Home ದಾವಣಗೆರೆ ಗಣೇಶೋತ್ಸವ ಮತ್ತು ದಸರಾ ಶೋಭಯಾತ್ರೆಯಲ್ಲಿ ಧಾರ್ಮಿಕ ಹಾಗೂ ದೇಶಭಕ್ತಿ ಹಾಡುಗಳ ನಿಷೇಧಕ್ಕೆ ವಿರೋಧ: ಎಸ್‌ಪಿ ವಿರುದ್ಧ ರಾಜನಹಳ್ಳಿ ಶಿವಕುಮಾರ್ ಆಕ್ರೋಶ
ದಾವಣಗೆರೆನವದೆಹಲಿಬೆಂಗಳೂರು

ಗಣೇಶೋತ್ಸವ ಮತ್ತು ದಸರಾ ಶೋಭಯಾತ್ರೆಯಲ್ಲಿ ಧಾರ್ಮಿಕ ಹಾಗೂ ದೇಶಭಕ್ತಿ ಹಾಡುಗಳ ನಿಷೇಧಕ್ಕೆ ವಿರೋಧ: ಎಸ್‌ಪಿ ವಿರುದ್ಧ ರಾಜನಹಳ್ಳಿ ಶಿವಕುಮಾರ್ ಆಕ್ರೋಶ

Share
ಗಣೇಶೋತ್ಸವ
Share

ದಾವಣಗೆರೆ: ಗಣೇಶೋತ್ಸವ ಮತ್ತು ದಸರಾ ಶೋಭಯಾತ್ರೆ ವೇಳೆ ವಂದೇ ಮಾತರಂ, ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ್ದು ಸೇರಿದಂತೆ ದೈವ ಮತ್ತು ರಾಷ್ಟ್ರ ಭಕ್ತಿ ಹಾಡುಗಳಿಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದ್ದು ಸರಿಯಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಅನಗತ್ಯವಾಗಿ ಕಿರುಕುಳ, ದೌರ್ಜನ್ಯ ಎಸಗಿದರೆ ಪೊಲೀಸ್ ಇಲಾಖೆ ವಿರುದ್ಧವೇ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆ ಮತ್ತು ದಸರಾ ಶೋಭಯಾತ್ರೆ ವಿಜೃಂಭಣೆಯಿಂದ ಆಚರಿಸುತ್ತೇವೆ. ಆದರೆ ದೇಶಭಕ್ತಿ ಮತ್ತು ದೈವ ಭಕ್ತಿ, ದೇವರ ಹಾಡುಗಳನ್ನು ಹಾಡಲು ನಿರ್ಬಂಧ ಹೇರಲಾಗಿದೆ. ರಾಮಮಂದಿರ, ವಂದೇ ಮಾತರಂ ಸೇರಿದಂತೆ ಭಾವನಾತ್ಮಕ ಹಾಡುಗಳನ್ನು ತಡೆ ಹಿಡಿಯಲಾಗಿದೆ. ಎಸ್ಪಿ ಅವರ ಆದೇಶ ಇದೆ ಎಂದು ಹೇಳಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ರಾಮ ನಮ್ಮ ಆರಾಧ್ಯ ದೈವ. ಶ್ರೀರಾಮ ಕುರಿತಾದ ಹಾಡುಗಳನ್ನು ಹಾಡುವುದು ತಪ್ಪೇ ಎಂದು ಪ್ರಶ್ನಿಸಿದರು.

ದಸರಾ ಶೋಭಯಾತ್ರೆ ವೇಳೆ ದೇಶಭಕ್ತಿ ಮತ್ತು ದೈವ ಭಕ್ತಿ ಹಾಡುಗಳನ್ನು ದೌರ್ಜನ್ಯದಿಂದ ನಿಷೇಧಿಸಲಾಗಿದೆ. ಸುಮಾರು ವರ್ಷಗಳಿಂದಲೂ ಶೋಭಯಾತ್ರೆ ನಡೆಸಿಕೊಂಡು ಬಂದಿದ್ದು, ಕಿರುಕುಳ ನೀಡಿದ್ದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಭಜರಂಗಿ ಬಲಿ, ಬನೇಗಾ ಮಂದಿರ, ಗಣಪತಿ ಹಾಡು ಸೇರಿದಂತೆ ಎಲ್ಲಾ ದೇವರುಗಳ ಹಾಡು ಹಾಕಿ ಸಾವಿರಾರು ಯುವಕರು ನೃತ್ಯ ಮಾಡುತ್ತಾ ಹಬ್ಬ ಆಚರಿಸಿಕೊಂಡು ಬರುತ್ತಿರುವುದು ನಮ್ಮ ಪದ್ಧತಿ. ಇದಕ್ಕೆ ಅಡ್ಡಿಪಡಿಸಿದರೆ ಹೇಗೆ ಎಂದು ರಾಜನಹಳ್ಳಿ ಶಿವಕುಮಾರ್ ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ತಿಮ್ಮೇಶ್, ಕುಮಾರ್, ವೀರಣ್ಣ, ಸಂತೋಷ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *