ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

G. M. Siddeshwara: ಎಸ್ ವೈ ಟ್ಯಾಕ್ಸ್ ಅಂದ್ರೆ ಏನು…? ಸಿದ್ದೇಶ್ವರ ಭ್ರಷ್ಟಾಚಾರ ಮಾಡದಿದ್ದರೆ ಆಣೆ ಮಾಡಲಿ, ದುಗ್ಗಮ್ಮ ದೇಗುಲದಲ್ಲಿ ನಾನು ದಾಖಲೆ ಬಿಡುಗಡೆ ಮಾಡುವೆ: ದಿನೇಶ್ ಕೆ. ಶೆಟ್ಟಿ ಪಂಥಾಹ್ವಾನ

On: July 16, 2023 10:49 AM
Follow Us:
Dinesh Shetty Pressmeet
---Advertisement---

SUDDIKSHANA KANNADA NEWS/ DAVANAGERE/ DATE:16-07-2023

 

ದಾವಣಗೆರೆ: ಸಂಸದ ಜಿ. ಎಂ. ಸಿದ್ದೇಶ್ವರ (G. M. Siddeshwara) ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಭ್ರಷ್ಟಾಚಾರ ಮಾಡಿಲ್ಲ ಎಂದು ಶಕ್ತಿದೇವತೆ ದುರ್ಗಾಂಬಿಕೆ ದೇವಸ್ಥಾನದಲ್ಲಿ ಆಣೆ ಮಾಡಲಿ. ವರ್ಗಾವಣೆಯಾಗಿರುವ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಮಾತನಾಡಿರುವ ಆಡಿಯೋ ನನ್ನಲ್ಲಿದೆ. ಸಿದ್ದೇಶ್ವರ (G. M. Siddeshwara) ಅವರು ಬಂದರೆ ನಾನು ನನ್ನ ಬಳಿ ಇರುವ ದಾಖಲೆ ಅಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಪಂಥಾಹ್ವಾನ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶವಂತರಾವ್ ಜಾಧವ್ ಗೆ ಶೇಕಡಾ 10ರಷ್ಟು ಕಮೀಷನ್ ನೀಡಬೇಕು. ಉಳಿದಂತೆ ರಾಜ್ಯ ಮಟ್ಟದಲ್ಲಿ ಶೇಕಡಾ 40 ಹಾಗೂ ದಾವಣಗೆರೆಯಲ್ಲಿ ಎಷ್ಟು ಪರ್ಸಂಟೇಸ್ ಎಂಬುದು ಗೊತ್ತಿಲ್ಲ. ದುರ್ಗಾಂಬಿಕಾ ದೇಗುಲಕ್ಕೆ ಸಿದ್ದೇಶ್ವರ (G. M. Siddeshwara) ಅವರೇ ಬರಬೇಕು. ಬೇರೆ ಯಾರನ್ನೂ ಕಳುಹಿಸುವುದು ಬೇಡ. ಪೆನ್ ಡ್ರೈವ್ ನಲ್ಲಿ ಅಧಿಕಾರಿಗಳು ಮಾತನಾಡಿರುವ ಆಡಿಯೋ ಇದೆ ಎಂದು ತಿಳಿಸಿದರು.

ಆರು ತಿಂಗಳಲ್ಲಿ ನಾನು ಮಾಡಿರುವ ಆರೋಪ ಸುಳ್ಳಾದರೆ ದುರ್ಗಾಂಬಿಕಾ ತಾಯಿಯೇ ಶಿಕ್ಷೆ ಕೊಡಲಿ. ಆರೋಪ ಸರಿಯಿದ್ದರೆ ಅವರಿಗೆ ಶಿಕ್ಷೆಯಾಗಲಿ. ಎಲ್ಲದಕ್ಕೂ ತಯಾರಿದ್ದೇವೆ. ಭ್ರಷ್ಟಾಚಾರವೇ ನಡೆದಿಲ್ಲ ಎಂಬ ಮಾತು ಹೇಳಿಕೊಂಡು
ಓಡಾಡುವುದು ಬೇಡ ಎಂದು ಹೇಳಿದರು.

ದಾವಣಗೆರೆ ನಗರಕ್ಕೆ ಕಪ್ಪುಚುಕ್ಕೆಯಂತೆ ಡಿಸಿಎಂ ಬಳಿಯ ಅಂಡರ್ ಪಾಸ್ ನಿರ್ಮಾತೃ ಜಿ.ಎಂ.ಸಿದ್ದೇಶ್ವರ್ (G. M. Siddeshwara) ಅವರ ಭ್ರಷ್ಟಾಚಾರಕ್ಕೆ ಸಾಕ್ಷಿ. ಕಳೆದ ಬಿಜೆಪಿಯ ಆಡಳಿತದಲ್ಲಿ ಸಾಲು ಸಾಲು ಭ್ರಷ್ಟಾಚಾರದಡಿ ಕಾಮಗಾರಿಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

ಕಳೆದ ಅವಧಿಯ ರಾಜ್ಯ ಬಿಜೆಪಿ 4 ವರ್ಷಗಳ ಆಡಳಿತದಲ್ಲಿ ಜಿಲ್ಲೆಯಲ್ಲಿ ಐವರು ಶಾಸಕರಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲು ಜಿ.ಎಂ.ಸಿದ್ದೇಶ್ವರ ಬಿಡಲಿಲ್ಲ. ಈ ಕಾಲದಲ್ಲಿ ಎಸ್ ವೈ ಟ್ಯಾಕ್ಸ್ ಇತ್ತು‌. ವರ್ಗಾವಣೆ ಆಗಿರುವವರು,
ನಿವೃತ್ತ ಅಧಿಕಾರಿಗಳೇ ಹೇಳಿದ್ದಾರೆ. ಯಶವಂತರಾವ್ ಅವರಿಗೆ ಶೇಕಡಾ 10ರಷ್ಟು ಕಮೀಷನ್ ನೀಡಬೇಕು. ಉಳಿದಂತೆ ಸಿದ್ದೇಶ್ವರ್ (G. M. Siddeshwara) ಅವರಿಗೆ ನೀಡಬೇಕಿತ್ತು. ಆರೋಪ ಸುಳ್ಳು, ಭ್ರಷ್ಟಾಚಾರ ನಡೆಸಿಲ್ಲ ಎಂದಾದರೆ ದುಗ್ಗಮ್ಮನ ದೇಗುಲಕ್ಕೆ ಬರಲಿ ಎಂದು ಸವಾಲು ಹಾಕಿದರು.

ದಾವಣಗೆರೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಹಿಂದೆ ಸುಮಾರು 200 ಬಸ್‌ಗಳು ಬಂದು ಹೋಗುತ್ತಿದ್ದವು. ಸರಿಸುಮಾರು 20 ಬಸ್‌ಗಳನ್ನು 20 ನಿಮಿಷಗಳ ಕಾಲ ಬಸ್‌ ನಿಲುಗಡೆ ಮಾಡಬಹುದಿತ್ತು.‌ ಆದರೆ ಇದೀಗ ಕೇವಲ 10 ರಿಂದ 14 ಬಸ್ ಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಿದ್ದು, ಇದರಿಂದ ಬಸ್ ಗಳ ನಿಲುಗಡೆ ಕಾಲಾವಧಿ ಕಡಿಮೆ ಆಗಲಿದೆ ಎಂದರು.

ಈ ಸುದ್ದಿಯನ್ನೂ ಓದಿ: 

Medical Student: ಕೆಸರು ಕ್ರೀಡೆ ಕಲರವ: ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳ ಸಂಭ್ರಮವೋ.. ಸಂಭ್ರಮ…

 

ಜನರಿಗೆ ತೊಂದರೆ ಮಾಡುವುದೇ ಬಿಜೆಪಿಯವರ ಕೆಲಸ. ಇಂತಹ ಸಾಲು – ಸಾಲು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಜಿ.ಎಂ.ಸಿದ್ದೇಶ್ವರ್‌ (G. M. Siddeshwara) ಮತ್ತು ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಅವರು ದಾವಣಗೆರೆಯಲ್ಲಿ ಹಾಕಿದ್ದ ಸಿದ್ದೇಶ್ವರ್ – ಯಶವಂತರಾವ್ ಟ್ಯಾಕ್ಸ್ (ಎಸ್. ವೈ.) ಗೆ ಬ್ರೇಕ್ ಹಾಕಲಾಗಿದ್ದು, ಬಿಜೆಪಿ ಅವಧಿಯ ಭ್ರಷ್ಟಾಚಾರ ಜನತೆಯ ಮುಂದೆ ಇಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಸಂಸದರೊಂದಿಗೆ ಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಯಶವಂತರಾವ್ ಸಹ ಶಾಮೀಲಾಗಿದ್ದರು. ಸಿದ್ದೇಶ್ವರ್ – ಯಶವಂತರಾವ್ ಟ್ಯಾಕ್ಸ್ ಜಾರಿಗೆ ತಂದಿದ್ದರು. ದಾವಣಗೆರೆ ನಗರದ ಜೀವಜಲ
ಕುಂದುವಾಡ ಕೆರೆಯನ್ನು ಈ ಹಿಂದೆ ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ಕೇವಲ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ದಾವಣಗೆರೆ ನಗರಕ್ಕೆ 120 ದಿನಗಳ ಕಾಲ ನೀರು ಪೂರೈಸಲಾಗುತ್ತಿತ್ತು. ಆದರೆ ಅಭಿವೃದ್ಧಿ ಹೆಸರಿನಲ್ಲಿ 18 ಕೋಟಿ ರೂಪಾಯಿ ಖರ್ಚು ಮಾಡಿ ಕಾಮಗಾರಿ ಮಾಡಿದ್ದರೂ ಈಗ ನೀರು ಶೇಖರಣೆ ಸಹ ಕಡಿಮೆ ಆಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅವರನ್ನು ರಾಜ್ಯ ಹಾಗೂ ರಾಷ್ಟ್ರದ ಕಾಂಗ್ರೆಸ್ ನಾಯಕರು ನಿರ್ಧಾರ ಮಾಡುತ್ತಾರೆ. ಹಾಗಾಗಿ ಯಾರೂ ಸಹ ಅಭ್ಯರ್ಥಿ ಯಾರೆಂದು ಮಾತನಾಡಬಾರದು. 2024ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಂದು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಪಿಆರ್ ಗೆ ಮಾನಸಿಕ ಅಸ್ವಸ್ಥತೆ..!

ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಚುನಾವಣೆಯಲ್ಲಿ ಸೋತ ಬಳಿಕ ಮಾನಸಿಕ ಅಸ್ವಸ್ಥರಾಗಿದ್ದಾರೆ. ಮನಸ್ಸಿಗೆ ತೆಗೆದುಕೊಳ್ಳುವುದನ್ನು ಬಿಟ್ಟು ಮೆದುಳಿಗೆ ತೆಗೆದುಕೊಂಡಿದ್ದಾರೆ. ಅವರೂ ಸೋತ ಬಳಿಕ ಏನೇನೋ‌ ಮಾತನಾಡುತ್ತಿದ್ದಾರೆ. ಒಮ್ಮೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಭೇಟಿ ಮಾಡುತ್ತಾರೆ, ಮಗದೊಮ್ಮೆ ಶಾಮನೂರು ಶಿವಶಂಕರಪ್ಪರನ್ನು ಭೇಟಿಗೆ ಬರುತ್ತಾರೆ. ಮನೆಯ ಮುಂದೆ ಬೆಳಿಗ್ಗೆ ಜನ ಸೇರಿಸಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಾರೆ ಎಂದು ದಿನೇಶ್ ಕೆ. ಶೆಟ್ಟಿ ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ, ಅಯೂಬ್ ಪೈಲ್ವಾನ್, ಕೆ. ಜಿ.‌ ಶಿವಕುಮಾರ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ನಂಜಾನಾಯ್ಕ, ಶುಭಮಂಗಳ, ಪಾಲಿಕೆ ಸದಸ್ಯ ಎ. ನಾಗರಾಜ್, ಡೋಲಿ ಚಂದ್ರು, ಹರೀಶ್ ಬಸಾಪುರ, ಯಶೋಧಮ್ಮ ಮತ್ತಿತರರು ಹಾಜರಿದ್ದರು.

Davanagere News, Davanagere Updates, A Challenge For G. M. Siddeshwara, G. M. Siddeshwar Againest Congress Pressmeet

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment