ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದೇಸಾಯಿ ಸಿನಿಮಾ ಜೂ.21ಕ್ಕೆ ರಾಜ್ಯಾದ್ಯಂತ ತೆರೆಗೆ

On: June 13, 2024 7:41 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-06-2024

ದಾವಣಗೆರೆ: ಉತ್ತರ ಕರ್ನಾಟಕದ ಸೊಗಡು ಬಿಂಬಿಸುವುದರ ಜೊತೆಗೆ ಕೌಟುಂಬಿಕ ಹಿನ್ನಲೆಯುಳ್ಳ ದೇಸಾಯಿ ಚಲನಚಿತ್ರ ಇದೇ ಜೂ. 21 ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಾಗಲಕೋಟೆಯ ಮಹಾಂತೇಶ್ ಚೋಳಚಗುಡ್ಡ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಸಾಯಿ ” ಚಲನಚಿತ್ರ    ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್  ಫೀಲ್ಮ್ ನಡಿ ಮೂಡಿಬಂದಿದೆ. ನಾಗಿರೆಡ್ಡಿ ನಿದೇ೯ಶನ ಮಾಡಿದ್ದು,  ಪಿ ಕ್ ಎಚ್ ದಾಸ್ ಛಾಯಾಗ್ರಹಣವಿದೆ.ಚಿತ್ರಕ್ಕೆ ಸಂಗೀತವನ್ನು
ಸಾಯಿ  ಕಾತಿ೯ಕ್  ನೀಡಿದ್ದು ನಾಲ್ಕು ಹಾಡುಗಳಿವೆ ವಿಜಯಪ್ರಕಾಶ್ ಹಾಗೂ ಅನುರಾಧ ಭಟ್ ಧ್ವನಿ ನೀಡಿದ್ದಾರೆ ಎಂದರು.

ಚಿತ್ರದ ತಾರಾಗಣದಲ್ಲಿ ಪ್ರವೀಣ್ ಕುಮಾರ್, ರಾಧ್ಯ, ವರಟ ಪ್ರಶಾಂತ್, ಚಲವರಾಜ್,  ಹರಿಣಿ, ಕಲ್ಯಾಣಿ,   ಮಧುಸೂದನ ರಾವ್ ಮತ್ತಿತರರಿದ್ದಾರೆ.ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಚಿತ್ರಗಳ ಕೊರತೆ ಕಂಡುಬರುತ್ತಿದೆ.ಆದ್ದರಿಂದ ನಾವು ಕೌಟುಂಬಿಕ ಹಿನ್ನೆಲೆಯಲ್ಲಿ ಚಿತ್ರ ಮಾಡಿದ್ದೇವೆ. ಸಮಾಜಕ್ಕೆ ಅರಿವು ಮೂಡಿಸುವ ಚಿತ್ರ ಇದಾಗಿದೆ.ಒಳ್ಳೆಯ ಸಿನಿಮಾ ಬಂದಾಗ ಜನ ಸ್ವೀಕರಿಸುತ್ತಾರೆ ಅದಕ್ಕೆ ಇತ್ತೀಚೆಗೆ ಬಂದ ಕಾಂತಾರ ಹಾಗೂ ಕಾಟೇರಾ ಚಿತ್ರಗಳೇ ಸಾಕ್ಷಿ.ದೇಸಾಯಿ ಚಿತ್ರ ಮೂರು ತಲೆಮಾರಿನ ಜನರ ನಡುವೆ ನಡೆಯುವ ಕಥೆಯಾಗಿದೆ.ಜನ ನಮ್ಮ ಚಿತ್ರ ವೀಕ್ಷಿಸುವ ಮೂಲಕ ಬೆಂಬಲ ನೀಡಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಾಯಕನಟ ಪ್ರವೀಣ್ ಕುಮಾರ್,ಉಮಾ ವೀರಭದ್ರಪ್ಪ, ಪುರಂದರ ಲೋಕಿಕೆರೆ,ರಾಜಪ್ಪ,ಜಿ.ಬಿ ಹಾವೇರಿ ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment