Home ಕ್ರೀಡೆ ವಿಶ್ವಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹರಿಹರದ ಛಾಯಾಗ್ರಾಹಕನ ಮಗ ಚಾಣಕ್ಯ; ಅಭಿನಂದನೆಗಳ ಮಹಾಪೂರ
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

ವಿಶ್ವಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹರಿಹರದ ಛಾಯಾಗ್ರಾಹಕನ ಮಗ ಚಾಣಕ್ಯ; ಅಭಿನಂದನೆಗಳ ಮಹಾಪೂರ

Share
ಕರಾಟೆ
Share

ದಾವಣಗೆರೆ/ಹರಿಹರ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಛಾಯಾಗ್ರಾಹಕರಾದ ನಾಗೇಂದ್ರ ಅವರ ಮಗ ಚಾಣಕ್ಯ ಅವರು ವಿಶ್ವಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಈ ಅಪೂರ್ವ ಸಾಧನೆ ಮಾಡಿರುವ ಛಾಯಾಗ್ರಾಹಕ ನಾಗೇಂದ್ರ ಹಾಗೂ ಅವರ ಪ್ರತಿಭಾವಂತ ಮಗ ಚಾಣಕ್ಯ ಅವರನ್ನು ದಾವಣಗೆರೆ ಜಿಲ್ಲಾ ಮತ್ತು ದಾವಣಗೆರೆ ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಹರಿಹರ ತಾಲೂಕು ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಫೋಟೋ ಮತ್ತು ವೀಡಿಯೋ ಗ್ರಾಫರ್ ಸಂಘದ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ಜಾದವ್, “ಛಾಯಾಗ್ರಾಹಕರು ತಮ್ಮ ವೃತ್ತಿ ಜೀವನದಲ್ಲಿ ಬದುಕು ನಡೆಸುವುದು ಕಷ್ಟವಾದರೂ, ನಮ್ಮ ಸಂಘದ ಸದಸ್ಯ ನಾಗೇಂದ್ರರವರು ತಮ್ಮ ಮಗನಿಗೆ ಸ್ವತಃ ತರಬೇತಿ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕ ಗೆಲ್ಲಿಸಿರುವುದು ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಚಾರ” ಎಂದು ಪ್ರಶಂಸಿಸಿದರು. ಹರಿಹರ ತಾಲೂಕು ಸಂಘದ ಅಧ್ಯಕ್ಷರಾದ ಮಧು ಮಾತನಾಡಿ, ಚಾಣಕ್ಯ ಅವರು ಓದಿನ ಜೊತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲೂ ಪದಕ ಪಡೆಯಲಿ ಎಂದು ಹಾರೈಸಿದರು.

ವಿಶ್ವಮಟ್ಟದಲ್ಲಿ ಚಿನ್ನದ ಪದಕ: ಹರಿಹರ ತಾಲೂಕಿನ ರಾಜನಹಳ್ಳಿಯ ಛಾಯಾಗ್ರಾಹಕ ನಾಗೇಂದ್ರ ಅವರ ಸುಪುತ್ರ ಚಾಣಕ್ಯ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಗಣ್ಯರಿಂದ ಅಭಿನಂದನೆ: ದಾವಣಗೆರೆ ಜಿಲ್ಲಾ ಮತ್ತು ಹರಿಹರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಯಶಸ್ವಿ ಪ್ರತಿಭೆ ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು.

ಒಲಿಂಪಿಕ್ಸ್‌ ಕನಸು: ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುತ್ತಿರುವ ಚಾಣಕ್ಯ ಭವಿಷ್ಯದಲ್ಲಿ ಒಲಿಂಪಿಕ್ ಪದಕ ಗೆಲ್ಲಲಿ ಎಂದು ಸಂಘದ ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದರು.

ಪ್ರಮುಖರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ತಿಲಕ್ ಬನಖಂಡಿ, ಖಜಾಂಚಿ ಬಸವರಾಜ್, ಯೂತ್ ವೆಲ್ಫೇರ್ ಅಸೋಸಿಯೇಷನ್ ಕಾರ್ಯದರ್ಶಿ ದುರ್ಗೇಶ್ ಕಡೆಮನೆ, ಸತೀಶ್, ಸಂತೋಷ್ ಕಿರೋಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles