SUDDIKSHANA KANNADA NEWS/ DAVANAGERE/ DATE:16-02-2024
ದಾವಣಗೆರೆ: ಬಸವಣ್ಣನವರ ಸಾರ್ವತ್ರಿಕ ಮೌಲ್ಯಗಳಾದ ಜಾತಿ ರಹಿತ ಸಮಾಜ, ಕಾಯಕದ ಮಹತ್ವ, ವರ್ಗರಹಿತ ಸಮಾಜ, ಜೀವನ ಮಾರ್ಗ ಸರ್ವಕಾಲಕ್ಕೂ ದಾರಿದೀಪವಾಗಿದೆ. ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಸೂಚಿಸಲಾಗಿರುತ್ತದೆ.
ಭಾವಚಿತ್ರದ ಅಡಿಬರಹದಲ್ಲಿ ವಿಶ್ವಗುರು ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಿ ಅಳವಡಿಸಬೇಕು. ಭಾವಚಿತ್ರದ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂಡು ಈ ಫೋಟೋ ಅಳವಡಿಸಬೇಕು. ಮುದ್ರಣ ಮಾಡಿಸಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಅವರು ಸುತ್ತೊಲೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನ ಜಾಗೃತಿ ಜಾಥಾ:
ಸಂವಿಧಾನದ ಆಶಯವನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲು ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ನಡೆಯತ್ತಿದ್ದು, ಫೆ. 21 ರಿಂದ 23 ರವರೆಗೆ ಜಗಳೂರು ಮತ್ತು ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಜಾಥಾ ಸಂಚರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ತಿಳಿಸಿದ್ದಾರೆ.
ಜಾಥಾವು 21 ರಂದು ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ-ಮುಸ್ಟೂರು, ಮುಸ್ಟೂರು-ಹಿರೆಮಲ್ಲನಹೊಳೆ, ಹಿರೆಮಲ್ಲನಹೊಳೆ-ಜಗಳೂರು ಟೌನ್, ಜಗಳೂರು ಟೌನ್-ಕೆಂಚನಹಳ್ಳಿ, ಕೆಂಚನಹಳ್ಳಿ-ಹನುಮಂತಪುರ,
ಹನುಮಂತಪುರ- ಅಣಬೂರು, ಜಾಥಾವು ಅಣಬೂರು ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ.
22 ರಂದು ಜಗಳೂರು ತಾಲ್ಲೂಕಿನ ಅಣಬೂರು-ಕ್ಯಾಸನಹಳ್ಳಿ, ಕ್ಯಾಸನಹಳ್ಳಿ-ಹೊಸಕೆರೆ, ಹೊಸಕೆರೆ-ಸೊಕ್ಕೆ, ಸೊಕ್ಕೆ-ಗುರುಸಿದ್ದಾಪುರ, ಗುರುಸಿದ್ದಾಪುರ-ಬಸವನಕೋಟೆ, ಬಸವನಕೋಟೆ-ದಿದ್ದಿಗಿ, ದಿದ್ದಿಗಿ-ಪಲ್ಲಾಗಟ್ಟೆ
ಜಾಥಾವು ಪಲ್ಲಾಗಟ್ಟೆ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ.
23 ರಂದು ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ-ಆಸಗೋಡು, ಆಸಗೋಡು-ಹೆಮ್ಮನಬೇತೂರು, ಮತ್ತು ದಾವಣಗೆರೆ ತಾಲ್ಲೂಕಿನ ಹೆಮ್ಮನಬೇತೂರು-ಅಣಜಿ, ಅಣಜಿ-ಆಲೂರು, ಆಲೂರು-ಶ್ರೀರಾಮನಗರ, ಶ್ರೀರಾಮನಗರ- ಬಸವನಾಲ್, ಬಸವನಾಲ್-ಕಾಡಜ್ಜಿ, ಕಾಡಜ್ಜಿ-ಬೇತೂರು, ಬೇತೂರು-ದಾವಣಗೆರೆ, ದಾವಣಗೆರೆ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ. ಗ್ರಾಮಸ್ಥರು, ಸಾರ್ವಜನಿಕರು ಜಾಥಾ ಸ್ವಾಗತಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಲು ಕೋರಿದ್ದಾರೆ.