ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದೆಹಲಿ: ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ, ಪೊಲೀಸರಿಂದ ತೀವ್ರ ಶೋಧ

On: May 14, 2024 4:45 PM
Follow Us:
---Advertisement---

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭದ್ರತಾ ಏಜೆನ್ಸಿಗಳಿಗೆ ಸಂದೇಶ ರವಾನೆಯಾಗಿ ಸ್ಥಳಕ್ಕೆ ಆಗಮಿಸಿರುವ ತಂಡ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

ಈ ತಿಂಗಳಲ್ಲಿ ನಡೆದ ಮೂರನೇ ಬಾಂಬ್‌ ಬೆದರಿಕೆ ಸಂದೇಶ ಇದಾಗಿದೆ. ಇಂದು ದೆಹಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆ (DFS) ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.

ಅಶೋಕ್ ವಿಹಾರ್‌ನ ದೀಪ್ ಚಂದ್ ಬಂಧು ಆಸ್ಪತ್ರೆಗೆ ಇಂದು ಬೆಳಗ್ಗೆ 10:45 ಕ್ಕೆ, ದಾಬ್ರಿಯ ದಾದಾ ದೇವ್ ಆಸ್ಪತ್ರೆಗೆ 10:55 ಕ್ಕೆ, ಫಾರ್ಷ್ ಬಜಾರ್‌ನ ಹೆಡ್ಗೆವಾರ್ ಆಸ್ಪತ್ರೆಗೆ 11:01 ಕ್ಕೆ ಮತ್ತು ಜಿಟಿಬಿ ಆಸ್ಪತ್ರೆಯಿಂದ ಅಗ್ನಿಶಾಮಕ ಇಲಾಖೆಗೆ 11.12ರ ಸುಮಾರಿಗೆ ಬೆದರಿಕೆ ಬಂದಿರುವುದಾಗಿ ಕರೆಗಳು ಬಂದವು. ನಂತರ ಎಲ್ಲಾ ನಾಲ್ಕು ಸ್ಥಳಗಳಿಗೆ ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಯಿತು. ಸದ್ಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಬಾಂಬ್ ವಂಚನೆ ಬೆದರಿಕೆಗಳು ಕರೆಗಳು ಬಂದಿದ್ದವು. ಎರಡು ದಿನಗಳ ಹಿಂದಷ್ಟೇ ಭಾನುವಾರ 5ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ದೆಹಲಿ ವಿಮಾನ ನಿಲ್ದಾಣ ಸೇರಿದಂತೆ 21 ಕಡೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು.

ಅದಕ್ಕೂ ಮೊದಲು ಮೇ 1 ರಂದು, ದೆಹಲಿ-ಎನ್‌ಸಿಆರ್‌ನ 150 ಕ್ಕೂ ಹೆಚ್ಚು ಶಾಲೆಗಳಿಗೆ ಸ್ಫೋಟಕ ಇಡಲಾಗಿದೆ ಎಂದು ಬೆದರಿಕೆ ಇಮೇಲ್ ಬಂದಿದ್ದವು. ನಂತರ ಶೋಧ ನಡೆಸಿದಾಗ ಸುಳ್ಳು ಎನಿಸಿತು. ಕಳೆದ ಭಾನುವಾರ ಬೆದರಿಕೆಯನ್ನು ಯುರೋಪ್ ಮೂಲದ ಮೇಲಿಂಗ್ ಸೇವಾ ಕಂಪನಿ beeble.com ನಿಂದ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

 

Join WhatsApp

Join Now

Join Telegram

Join Now

Leave a Comment