ದಾವಣಗೆರೆ: ಜಿಲ್ಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಗುಣಮಟ್ಟದ ಪಾಲನೆಗಾಗಿ ಬಾಲನ್ಯಾಯ ಕಾಯ್ದೆಯಡಿ ಈಗಾಗಲೇ ನೋಂದಣಿಯಾಗಿರುವ ಸಂಸ್ಥೆಗಳನ್ನು ಹೊರತುಪಡಿಸಿ, 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ನಡೆಸಲಾಗುವ ಇತರೆ ಎಲ್ಲಾ ಸರ್ಕಾರೇತರ, ಖಾಸಗಿ, ಧಾರ್ಮಿಕ ಹಾಗೂ ವೈಯಕ್ತಿಕ ವಸತಿ ನಿಲಯಗಳು ಮತ್ತು ವಸತಿಯುತ ಶಾಲೆ-ಕಾಲೇಜುಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ನೀತಿ ಹಾಗೂ ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಎಲ್ಲಾ ಔಪಚಾರಿಕ ಮತ್ತು ಅನೌಪಚಾರಿಕ ಶೈಕ್ಷಣಿಕ ಸಂಸ್ಥೆಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಎಂದು ಎಚ್ಚರಿಸಲಾಗಿದೆ.
ಆನ್‌ಲೈನ್ ನೋಂದಣಿ ಲಿಂಕ್: ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಯವರು ಅಧಿಕೃತ ವೆಬ್‌ಸೈಟ್ [https://davanagere.nic.in/en/](https://davanagere.nic.in/en/) ಅಥವಾ ನೇರವಾಗಿ [https://sevaone.karnataka.gov.in/services/renderApplicationForm.do?serviceId=2731](https://sevaone.karnataka.gov.in/services/renderApplicationForm.do?serviceId=2731) ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಭೌತಿಕ ಪ್ರತಿ ಸಲ್ಲಿಕೆ ಕಡ್ಡಾಯ: ಆನ್‌ಲೈನ್ ನೋಂದಣಿಯ ನಂತರ ಅದರ ಹಾರ್ಡ್ ಕಾಪಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುವೆಂಪು ನಗರ, 14ನೇ ಮುಖ್ಯ ರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ- 577004 ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು.
ಅನ್ವಯವಾಗುವ ಸಂಸ್ಥೆಗಳು: ನಾಗರಿಕ ಸಮಾಜ ಸಂಸ್ಥೆಗಳು, ಟ್ರಸ್ಟ್‌ಗಳು, ಧಾರ್ಮಿಕ ಮತ್ತು ಖಾಸಗಿ ಟ್ರಸ್ಟ್‌ಗಳ ಅಡಿಯಲ್ಲಿ ಬರುವ ಎಲ್ಲಾ ವಸತಿಯುತ ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೆಲ್‌ಗಳು ಈ ನಿಯಮದಡಿಯಲ್ಲಿ ಬರಲಿವೆ.





Leave a comment