SUDDIKSHANA KANNADA NEWS/DAVANAGERE/DATE:26_10_2025
ದಾವಣಗೆರೆ: ನ್ಯಾಮತಿ ತಾಲೂಕಿನ ಸವಳಂಗ – ಶಿಕಾರಿಪುರ ರಸ್ತೆಯ ಮಾದಾಪುರ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಲಾವಿದನ ಮೃತದೇಹ ಪತ್ತೆಯಾಗಿದೆ.
READ ALSO THIS STORY: ಕೃತಜ್ಞತೆ ಇಲ್ಲದ ನಾಲಾಯಕ್ ಶಾಸಕ ಬಿ. ಪಿ. ಹರೀಶ್: ಗಡಿಗುಡಾಳ್ ಮಂಜುನಾಥ್ ಆಕ್ರೋಶ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಂಡಿಗಡ ಗ್ರಾಮದ ರಮೇಶ(42) ಮೃತ ವ್ತಕ್ತಿ. ವೃತ್ತಿಯಲ್ಲಿ ಶಿಲ್ಪಕಲೆ ವೃತ್ತಿ ಮಾಡುತ್ತಿದ್ದು ಅತಿಯಾದ ಮದ್ಯವ್ಯಸನಿಯಾಗಿದ್ದ. ಮೊದಲಿನಿಂದಲೂ ಶಿಲ್ಪಕಲೆ ವೃತ್ತಿ ಹಿನ್ನಲೆ ಊರುರು ಸುತ್ತುತ್ತ ತಿಂಗಳುಗಟ್ಟಲೆ ಮನೆಯಿಂದ ದೂರ ಉಳಿಯುತ್ತಿದ್ದ.
ಮೊದಲಿನಿಂದಲು ನನ್ನ ಪತಿ ಅತಿಯಾದ ಮದ್ಯ ವ್ಯಸನಿಯಾಗಿದ್ದು ಆತನು ಕುಡಿದ ಅಮಲಿನಲ್ಲಿ ನೇಣು ಹಾಕಿಕೊಂಡಿರಬಹುದು ಮುಂದಿನ ಅಂತ್ಯಕ್ರಿಯೆಗೆ ಕಾನೂನಿನ ನಿಯಮದಂತೆ ಅನುವು ಮಾಡಿಕೊಡುವಂತೆ ಮೃತ ವ್ಯಕ್ತಿಯ ಪತ್ನಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶನಿವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.







