ನವದೆಹಲಿ: ನವೆಂಬರ್ 1 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟ ಆಯೋಜಿಸಿರುವ ಬೃಹತ್ ರ್ಯಾಲಿಯ ವಿರುದ್ಧ ದೆಹಲಿಯ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಹೊಸ ಪ್ರಸ್ತಾಪವೊಂದನ್ನು ರಾಹುಲ್ ಗಾಂಧಿ ಅವರ ಮುಂದಿಟ್ಟಿದೆ. ಈ ರ್ಯಾಲಿಯಿಂದ ನಮಗೆ ಮತ್ತು ನಮ್ಮ ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದರೆ, ನಾವು ಪ್ರತಿಭಟನೆಯನ್ನು ಹಿಂಪಡೆದು ರ್ಯಾಲಿಯನ್ನು ಸ್ವಾಗತಿಸುತ್ತೇವೆ ಎಂದು ವರ್ತಕರ ಸಂಘ ತಿಳಿಸಿದೆ.
ಆದರೆ, ದೀಪಾವಳಿ ಹಬ್ಬದ ಸೀಸನ್ನಲ್ಲಿ ಈ ರ್ಯಾಲಿಯಿಂದ ವ್ಯಾಪಾರಕ್ಕೆ ನಷ್ಟವಾಗಲಿದೆ ಎಂದು ವರ್ತಕರು ಸಾಬೀತುಪಡಿಸಿದರೆ, ರ್ಯಾಲಿಯನ್ನು ದೀಪಾವಳಿಯ ನಂತರಕ್ಕೆ ಮುಂದೂಡಬೇಕು ಎಂದು ಸಿಟಿಐ ಅಧ್ಯಕ್ಷ ಬ್ರಜೇಶ್ ಗೋಯಲ್ ಅವರು ರಾಹುಲ್ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.
ಪ್ರಸ್ತಾಪದ ವಿವರ: ರಾಮಲೀಲಾ ಮೈದಾನದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ 20 ಪ್ರಮುಖ ಮಾರುಕಟ್ಟೆಗಳ 20 ಪ್ರತಿನಿಧಿಗಳಿಗೆ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲು ಕೇವಲ 20 ನಿಮಿಷಗಳ ಕಾಲಾವಕಾಶ ನೀಡುವಂತೆ ಕೋರಲಾಗಿದೆ.
ದೀಪಾವಳಿ ವ್ಯಾಪಾರಕ್ಕೆ ಹೊಡೆತದ ಭೀತಿ: ಚಾಂದನಿ ಚೌಕ್, ಸೌರ್ ಬಜಾರ್, ಕರೋಲ್ ಬಾಗ್, ದರಿಯಾಗಂಜ್ ಸೇರಿದಂತೆ 20ಕ್ಕೂ ಹೆಚ್ಚು ಪ್ರಮುಖ ಮಾರುಕಟ್ಟೆಗಳು ಈ ವ್ಯಾಪ್ತಿಯಲ್ಲಿ ಬರಲಿದ್ದು, 10 ಲಕ್ಷ ಜನ ಸೇರುವ ಈ ರ್ಯಾಲಿಯಿಂದ ಹಬ್ಬದ ವ್ಯಾಪಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಬಹುದು ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
‘ಮೊಹಬ್ಬತ್ ಕಿ ದುಖಾನ್’ ಬ್ಯಾನರ್ ಬಳಸಿದ ವರ್ತಕರು: ಪತ್ರದಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯ ಘೋಷಣೆಯನ್ನು ಉಲ್ಲೇಖಿಸಿರುವ ವರ್ತಕರು, “ನೀವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ (ಮೊಹಬ್ಬತ್ ಕಿ ದುಖಾನ್) ತೆರೆಯುತ್ತೀರಿ, ನಾವು ಅದನ್ನು ಗೌರವಿಸುತ್ತೇವೆ. ಆದರೆ ದೀಪಾವಳಿ ಮಾರುಕಟ್ಟೆಯಲ್ಲಿ ಆ ಪ್ರೀತಿಯ ಅಂಗಡಿಯನ್ನು ಮುಚ್ಚಿಸಬೇಡಿ” ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಚುನಾವಣಾ ಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿದರೆ ಪ್ರತಿಭಟನೆ 30 ಸೆಕೆಂಡುಗಳಲ್ಲಿ ಕೊನೆಗೊಳ್ಳುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದ ಬೆನ್ನಲ್ಲೇ, ವರ್ತಕರ ಸಂಘವು ಈ ಸಂವಾದದ ಪ್ರಸ್ತಾಪವನ್ನು ಮುನ್ನೆಲೆಗೆ ತಂದಿದೆ.





Leave a comment