SUDDIKSHANA KANNADA NEWS/ DAVANAGERE/DATE:11_08_2025
ದಾವಣಗೆರೆ: ಧರ್ಮಸ್ಥಳ ಲಕ್ಷಾಂತರ ಸದ್ಭಕ್ತರ ಪುಣ್ಯಸ್ಥಳ. ಶತಮಾನಗಳ ಇತಿಹಾಸದ ಪರಂಪರೆಯಲ್ಲಿ ನೇತ್ರಾವತಿಯ ತಟದಲ್ಲಿ ನೆಲೆಯಾದ ಮಂಜುನಾಥ ಸ್ವಾಮಿಯ ಆರಾಧನೆಯಲ್ಲಿ, ಸಾವಿರಾರು ಸಾಮಾಜಿಕ ಕಾರ್ಯಗಳ ಮೂಲಕ ಜಗತ್ ಪ್ರಸಿದ್ಧಿಯನ್ನ ಕಂಡ ಕ್ಷೇತ್ರ ಈಗ ವಿವಾದಗಳ ಸುಳಿಯಲ್ಲಿ ಸಿಲುಕಿರುವುದು ಭಕ್ತ ಕೋಟಿಗೆ ಅರಗಿಸಲಾಗದಷ್ಟು ನೋವಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕರಾವಳಿ ಮಿತ್ರ ಮಂಡಳಿ ಸಭೆ ಕರೆದಿದೆ.
READ ALSO THIS STORY: HDFC, SBI ಸೇರಿ 11 ಬ್ಯಾಂಕ್ ಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು? ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ
ಆಗಸ್ಚ್ 12ರ ಬೆಳಗ್ಗೆ ನಗರದ ರೋಟರಿ ಬಾಲಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕರ ಸಭೆ ಕರೆಯಲಾಗಿದೆ. ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಭೆಗೆ ಕರಾವಳಿ, ಸ್ಥಳೀಯರು, ಸಾರ್ಜಜನಿಕರು, ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಬೇಕೆಂದು ದಿನೇಶ್ ಕೆ. ಶೆಟ್ಟಿ ಮನವಿ ಮಾಡಿದ್ದಾರೆ. ಸಭೆಗೆ ಆಗಮಿಸುವಂತೆ ಕರಾವಳಿ ಮಿತ್ರಮಂಡಳಿಯ ಪದಾಧಿಕಾರಿಗಳಾದ ಅಂಕಿತ್ ಹಾಗೂ ಮಹೇಶ್ ಶೆಟ್ಟಿ ಸಂಕಲ್ಪ ಫೌಂಡೇಶನ್ ಮಾಂತೇಶ್ ರಿದ್ದಿ -ಸಿದ್ದಿ ಫೌಂಡೇಶನ್ ರಾಜು ಭಂಡಾರಿ, ಶ್ರೀಕಾಂತ್ ಬಗೆರ, ಯುವ ಮುಖಂಡರಾದ ಸಾಗರ್ ಎಲ್ ಎಮ್ ಎಚ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.