ದಾವಣಗೆರೆ: ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 190 ಟನ್ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ, ಪಾಲಿಕೆಯ ವಾಹನಗಳಿಗೆ ಮಾತ್ರ ನೀಡಬೇಕು.
ನಾಗರಿಕರು ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸ ಮತ್ತು ನೈರ್ಮಲ್ಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಮನೆ ಬಾಗಿಲಿಗೆ ಬರುವ ಆಟೋ ಟಿಪ್ಪರ್ಗಳಿಗೆ ನೀಡಬೇಕು. ಸಂಗ್ರಹವಾದ ಹಸಿ ಕಸವನ್ನು ಅವರಗೊಳ್ಳ ಗ್ರಾಮದ ಬಳಿಯ ಘಟಕದಲ್ಲಿ ಗೊಬ್ಬರ ತಯಾರಿಸಲು ಬಳಸಲಾಗುತ್ತಿದೆ. ಮತ್ತು ಒಣ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಬೀದಿಬದಿ ವ್ಯಾಪಾರಿಗಳು ತಮ್ಮ ಉದ್ದಿಮೆಯ ಸುತ್ತಮುತ್ತ 100 ಅಡಿ ಜಾಗದಲ್ಲಿ ಕಸ ಬೀಳದಂತೆ ನೋಡಿಕೊಳ್ಳಲು 75 ಲೀಟರ್ ಸಾಮಥ್ರ್ಯದ ಎರಡು ಕಸದ ಡಬ್ಬಿಗಳನ್ನು ಅಳವಡಿಸಬೇಕು. ನಿಯಮ ಪಾಲಿಸದ ವ್ಯಾಪಾರಿಗಳಿಗೆ ರೂ. 500 ರಿಂದ ರೂ. 1,000 ದಂಡ ವಿಧಿಸಲಾಗುವುದು. ಚಹಾ, ಕಾಫಿ ವ್ಯಾಪಾರಿಗಳು ಪೇಪರ್ ಅಥವಾ ಪ್ಲಾಸ್ಟಿಕ್ ಕಪ್‍ಗಳ ಬದಲು ಸ್ಟೀಲ್ ಅಥವಾ ಗಾಜಿನ ಕಪ್ಗಳನ್ನು ಬಳಸಬೇಕು.
ಮನೆ ನಿರ್ಮಾಣ ಅಥವಾ ಕೆಡಹುವಿಕೆಯಿಂದ ಬರುವ ಕಟ್ಟಡ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ವಾರ್ಡ್-2 ರ ಶಿವನಗರದ ಎಸ್ಟಿಪಿ ಪಕ್ಕದ ತಗ್ಗು ಪ್ರದೇಶ. ವಾರ್ಡ್-31 ರ ರಾಮನಗರದ ರುದ್ರಭೂಮಿ ಗಾಂಧಿ ಭವನ ಹಿಂಭಾಗ ಪಕ್ಕದ ತಗ್ಗು ಪ್ರದೇಶ ಗುರುತಿಸಿದ್ದು ಇಲ್ಲಿ ವಿಲೇ ಮಾಡಬೇಕು.
ಸಾರ್ವಜನಿಕ ಸ್ಥಳಗಳು, ರಸ್ತೆ ಬದಿ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದು ಕಂಡುಬಂದಲ್ಲಿ, ಕರ್ನಾಟಕ ಮಹಾನಗರ ಪಾಲಿಕೆಗಳ ಘನತ್ಯಾಜ್ಯ ನಿರ್ವಹಣೆ ಉಪ ವಿಧಿಗಳು-2019ರ ಅನ್ವಯ ರೂ. 100 ರಿಂದ ರೂ. 1,000 ವರೆಗೆ ದಂಡ ವಿಧಿಸಲಾಗುವುದು. ಸಾರ್ವಜನಿಕರು ಇಂತಹ ಘಟನೆಗಳ ಛಾಯಾಚಿತ್ರಗಳನ್ನು ತೆಗೆದು ಪಾಲಿಕೆಯ ಸಹಾಯವಾಣಿ ಸಂಖ್ಯೆ 08277234444 ಕ್ಕೆ ಅಥವಾ ಪಾಲಿಕೆಯ ದಾವಣಗೆರೆ ಸ್ಮಾರ್ಟ್‍ಆಪ್ ಮೂಲಕ ದೂರು ನೀಡಬಹುದಾಗಿದೆ. ನಗರದ ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಆಯುಕ್ತ ಡಾ. ಮಹಾಂತೇಶ್ ತಿಳಿಸಿದ್ದಾರೆ.
- Construction Waste Disposal
- Davangere City Corporation
- Davangere Cleanliness Drive
- Davangere Smart App
- Fine for Littering
- Mandatory Dustbins
- Public Helpline
- Solid Waste Management Bylaws 2019.
- Waste Segregation Rules
- Wet and Dry Waste
- ಕಟ್ಟಡ ತ್ಯಾಜ್ಯ ವಿಲೇವಾರಿ
- ಕಸ ವಿಂಗಡಣೆ ನಿಯಮ
- ಕಸದ ಡಬ್ಬಿ ಕಡ್ಡಾಯ
- ತ್ಯಾಜ್ಯ ನಿರ್ವಹಣೆ ಉಪ ವಿಧಿಗಳು 2019.
- ದಂಡದ ವಿವರ
- ದಾವಣಗೆರೆ ಮಹಾನಗರ ಪಾಲಿಕೆ
- ದಾವಣಗೆರೆ ಸ್ಮಾರ್ಟ್ ಆಪ್
- ದಾವಣಗೆರೆ ಸ್ವಚ್ಛತೆ
- ಸಾರ್ವಜನಿಕ ಸಹಾಯವಾಣಿ
- ಹಸಿ ಕಸ ಒಣ ಕಸ





Leave a comment