SUDDIKSHANA KANNADA NEWS/ DAVANAGERE/DATE:23_09_2025
ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯನ್ನು ಸೆ.15 ರಿಂದ ಕೈಗೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ: ಸ್ಮಾರ್ಟ್ ರೋಡ್ ವೀಕ್ಷಿಸಿದ ಸಚಿವರು ಖುಷ್: ನುಡಿದಂತೆ ನಡೆಯುತ್ತೇವೆ, ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಬದ್ಧತೆ ಎಂದ್ರು ಎಸ್. ಎಸ್. ಮಲ್ಲಿಕಾರ್ಜುನ್
ಈಗಾಗಲೇ ಸರ್ಕಾರದಿಂದ 2007-08ನೇ ಸಾಲಿನಲ್ಲಿ ನಡೆಸಲಾದ ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆಯಲ್ಲಿದ್ದು, ಮರಣ ಹೊಂದಿರುವ ಮಾಜಿ ದೇವದಾಸಿ ಮಹಿಳೆಯರ ಕುಟುಂಬದ ಅಧೀಕೃತ ಸದಸ್ಯರು ನಮೂನೆ-1 ರಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆಯಿಂದ ಹೊರಗುಳಿದ, ಹಾಲಿ ಜೀವಂತವಿರುವ ಮಾಜಿ ದೇವದಾಸಿ ಮಹಿಳೆಯರು ಹೊಸದಾಗಿ ಪಟ್ಟಿಗೆ ಸೇರ್ಪಡೆ ಬಯಸುವವರು ನಮೂನೆ-2 ರಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು.
ಪ್ರಸ್ತುತ ಮರಣ ಹೊಂದಿರುವ ಮಾಜಿ ದೇವದಾಸಿ ಮಹಿಳೆಯರ ಕುಟುಂಬದ ಅಧಿಕೃತ ಸದಸ್ಯರು ನಮೂನೆ-3 ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಅಗತ್ಯ ದಾಖಲೆಗಳೊಂದಿಗೆ ಮಾಜಿ ದೇವದಾಸಿ ಮಹಿಳೆಯರ ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ, ವಂಶವೃಕ್ಷ, ಕುಟುಂಬದ ಅಧೀಕೃತ ಸದಸ್ಯರ ಆಧಾರ್ ಕಾರ್ಡ್, ಹೊಸ ಸೇರ್ಪಡೆ ಬಯಸುವ ಮಾಜಿ ದೇವದಾಸಿ ಮಹಿಳೆಯರ ವಯಸ್ಸಿನ ದೃಢೀಕರಣ ಪತ್ರಗಳೊಂದಿಗೆ ಅರ್ಜಿಯನ್ನು ದಾವಣಗೆರೆ, ಜಗಳೂರು, ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲ್ಲಿಗೆ ಅ.9 ರೊಳಗಾಗಿ ಅರ್ಜಿ ಸಲ್ಲಿಸಬೇಕು (ಅರ್ಜಿ ನಮೂನೆ-1,2,3 ಇವುಗಳನ್ನು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಪಡೆಯಬೇಕೆಂದು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.