Home ದಾವಣಗೆರೆ ದಿ|| ಜಿ. ಮಲ್ಲಿಕಾರ್ಜುನಪ್ಪ – ಜಿ.ಎಂ. ಹಾಲಮ್ಮ ಪುಣ್ಯ ಸ್ಮರಣೆ: ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ
ದಾವಣಗೆರೆಬೆಂಗಳೂರು

ದಿ|| ಜಿ. ಮಲ್ಲಿಕಾರ್ಜುನಪ್ಪ – ಜಿ.ಎಂ. ಹಾಲಮ್ಮ ಪುಣ್ಯ ಸ್ಮರಣೆ: ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ

Share
ಮಲ್ಲಿಕಾರ್ಜುನಪ್ಪ
Share

ದಾವಣಗೆರೆ ; ನಗರದ ಪಿ.ಬಿ. ರಸ್ತೆಯಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ದಿ|| ಶ್ರೀ ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಜಿ.ಎಂ. ಹಾಲಮ್ಮ ಇವರ ಪುಣ್ಯ ಸ್ಮರಣೆ ನಿಮಿತ್ತ ಬೃಹತ್ ರಕ್ತದಾನ ಶಿಬಿರವನ್ನು ಇದೇ ನವೆಂಬರ್ 25,2026ನೇ ಬುಧವಾರ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9:30 ರಿಂದ ಸಂಜೆ 4 ಗಂಟೆಯವರೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಜಿಎಂಐಟಿ ಕಟ್ಟಡ, ನ್ಯೂ ಅಕಾಡೆಮಿ ಬ್ಲಾಕ್ ಮತ್ತು ಕೇಂದ್ರ ಗ್ರಂಥಾಲಯದಲ್ಲಿ ಜಿ.ಎಂ. ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಘಟಕ ಹಾಗೂ ಜಿ. ಮಲ್ಲಿಕಾರ್ಜುನಪ್ಪ – ಹಾಲಮ್ಮ ಚಾರಿಟಿ ಫೌಂಡೇಶನ್ ಇವರ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ. ಕರ್ನಾಟಕ ಹಿಮೋಫಿಲಿಯಾ ಸೊಸೈಟಿ, ಲಯನ್ಸ್ ಸಂಸ್ಥೆ, ರೆಡ್ ಕ್ರಾಸ್ ಸೇರಿದಂತೆ ವಿವಿಧ ಸಂಸ್ಥೆಗಳು ಸಹಯೋಗ ನೀಡಿವೆ.

ಕಾರ್ಯಕ್ರಮವನ್ನು ಮಾಜಿ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ. ಜಿ.ಎಂ. ಸಿದ್ದೇಶ್ವರ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶ್ರೀಶೈಲ ಶೈಕ್ಷಣಿಕ ಟ್ರಸ್ಟ್ ನ ಅಧ್ಯಕ್ಷರಾದ ಜಿ.ಎಂ. ಪ್ರಸನ್ನ ಕುಮಾರ್, ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಕುಲಪತಿಗಳಾದ ಡಾ. ಹೆಚ್.ಆರ್. ಮಹದೇವಸ್ವಾಮಿ, ಸಹ ಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್ ಭಾಗವಹಿಸಲಿದ್ದಾರೆ.

ಇವರೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಮಧುಸೂದನ್, ಲಯನ್ಸ್ ರಕ್ತನಿಧಿ ಕೇಂದ್ರದ ಸಂಸ್ಥಾಪಕ ಲ. ಮೌನೇಶ್ವರ ಎನ್.ಹೆಚ್., MJF ಲಿಟನ್ ಚೇರ್‌ಪರ್ಸನ್ ಲ. ಎಲ್.ಎಸ್. ಪ್ರಭುದೇವ್, ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಲ. ಹೆಚ್.ಎನ್. ಶಿವಕುಮಾರ್, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತ ಕೇಂದ್ರ ವೈದ್ಯಾಧಿಕಾರಿ ಡಾ. ಗೀತಾ ಡಿ ಹೆಚ್., ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಮುರುಳೀಧರ್ ಪಿ.ಡಿ. ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ (ದಾವಣಗೆರೆ) ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಜಿ.ಎಂ. ವಿಶ್ವವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗ ಮತ್ತು ಜಿ.ಎಂ. ಸಮೂಹ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

Share
Related Articles