ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸರ್ವಜನಾಂಗದ ಶಾಂತಿಯ ನಾಯಕ, ಬೆಣ್ಣೆನಗರಿ ಜನರ ಹೃದಯದಲಿ ನೆಲೆಸಿದ ಧಣಿ ಮಲ್ಲಣ್ಣ: ಗಡಿಗುಡಾಳ್ ಮಂಜುನಾಥ್

On: September 21, 2025 8:52 PM
Follow Us:
---Advertisement---

ಜಿ. ಎಸ್. ಮಂಜುನಾಥ್ ಗಡಿಗುಡಾಳ್, ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧಪಕ್ಷದ ಮಾಜಿ ನಾಯಕರು, ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು

ಸರ್ವಜನಾಂಗದ ಶಾಂತಿಯ ನಾಯಕ. ಬೆಣ್ಣೆನಗರಿಯ ಜನರ ಹೃದಯದಲಿ ನೆಲೆಸಿದ ಧಣಿ. ಅಭಿವೃದ್ಧಿಗಾಗಿ ಸದಾ ಹಾತೊರೆಯವ ಮನ. ಜನರಿಗಾಗಿ, ಜನರಿಂದ, ಜನರಿಗೋಸ್ಕರ ಯಾವಾಗಲೂ ಚಿಂತಿಸುವ, ಹಿಡಿದ ಕೆಲಸ ಮುಗಿಸುವವರೆಗೆ ವಿರಮಿಸದ ಛಲದಂಕರು. ಅಧಿಕಾರ ಬರಲಿ, ಬಾರದಿರಲಿ ಜನರ ಸೇವೆ ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಅಪರೂಪದ ಅಪರೂಪದ ನಾಯಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು.

ದಾವಣಗೆರೆ ಜಿಲ್ಲೆಯಾಗಿ ಇನ್ನೂ ಮೂರು ದಶಕಗಳಾಗಿಲ್ಲ. ಆಗಲೇ ಐದು ದಶಕಗಳ ಕಾಲ ಜಿಲ್ಲೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯಲು ಪ್ರಮುಖ ಕಾರಣ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು
ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೊಂದಿರುವ ದೂರದೃಷ್ಟಿತ್ವದ ಅಭಿವೃದ್ಧಿಯ ಪರಿಕಲ್ಪನೆ. ಈ ಮಾನದಂಡವನ್ನಿಟ್ಟುಕೊಂಡು ಅಭಿವೃದ್ಧಿಪಥದಲ್ಲಿ ಕೊಂಡೊಯ್ದಿರುವ ಮಲ್ಲಿಕಾರ್ಜುನ್ ಅವರು ಅತ್ಯಂತ ಕಡಿಮೆ
ಅವಧಿಯಲ್ಲಿ ಅತಿ ಹೆಚ್ಚು ಕೆಲಸ ಮಾಡಿ ಜನರ ಹೃದಯದಲಿ ನೆಲೆಸಿದ ಧಣಿ ಆಗಿದ್ದಾರೆ.

ಶೈಕ್ಷಣಿಕ, ಆರ್ಥಿಕ, ವೈದ್ಯಕೀಯ ರಂಗಗಳಲ್ಲಿ ಮುಂಚೂಣಿಯಲ್ಲಿರುವ ದಾವಣಗೆರೆಯು ಯಾವಾಗಲೂ ರಾಜಕಾರಣಿಗಳ ಅದೃಷ್ಟದ ನೆಲ. ಆದ್ರೆ, ದಾವಣಗೆರೆ ಜಿಲ್ಲೆಯ ಜನ ಎಸ್. ಎಸ್. ಮಲ್ಲಿಕಾರ್ಜುನ್ ಅವರಂಥ ಅಭಿವೃದ್ಧಿ ಕಾಳಜಿಯುಳ್ಳ
ನಾಯಕನನ್ನು ಪಡೆದಿರುವುದು ಅದೃಷ್ಟವೇ ಸರಿ. ಯಾವುದೇ ಸರ್ಕಾರ ಇರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ, ಜನರ ಸಮಸ್ಯೆ ಎಂದಾಕ್ಷಣ ಅಲ್ಲಿ ಮಲ್ಲಿಕಾರ್ಜುನ್ ಅವರು ಇರುತ್ತಾರೆ. ಹಿಡಿದ ಕೆಲಸ ಮಾಡದೇ ಬಿಡುವುದಿಲ್ಲ. ಅದು ಸಣ್ಣದಾದರೂ ಸರಿ. ದೊಡ್ಡ ಕೆಲಸವಾದರೂ ಸರಿ. ಇದಕ್ಕೆ ಉತ್ತಮ ಉದಾಹರಣೆ ಇಂದಿಗೂ ರಾಜ್ಯದ ಜನರ ಗಮನ ಸೆಳೆಯುತ್ತಿರುವ ಗ್ಲಾಸ್ ಹೌಸ್. ಬೇರೆ ಜಿಲ್ಲೆಗೆ ಹೋಗುವುದನ್ನು ತಪ್ಪಿಸಿ ದಾವಣಗೆರೆಯಲ್ಲಿಯೇ ಉಳಿಯುವಂತೆ ಮಾಡಿದ ಕೀರ್ತಿ ಮಲ್ಲಣ್ಣ ಅವರಿಗೆ ಸಲ್ಲುತ್ತದೆ.

ಪಂಚಾಪೀಠಾಧ್ಯಕ್ಷರ ಒಗ್ಗೂಡುವಿಕೆ: ಎಸ್ ಎಸ್ ಎಂ ಪಾತ್ರ

ದಾವಣಗೆರೆ: ನಗರದ ಅಭಿನವ ರೇಣುಕಾ ಮಂದಿರದಲ್ಲಿ ಪಂಚಪೀಠಾಧ್ಯಕ್ಷರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಇದಕ್ಕೆ ಪ್ರಮುಖ ಕಾರಣ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರೇ ಸೂತ್ರಧಾರರು. ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು. ಈ ಮೂಲಕ ವೀರಶೈವ ಲಿಂಗಾಯತ ಸಮುದಾಯ ಒಂದಾಗಬೇಕೆಂಬ ಹಲವು ವರ್ಷಗಳ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊದಲ ಯಶಸ್ವಿ ಕಾರ್ಯಕ್ರಮವೂ ಆಯಿತು.

ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು, ಉಜ್ಜಯನಿ ಸದ್ಧರ್ಮ ಪೀಠದ ಶ್ರೀ ಜಗದ್ಗುರುಗಳಾದ ಪರಮಪೂಜ್ಯ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಶ್ರೀಗಳು, ಶ್ರೀ ಕಾಶಿ ಜ್ಞಾನ ಪೀಠ ಪೂಜ್ಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಶ್ರೀಗಳು, ಶ್ರೀಶೈಲ ಮಹಾಸಂಸ್ಥಾನ ಪೀಠದ ಪರಮ ಪೂಜ್ಯರಾದ ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಶಿವಾಚಾರ್ಯ ಶ್ರೀಗಳು, ಪರಮಪೂಜ್ಯ ರೇಣುಕ ಶಿವಾಚಾರ್ಯ ಶ್ರೀಗಳು ಒಂದೇ ವೇದಿಕೆಯಲ್ಲಿ ಕಾಣಸಿಗುವುದು ತುಂಬಾನೇ ಅಪರೂಪ. ಇಂಥ ಅಮೂಲ್ಯ ಅಪೂರ್ವ ಗಳಿಗೆಗೆ ಕಾರಣವಾಗಿದ್ದೇ ಮಲ್ಲಿಕಾರ್ಜುನ್ ಅವರ ಪ್ರಯತ್ನ.

ಸರ್ವಜನಾಂಗದ ಶಾಂತಿಯ ನಾಯಕ:

ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಎಸೆದಾಗ ಕೂಡಲೇ ದಾವಣಗೆರೆ ನಿಯಂತ್ರಣಕ್ಕೆ ತರಲು ಕಾರಣ ಮಲ್ಲಿಕಾರ್ಜುನ್ ಅವರ ದಿಟ್ಟ ನಿರ್ಧಾರ. ಯಾರೇ ತಪ್ಪು ಮಾಡಿದ್ದರೂ ಬಿಡಬೇಡಿ ಎಂಬ ಸೂಚನೆ ಪೊಲೀಸ್ ಇಲಾಖೆಗೆ ನೀಡಿದ್ದರು. ಅದೇ ರೀತಿಯಲ್ಲಿ ಈ ವರ್ಷವೂ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಉಳಿದೆಲ್ಲವೂ ಶಾಂತಿಯುತವಾಗಿದೆ. ಎಲ್ಲಾ ಸಮುದಾಯದವರು ಸಹೋದರರಂತೆ ಬದುಕಬೇಕು, ಅವರವರ ಆಚರಣೆ ಇಷ್ಟದಂತೆ ಆಚರಿಸಬೇಕೇ ವಿನಾಃ ಬೇರೆಯವರಿಗೆ ತೊಂದರೆ ಕೊಡಬಾರದು. ಎಲ್ಲರೂ ಖುಷಿಯಿಂದ, ಯಾವುದೇ ಗಲಾಟೆಗಳಿಲ್ಲದೇ, ಸಹೋದರತ್ವ ಭಾವನೆಯಿಂದ ಆಚರಿಸಬೇಕೆಂಬ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸರ್ವಜನಾಂಗದ ಶಾಂತಿಯ ನಾಯಕ ಎನಿಸಿಕೊಂಡಿರುವ ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ಶಾಂತಿಭಂಗದಂಥ ದುಷ್ಕೃತ್ಯ ನಡೆಯಲು ಅವಕಾಶ ನೀಡಲಿಲ್ಲ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಅಂಬರೀಷ್ ಸೇರಿ ಹಲವರ ಆಪ್ತಮಿತ್ರ:

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಂದಿಗೂ ಸೇಡಿನ ರಾಜಕಾರಣ ಮಾಡಿದವರಲ್ಲ. ದಿವಗಂತ ಅಂಬರೀಷ್ ಅವರಿಗೆ ಮಲ್ಲಿಕಾರ್ಜುನ್ ಅವರ ಮೇಲೆ ಎಲ್ಲಿಲ್ಲದ ಪ್ರೀತಿ. ಬಸವರಾಜ್ ಬೊಮ್ಮಾಯಿ, ಎಂ. ಬಿ. ಪಾಟೀಲ್, ಜಗದೀಶ್ ಶೆಟ್ಟರ್, ಹೆಚ್. ಡಿ. ದೇವೇಗೌಡರು ಸೇರಿದಂತೆ ಬೇರೆ ಬೇರೆ ಪಕ್ಷಗಳ ನಾಯಕರ ಜೊತೆ ಅಷ್ಟೇ ಆತ್ಮೀಯತೆ ಹೊಂದಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸ್ನೇಹಿತರ ಪಾಲಿಗೆ ಆಪ್ತಮಿತ್ರ. ರಾಜಕೀಯ ಮತ್ತು ಗೆಳೆತನ ವಿಚಾರಕ್ಕೆ ಬಂದರೆ ಮಲ್ಲಿಕಾರ್ಜುನ್ ಅವರಿಗೆ ಅವರೇ ಸಾಟಿ.

ಕೊರೊನಾದಲ್ಲಿ ಆರೋಗ್ಯದಾತರಾದ ಎಸ್ ಎಸ್ ಎಂ:

ಕೋವಿಡ್ -19 ಇಡೀ ವಿಶ್ವವನ್ನೇ ವ್ಯಾಪಿಸಿತ್ತು. ಎಲ್ಲಾ ದೇಶಗಳು ನಡುಗಿ ಹೋಗಿದ್ದವು. ಆಗ ಮಲ್ಲಿಕಾರ್ಜುನ್ ಅವರು ಶಾಸಕರಾಗಿರಲಿಲ್ಲ. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಸರಿಯಾಗಿ ಲಸಿಕೆ ಪೂರೈಸಲಿಲ್ಲ. ಬೆಡ್, ಆಕ್ಸಿಜನ್ ಸೇರಿದಂತೆ ಸೌಲಭ್ಯಗಳನ್ನು ನೀಡಲಿಲ್ಲ. ದಾವಣಗೆರೆ ವಿಚಾರಕ್ಕೆ ಬಂದರೆ ಕೂಡಲೇ ನೆರವಿಗೆ ಬಂದವರೇ ಎಸ್. ಎಸ್. ಮಲ್ಲಿಕಾರ್ಜುನ್ ಅವರು. ಸ್ವಂತ ಖರ್ಚಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೊರೊನಾ ಲಸಿಕೆ ಕೊಡಿಸಿದರು. ಜನರ ಪ್ರಾಣ ಉಳಿಸಿ ಸಂಜೀವಿನಿ ಪುರುಷ ಎನಿಸಿಕೊಂಡರು.

ದೇಶ ಮಾತ್ರವಲ್ಲ ವಿಶ್ವದಲ್ಲೇ ಜನರು ಕಣ್ಣೆದುರೇ ಸಾಯುವಂಥ ಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರ ಇಲ್ಲ ಬಿಡು, ನಾನ್ಯಾಕೆ ಸಹಾಯ ಮಾಡಬೇಕೆಂದು ಸುಮ್ಮನೆ ಕೂರಲಿಲ್ಲ. ರಾತ್ರಿ ಎಷ್ಟು ಹೊತ್ತಿಗಾದರೂ ಫೋನ್ ಕರೆ ಮಾಡಿದರೂ ಸ್ವೀಕರಿಸಿ ಎಷ್ಟೋ ಮಂದಿ ಪ್ರಾಣ ಉಳಿಸಿದ್ದಾರೆ. ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹೈಟೆಕ್, ಬಾಪೂಜಿ, ಸಿ. ಜೆ. ಆಸ್ಪತ್ರೆ ಸೇರಿದಂತೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಲು ನೆರವಾದರು. ಜನಪ್ರತಿನಿಧಿಯಾದವರು ಸರಿಯಾಗಿ ಸ್ಪಂದಿಸದಿದ್ದರೂ ಜನರ ಮೇಲಿನ ಪ್ರೀತಿ, ಕಾಳಜಿಯಿಂದ ಮಲ್ಲಿಕಾರ್ಜುನ್ ಅವರು ಸ್ವತಃ ಸ್ವಂತ ಖರ್ಚಿನಲ್ಲಿ ಲಸಿಕೆ ಕೊಡಿಸಿ ಎಲ್ಲರ ಪ್ರೀತಿ ಸಂಪಾದನೆ ಮಾಡಿದವರು.

ತಂದೆ ಶಾಮನೂರು ಶಿವಶಂಕರಪ್ಪರಷ್ಟೇ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಕ್ಕೆ ಉತ್ಕೃಷ್ಟ ಕೊಡುಗೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಒಟ್ಟು ಮೂರು ಬಾರಿ ಸಚಿವರಾಗಿರುವ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿ ಇಂದಿಗೂ ಹೆಜ್ಜೆಗುರುತುಗಳು ಹಾಗೆಯೇ ಇವೆ. ಕ್ರೀಡಾ ಸಚಿವರಾಗಿ, ತೋಟಗಾರಿಕೆ ಇಲಾಖೆ ಸಚಿವರಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾಗಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಿ ಲಾಭದತ್ತ ಕೊಂಡೊಯ್ಯುತ್ತಿರುವ ಹೆಗ್ಗಳಿಕೆ ಹೊಂದಿದ್ದಾರೆ.

ನೇರವಾದಿ, ನಿಷ್ಠುರವಾದಿಯೂ ಹೌದು:

ಮಲ್ಲಣ್ಣರ ಮಾತೇ ಹಾಗೆ. ಯಾವಾಗೂ ನೇರವಾಗಿ, ನಿಷ್ಠುರವಾಗಿಯೇ ಇರುತ್ತದೆ. ಆದರೆ ಮನಸ್ಸು ಮಾತ್ರ ದಾವಣಗೆರೆಯ ಬೆಣ್ಣೆಯ ರೀತಿಯಷ್ಟೇ ಮೃದು. ಕಷ್ಟ ಎಂದು ಬಂದವರು ಬರಿಗೈಯಲ್ಲಿ ವಾಪಸ್ ಕಳುಹಿಸುವುದಿಲ್ಲ. ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಯಾವಾಗಲೂ ಅಭಿವೃದ್ಧಿ ಪರ
ಕಾಳಜಿ ಹೊಂದಿರುವ ಮಲ್ಲಿಕಾರ್ಜುನ್ ಅವರು ಬೇರೆ ಬೇರೆ ದೇಶಗಳಿಗೆ ಅಭಿವೃದ್ಧಿ ಕುರಿತಂತೆ ಅಲ್ಲಿನ ಸರ್ಕಾರಗಳ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ ದಾವಣಗೆರೆಯನ್ನೂ ಅಷ್ಟರ ಮಟ್ಟಿಗೆ ಕೊಂಡೊಯ್ಯುವ ಕನಸು ಕಂಡಿದ್ದಾರೆ. ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.

ಜನರ ಪಾಲಿನ ಧಣಿ, ನಮ್ಮೆಲ್ಲರ ಸಾಹುಕಾರರೇ ನಮಗೆ ಸ್ಫೂರ್ತಿ: ಗಡಿಗುಡಾಳ್ ಮಂಜುನಾಥ್

ದಾವಣಗೆರೆ ಜನರು ಮಾತ್ರವಲ್ಲ, ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಸಾಹುಕಾರರೇ ಎಂದೇ ಎಲ್ಲರೂ ಕರೆಯುತ್ತಾರೆ. ಜನರ ಪಾಲಿಗಂತೂ ಅವರೇ ಧಣಿ. ಎಲ್ಲವನ್ನೂ ಸಮಾಧಾನವಾಗಿ ಆಲಿಸಿ ಸಮಸ್ಯೆಗೆ ಪರಿಹಾರ ಕೊಡಿಸುವ ಪರಿ ಎಲ್ಲಾ ರಾಜಕಾರಣಿಗಳಿಗೂ ಮಾದರಿ. ಒಮ್ಮೆ ಮಲ್ಲಣ್ಣರ ಬಳಿ ಹೋಗಿ ಹೇಳಿಕೊಂಡರೆ ಕೆಲಸ ಆಯ್ತು ಎಂದೇ ಅರ್ಥ. ಕೆಲಸ ಆಗುತ್ತೆ ಎಂದರೆ ಆಗುತ್ತೆ. ಇಲ್ಲದಿದ್ದರೆ ಇಲ್ಲ. ಆಗುತ್ತೆ ಎಂದು ಹೇಳಿದ ಮೇಲೆ ಆ ಕೆಲಸ ಮುಗಿದಂತೆಯೇ. ಈ ಗುಣದಿಂದಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ದಾವಣಗೆರೆ ಸಾಹುಕಾರರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸೆಳೆಯುತ್ತಾರೆ. ಅವರ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ.

ಸೈದ್ಧಾಂತಿಕ ಬದ್ಧತೆ ವಿಚಾರದಲ್ಲಿ ರಾಜಿ ಮಾಡಿಕೊಂಡ ನಾಯಕರಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದವರು. ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಗೆ ದಾವಣಗೆರೆಯಲ್ಲೇ ಚಾಲನೆ ಕೊಟ್ಟಿದ್ದು. ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರು ಇಲ್ಲಿಗೆ ಆಗಮಿಸಿ ಹೆಣ್ಣುಮಕ್ಕಳಿಗೆ ಭರವಸೆ ಕಾರ್ಡ್ ವಿತರಿಸಿದ್ದರು. ಎಸ್. ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪರು ಈ ಕನಸಿನ ಯೋಜನೆ ಚಾಲನೆ ವೇಳೆ ಹಾಜರಿದ್ದರು. ಎಸ್. ಎಸ್. ಮಲ್ಲಿಕಾರ್ಜುನ್ ಅವರು ವಿಧಾನಸಭೆ ಚುನಾವಣೆಯಲ್ಲಿ ಜಯಿಸಿದಾಗಲೆಲ್ಲಾ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದೇ ರೀತಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಯೋಜನೆ ಇಷ್ಟೊಂದು ಫೇಮಸ್ ಆಗಲು ದಾವಣಗೆರೆ ನೆಲ ಕಾರಣ. ಜೊತೆಗೆ ಮಲ್ಲಿಕಾರ್ಜುನ್ ಅವರ ಅದೃಷ್ಟವೂ ಕಾರಣ ಎಂದರೆ ಉತ್ಪ್ರೇಕ್ಷೆಯಾಗದು.

ಯಾವುದೇ ವಿಚಾರ ಇರಲಿ, ಎಸ್. ಎಸ್. ಮಲ್ಲಣ್ಣ ಅವರು ನೇರವಾಗಿ ಹೇಳುವ ಸ್ಪಷ್ಟವಾದಿ. ಶ್ರೀಮಂತಿಕೆಯಿದ್ದರೂ ದರ್ಪ ತೋರಿಸದೇ ಸರಳ ಜೀವನ ನಡೆಸುವ ಮೂಲಕ ಮಾದರಿಯಾಗಿದ್ದಾರೆ. ಎಲ್ಲಾ ಧರ್ಮದವರಿಗೂ, ಎಲ್ಲಾ ವರ್ಗದವರಿಗೂ ಸಹಾಯ ಮಲ್ಲಣ್ಣರ ಉದಾರ ಗುಣ ಬೇರೆಡೆ ಕಾಣಸಿಗುವುದು ತುಂಬಾನೇ ಅಪರೂಪ.

ಎಲ್ಲರನ್ನೂ ಎಲ್ಲವನ್ನೂ ಸಮಾಧಾನದಿಂದಲೇ ಆಲಿಸುವ ಮಲ್ಲಿಕಾರ್ಜುನ್ ಅವರು ಸಣ್ಣ ಕಾರ್ಯಕರ್ತರಿಂದ ಹಿಡಿದು ದೊಡ್ಡವರವರೆಗೂ ಒಂದೇ ರೀತಿಯಲ್ಲಿ ಮಾತಾಡಿಸುತ್ತಾರೆ. ಯಾರು ಹೆಚ್ಚು, ಯಾರು ಕಡಿಮೆ ಎಂಬ ತಾರತಮ್ಯ ತೋರುವುದಿಲ್ಲ. ಮಲ್ಲಣ್ಣರ ವಿಶೇಷ ವ್ಯಕ್ತಿತ್ವ, ಹೋರಾಟದ ಹಾದಿ, ಸೋತರು ಎದೆಗುಂದದೇ ಮತ್ತೆ ಫಿನಿಕ್ಸ್ ನಂತೆ ಎದ್ದು ಬರುವ ಮಲ್ಲಿಕಾರ್ಜುನ್ ಅವರಿಗೆ ಅವರೇ ಸಾಟಿ.

58ನೇ ವರ್ಷದ ಸಂಭ್ರಮದಲ್ಲಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಭಗವಂತ ಆಯಸ್ಸು, ಆರೋಗ್ಯ, ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ನಮ್ಮಂಥ ಲಕ್ಷಾಂತರ ಕಾರ್ಯಕರ್ತರು, ಮುಖಂಡರಿಗೆ ಮಾರ್ಗದರ್ಶನ ನೀಡುತ್ತಿರಲಿ. ದಾವಣಗೆರೆಯ ಸಾಹುಕಾರರಿಗೆ ಹೃದಯಪೂರ್ವಕವಾಗಿ ಜನುಮದಿನದ ಶುಭಾಶಯಗಳನ್ನು ಕೋರುತ್ತೇನೆ.

ಜಿ. ಎಸ್. ಮಂಜುನಾಥ್ ಗಡಿಗುಡಾಳ್, ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧಪಕ್ಷದ ಮಾಜಿ ನಾಯಕರು, ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment