ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಯ ಹಳೇಬಿಸ್ಲೇರಿಯಲ್ಲಿ ನಿಗೂಢವಾಗಿ ವಿವಾಹಿತ ಮರಣ: ಸಾವಿನ ಹಿಂದಿದೆಯಾ “ಹೆಣ್ಣಿನ” ನೆರಳು…?

On: June 10, 2023 11:33 AM
Follow Us:
Lingaraj death
---Advertisement---

SUDDIKSHANA KANNADA NEWS/ DAVANAGERE/ DATE:10-06-2023

ದಾವಣಗೆರೆ: ವಿವಾಹಿತನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ದಾವಣಗೆರೆ (Davanagere) ತಾಲೂಕಿನ ಹಳೆಬಿಸ್ಲೇರಿ ಗ್ರಾಮದಲ್ಲಿ ನಡೆದಿದೆ.

ಲಿಂಗರಾಜ್(35) ಅನುಮಾನಾಸ್ಪದ ಸಾವನ್ನಪ್ಪಿರುವ ವ್ಯಕ್ತಿ. ಆದ್ರೆ, ಕುಟುಂಬ ಹಾಗೂ ಸ್ಥಳೀಯ ಮುಖಂಡರು ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಪತ್ನಿಯ ಮೇಲೆ ಕೊಲೆ ಮಾಡಿಸಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ಹಿನ್ನೆಲೆ ಏನು..?

ಲಿಂಗರಾಜ್ ಎಂಬುವವರು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಆಕೆಯ ಪತಿ ಕಾವ್ಯ ಹೇಳಿದ್ದಾಳೆ. ಮನೆಯಲ್ಲಿನ ಧೂಳು ತೆಗೆಯುವಾಗ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ. ಆಗ ತಲೆಗೆ ಪೆಟ್ಟು ಬಿದ್ದು ಸಾವು ಕಂಡಿದ್ದಾರೆ ಎಂದು ಕಾವ್ಯ ಹೇಳುತ್ತಿದ್ದಾಳೆ. ಆದ್ರೆ, ಈಕೆಯ ಮಾತು ಕೇಳುವ ಸ್ಥಿತಿಯಲ್ಲಿ ಲಿಂಗರಾಜ್ ಹಾಗೂ ಆತನ ಕುಟುಂಬದವರು, ಸ್ನೇಹಿತರು, ಗ್ರಾಮದವರು ಒಪ್ಪಲು ಸಿದ್ದರಿಲ್ಲ. ಇದು ಆಕಸ್ಮಿಕವಾಗಿ ಆಗಿರುವ ಸಾವು ಅಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ.

ಅನೈತಿಕ ಸಂಬಂಧ ಇತ್ತಾ…?

ಇನ್ನು ಪತ್ನಿ ಕಾವ್ಯಳಿಗೆ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಇದ್ದದ್ದು ಲಿಂಗರಾಜ್ ಅವರಿಗೆ ಗೊತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಮೂರು ತಿಂಗಳ ಕಾಲ ಬೇರೊಬ್ಬರ ಜೊತೆ ವಾಸ ಇದ್ದಳು. ಆತನೊಟ್ಟಿಗೆ ಒಂದೇ ಮನೆಯಲ್ಲಿದ್ದಳು. ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಇದ್ದದ್ದು ಯಾಕೆ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ.

ರಾಜಿ ಪಂಚಾಯಿತಿ:

ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಹೋಗಿದ್ದ ಕಾವ್ಯಾಳ ಮನವೊಲಿಸಿ ಕಳೆದ 15 ದಿನಗಳ ಹಿಂದೆ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ ಲಿಂಗರಾಜ್ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆಗಿದ್ದ ಘಟನೆ ಮರೆತು ಹೊಸ ಜೀವನ ನಡೆಸಲು ಮುಂದಾಗಿದ್ದ. ಗಂಡ ಹೆಂಡತಿ ನಡುವೆ ಈ ಹಿಂದೆ ಇದ್ದ ಕಲಹ ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಆದ್ರೆ, ಇದ್ದಕ್ಕಿದ್ದಂತೆ ಮೇಲಿನಿಂದ ಕೆಳಗಡೆ ಬಿದ್ದು ಲಿಂಗರಾಜ್ ಸಾವು ಕಂಡಿದ್ದಾನೆ ಎಂದರೆ ಹೇಗೆ? ಆತನು ಒಳ್ಳೆಯ ವ್ಯಕ್ತಿ. ತನ್ನ ಪತ್ನಿ ಬೇರೊಬ್ಬನ ಜೊತೆಗಿದ್ದರೂ ಮತ್ತೆ ಮನೆಗೆ ಕರೆದುಕೊಂಡು ಬಂದು ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದ. ಆತನನ್ನು ಆತನ ಹೆಂಡತಿ ಕಾವ್ಯಾ ಹಾಗೂ ಆಕೆಯ ಪ್ರಿಯಕರನೇ ಕೊಂದು ಹಾಕಿದ್ದಾರೆ ಎಂಬುದು ಕುಟುಂಬದವರ ಆರೋಪ. ಈ ಸಂಬಂಧ ದಾವಣಗೆರೆ (Davanagere) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಿಂಗರಾಜ್ ಕುಟುಂಬದವರು ಇದೊಂದು ಕೊಲೆ ಎಂದು ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಬೇಕಿದೆ. ವರದಿ ಬಂದ ಬಳಿಕ ಲಿಂಗರಾಜ್ ಅವರದ್ದು ಆಕಸ್ಮಿಕ ಸಾವೋ ಅಥವಾ ಇದೊಂದು ಕೊಲೆಯೋ ಎಂಬುದನ್ನು ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ.

ಈ ಸುದ್ದಿಯನ್ನೂ ಓದಿ:

Cm Siddaramaiah: ಮಹಿಳಾ ಸಮೂಹದ ಪಾಲಿನ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ, ಉಳಿದ ಗ್ಯಾರಂಟಿ ಘೋಷಣೆ ದಿನ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ

 

Death in Old Bisleri village of Davangere taluk ,

ದಾವಣಗೆರೆ (Davanagere): Accident.. Assassination…?

ದಾವಣಗೆರೆ (Davanagere): Everyone’s suspicions on the wife..?

ದಾವಣಗೆರೆ (Davanagere) : Was there an immoral relationship..?

ದಾವಣಗೆರೆ (Davanagere): What is the family’s accusation..?

ದಾವಣಗೆರೆ (Davanagere): There was a fight between husband and wife…?

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment