SUDDIKSHANA KANNADA NEWS/ DAVANAGERE/ DATE:28-12-2023
ದಾವಣಗೆರೆ (Davanagere): ಈಗ ಹುಡುಗಿಯರು ಮದುವೆಯಾಗಲು ಸಿಗೋಲ್ಲ ಎಂಬ ಕೊರಗು ಇದೆ. ಎಷ್ಟೋ ಮಂದಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ವಧು- ವರಾನ್ವೇಷಣಾ ಕೇಂದ್ರಕ್ಕೆ ಅಲೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೆಣ್ಣು ಸಿಗುತ್ತಿಲ್ಲವಲ್ಲಾ ಎಂಬ ಕೊರಗು ಇದ್ದೇ ಇದೆ. ಆದ್ರೆ, ಇಲ್ಲೊಬ್ಬಳು ಕಿಲಾಡಿ ಲೇಡಿ ನಾಲ್ಕು ಮದುವೆಯಾಗಿ ವಂಚಿಸಿದ ಆರೋಪ ಕೇಳಿ ಬಂದಿದೆ.
ಅಂದ ಹಾಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿರುವಾಕೆಯ ಹೆಸರು ಸ್ನೇಹಾ ಅಲಿಯಾಸ್ ನಿರ್ಮಲಾ. ದಾವಣಗೆರೆ ಮೂಲದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದ ಆಕೆ ಕಾಣೆಯಾಗಿದ್ದಳು. ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆಯಿಸಿದಾಗ ವ್ಯಕ್ತಿಗೆ ಶಾಕ್ ಕಾದಿತ್ತು. ಸ್ನೇಹಾ ಮಂಡ್ಯ ಜಿಲ್ಲೆಯ ನರಹಳ್ಳಿ ನಿವಾಸಿ. ಪ್ರಶಾಂತ್ ನನ್ನು ಮದುವೆಯಾಗುವ ಮುನ್ನ ಆಕೆ ಇನ್ನಿಬ್ಬರನ್ನು ಮದುವೆಯಾಗಿದ್ದಳು ಎನ್ನಲಾಗಿದೆ.

ಏನಾಯ್ತು…?
ನಗರದ ಕೆಟಿಜೆ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪ್ರಶಾಂತ್ ಎಂಬುವವರು ದೂರು ದಾಖಲಿಸಿದ್ದರು. ನನ್ನ ಪತ್ನಿ ಕಾಣುತ್ತಿಲ್ಲ, ಹುಡುಕಿಕೊಡಿ ಎಂದು ದೂರು ಕೊಟ್ಟಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನಿರ್ಮಲಾ
ಅಲಿಯಾಸ್ ಸ್ನೇಹಾ ಅವರನ್ನು ಠಾಣೆಗೆ ಕರೆಯಿಸಿದ್ದಾರೆ. ಠಾಣೆಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಸ್ನೇಹಾ ಅಲಿಯಾಸ್ ನಿರ್ಮಲಾ ತನಗನಿಸಿದ್ದನ್ನು ಹೇಳಿದ್ದಾಳೆ. ಆ ಬಳಿಕ ಪ್ರಶಾಂತ್ ಮಾಧ್ಯಮದವರ ಜೊತೆ ಮಾತನಾಡುತ್ತಾ ಆಕೆಗೆ
ನಾಲ್ಕು ಮದುವೆಯಾಗಿವೆ ಎಂಬ ಆರೋಪ ಮಾಡಿದ್ದಾನೆ.
ಗೊತ್ತಾಗಿದ್ದು ಹೇಗೆ…?
ಸಾಮಾಜಿಕ ಜಾಲತಾಣ ಹಾಗೂ ಇನ್ ಸ್ಟಾಗ್ರಾಂನ ಗೀಳು ಹಚ್ಚಿಕೊಂಡಿದ್ದ ಈಕೆಯು ಬೇರೆಯೊಬ್ಬನ ಜೊತೆ ಸಪ್ತಪದಿ ತುಳಿದಿರುವುದು ಈತನ ಗಮನಕ್ಕೆ ಬಂದಿದೆ. ಈಕೆಯು ಮದುವೆಯ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ
ಶೇರ್ ಮಾಡಿದ್ದು, ಆ ಬಳಿಕ ರಘು ಎಂಬಾತನ ಜೊತೆ ಮದುವೆಯಾಗಿರುವುದು ಪ್ರಶಾಂತ್ ಗಮನಕ್ಕೆ ಬಂದಿದೆ.
ಮೂರು ತಿಂಗಳ ಹಿಂದೆಯಷ್ಟೇ ನಾನು ಗರ್ಭವತಿಯಾಗಿದ್ದು, ತವರು ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಸ್ನೇಹಾ ಅಲಿಯಾಸ್ ನಿರ್ಮಲಾ ಕಣ್ಮರೆಯಾಗಿದ್ದಳು. ಆಕೆಯ ಪೋಷಕರಿಗೆ ಕೇಳಿದರೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ
ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
Read Also This Story:
ಅಡಿಕೆ (Nut)ಗೆ ಬರುತ್ತಿದೆ ಚಿನ್ನದ ಬೆಲೆ: ಕಾಪಾಡಿಕೊಳ್ಳುವುದೇ ಬೆಳೆಗಾರರಿಗೆ ಸವಾಲು, ಕಣ್ಗಾವಲಿನ ನಡುವೆಯೂ ಕಳ್ಳರ ಕೈಚಳಕ…!
ಪ್ರಶಾಂತ್ ಮದುವೆಯಾದ ಬಳಿಕ ಮತ್ತೊಬ್ಬನ ಜೊತೆ ಮದುವೆಯಾಗಿರುವುದು ಪತ್ತೆಯಾಗಿದೆ. ಮದುವೆಯಾಗಿ ನಾವು ಒಂದೂವರೆ ವರ್ಷ ಆಗಿತ್ತು. ಗರ್ಭಪಾತ ಮಾಡಿಸಿ ಬೇರೆ ವ್ಯಕ್ತಿಯ ಜೊತೆ ಮದುವೆಯಾಗಿರುವುದು ಗೊತ್ತಾಗಿದ್ದು, ನ್ಯಾಯ
ದೊರಕಿಸಿಕೊಡಬೇಕು ಎಂದು ಪ್ರಶಾಂತ್ ದೂರಿನಲ್ಲಿ ಮನವಿ ಮಾಡಿದ್ದ.
ಪ್ರಶಾಂತ್ ಗೆ ಪರಿಚಯವಾಗಿದ್ದು ಹೇಗೆ…?
ರೈಲಿನಲ್ಲಿ ಹೋಗುವಾಗ ಸ್ವೇಹಾ ಅಲಿಯಾಸ್ ನಿರ್ಮಲಾಳು ಪ್ರಶಾಂತ್ ಗೆ ಪರಿಚಯವಾಗಿದ್ದಾಳೆ. ಆ ಬಳಿಕ ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ಪರಸ್ಪರ ಚಾಟಿಂಗ್, ಮೆಸೇಜ್, ಕರೆ ಮಾಡುತ್ತಾ ಕಾಲ ಕಳೆದಿದ್ದಾರೆ. ಆ ಬಳಿಕ ಮದುವೆಯಾಗುವ
ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆ ನಂತರ ಒಂದೂವರೆ ವರ್ಷ ಸಂಸಾರವನ್ನೂ ಮಾಡಿದ್ದಾರೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎಂದುಕೊಂಡಾಗ ಸ್ನೇಹಾ ಅಲಿಯಾಸ್ ನಿರ್ಮಲಾ ಕೈ ಕೊಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ರಘು ಎಂಬಾತನ ಜೊತೆ ವಿವಾಹ ಆಗಿರುವ ಕುರಿತಂತೆ ಫೋಟೋಗಳು ಸಿಕ್ಕಿವೆ. ನನಗಿಂತ ಮೊದಲು ಇಬ್ಬರು ಪುರುಷರನ್ನು ಮದುವೆಯಾದ ಕಾರಣ ಆಕೆಗೆ ನಾನು ಮೂರನೇ ಪತಿಯಾಗಿದ್ದೆ. ಈಗ ಮತ್ತೊಬ್ಬ ವ್ಯಕ್ತಿಯನ್ನು
ಮದುವೆಯಾಗಿದ್ದಾಳೆ. ನಾನು ಅವಳನ್ನು ಮದುವೆಯಾಗುವಾಗ ಈ ವಿಚಾರ ನನಗೆ ಗೊತ್ತಿರಲಿಲ್ಲ. ಕುಟುಂಬದವರೂ ಹೇಳಿಲ್ಲ. ಈ ಮೊದಲೇ ಮದುವೆಯಾಗಿರುವುದಾಗಿ ಆಕೆಯ ಸಂಬಂಧಿಕರಿಂದ ನನಗೆ ತಿಳಿದು ಬಂದಿತ್ತು ಎಂದು
ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಮತ್ತೆ ಮೋಸ ಹೋಗಬೇಡಿ:
ಇನ್ ಸ್ಟಾಗ್ರಾಂನ ತೀರಾ ಹುಚ್ಚು ಹಚ್ಚಿಕೊಂಡಿರುವ ಈಕೆ ಅದರಲ್ಲಿಯೇ ಸಕ್ರಿಯಳಾಗಿರುತ್ತಾಳೆ. ಅಲ್ಲಿಯೇ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ತೆಗೆದುಕೊಂಡು ಆಮೇಲೆ ಮದುವೆಯಾಗಿ ಮತ್ತೆ ಹೋಗುತ್ತಾಳೆ. ಈಗ ಮದುವೆಯಾಗದಿರುವ ಯುವಕರು ಹುಡುಗಿ ಸಿಕ್ಕರೆ ಸಾಕು ಎಂಬ ಸ್ಥಿತಿಯಲ್ಲಿದ್ದು, ಇದನ್ನೇ ಇಂಥವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಮೋಸ ಹೋಗುತ್ತೀರಾ ಹುಷಾರಾಗಿರಿ ಯುವಕರೇ, ಪುರುಷರೇ ಎನ್ನುತ್ತಿದ್ದಾರೆ ಪ್ರಶಾಂತ್.