮಿಯನ್ನು ಖರೀದಿಸಿ ಕಟ್ಟಡ ನಿರ್ಮಾಣ ಮಾಡಲಿ. ಗ್ರಾಮದಲ್ಲಿ ಮಾಡುವುದರಿಂದ ಕಕ್ಷಿದಾರರಿಗೆ , ಸಾರ್ವಜನಿಕರಿಗೆ ಹೋಗಿಬರಲು ದೂರವಾಗುತ್ತದೆ. ಇಲ್ಲವೇ ದೊಡ್ಡೆತ್ತಿನಹಳ್ಳಿ ಗ್ರಾಮವನ್ನು ಪಟ್ಟಣ ಪಂಚಾಯಿತಿಗೆ ಸೇರಿಸಿ ಅಲ್ಲದೆ ತಲ ತಲಾಂತರದಿಂದ ಕುರಿಸಾಕಾಣಿಕೆಯನ್ನು ವೃತ್ತಿಯನ್ನಾಗಿಸಿಕೊಂಡು ಬಂದ ಕುರಿಗಾಯಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಕೂಡಲೇ ತಾಲೂಕು ಆಡಳಿತ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ಗ್ರಾಮದ ಮುಖಂಡ ಗುಡದಯ್ಯ ಮಾತನಾಡಿ ಗ್ರಾಮದಲ್ಲಿ 5 ಸಾವಿರ ಕುರಿ, ಜಾನುವಾರುಗಳು ಇದ್ದು ಇದರ ಬಗ್ಗೆ ಮಾಹಿತಿ ಗೊತ್ತಿದ್ದರೂ ಗ್ರಾಮ ಆಡಳಿತಾಧಿಕಾರಿ ವಿಜಯಕುಮಾರ್ ಗ್ರಾಮದ ಜನರಿಗೆ ಮಾಹಿತಿ ವಂಚನೆ ಮಾಡಿ ನ್ಯಾಯಾಲಯದ ಕಟ್ಟಡಕ್ಕೆ ಭೂಮಿಯನ್ನು ನೀಡಲು ಸಿದ್ದಪಡಿಸಿದ್ದಾರೆ. ಇಲ್ಲಿ ಯಾವುದೇ ಕಾರಣಕ್ಕೂ ನಮ್ಮ ಭೂಮಿ ನಮ್ಮ ಹಕ್ಕು ನಮ್ಮ ಜೀವ ಹೋದರು ನ್ಯಾಯಾಲಯ, ಆಸ್ಪತ್ರೆಗೆ ಭೂಮಿಯನ್ನು ನೀಡಲು ಬಿಡುವುದಿಲ್ಲ. ಗ್ರಾಮ ಆಡಳಿತಾಧಿಕಾರಿ ವಿಜಯಕುಮಾರ್ ಗ್ರಾಮದ ಕುರಿಗಾಹಿಗಳ ಮೇಲೆ ಮೇಲೆ ಆವಾಚ್ಯ ಶಬ್ದಗಳು, ಜಾತಿ ನಿಂದನೆ, ಹಲ್ಲೆಗೆ ಯತ್ನಿಸಿದ್ದಾರೆ. ಈ ಕೂಡಲೇ ನೌಕರಿಯಿಂದ ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಮಸ್ಥರಿಂದ ಮನವಿ ಪತ್ರ ಸ್ವೀಕಾರಿಸಿದ ತಹಶೀಲ್ದಾರ್ ಕವಿರಾಜ್ ಎಂ.ಪಿ. ಮಾತನಾಡಿ 2017 ರಲ್ಲಿ ಸ.ನಂ.32 ರಲ್ಲಿ 9.30 ಎಕರೆ ಭೂಮಿಯನ್ನು ಪರಿಶಿಷ್ಟ ಪಂಗಡ ಮುರಾರ್ಜಿ ದೇಸಾಯಿ ವಸತಿ ಶಾಲೆಗಾಗಿ ಕಾಯ್ದಿರಿಸಲಾದ ಭೂಮಿಯನ್ನು
ರದ್ದುಪಡಿಸಿ ಸಿವಿಲ್ ನ್ಯಾಯಾಲಯದ ಕಟ್ಟಡಕ್ಕೆ 5 ಎಕರೆ ಭೂಮಿಯನ್ನು , 4.30 ಎಕರೆಯ ಭೂಮಿಯನ್ನು ಪಹಣಿ ದಾಖಲೆಯಂತೆ ಊರು ದನಗಳಿಗೆ ಮುಪತ್ತು ಎಂದು ಹಕ್ಕು ದಾಖಲಿಸಲಾಗಿದೆ. ನಮ್ಮ ಗ್ರಾಮಸ್ಥರಿಗೆ ನಿವೇಶನ ನೀಡುವಂತೆ ಒತ್ತಾಯಿಸಿದಾಗ ನಿಮ್ಮ ಮನವಿಯನ್ನು ಇವತ್ತಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸುಜಾತ, ನೀಲಮ್ಮ, ಗುರುಮೂರ್ತಿ, ಕುಂಕುವದ ಸಿದ್ದೇಶ್, ಶಿವಮ್ಮ, ಲೋಹಿತ್, ಪಾಟೀಲ್, ಚಿಕ್ಕಸ್ವಾಮಿ, ರಾಜಪ್ಪಕೋರಿ, ಕೋರಿಚಿಕ್ಕಪ್ಪ ಸೇರಿದಂತೆ ಇತರರು ಇದ್ದರು.