Home ದಾವಣಗೆರೆ ದಾವಣಗೆರೆಯಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಬೇಟೆ: 300 ಗ್ರಾಂ ಗಾಂಜಾ ವಶ, ಒಟ್ಟು 23 ಜನರ ವಿರುದ್ಧ ಪ್ರಕರಣ ದಾಖಲು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಬೇಟೆ: 300 ಗ್ರಾಂ ಗಾಂಜಾ ವಶ, ಒಟ್ಟು 23 ಜನರ ವಿರುದ್ಧ ಪ್ರಕರಣ ದಾಖಲು!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಾಗಾಟ ಹಾಗೂ ಸೇವನೆ ವಿರುದ್ಧ ಪೊಲೀಸ್ ಇಲಾಖೆ ತೀವ್ರ ಕಾರ್ಯಾಚರಣೆ ಮುಂದುವರಿಸಿದೆ. ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲಾ ಎಎನ್‌ಟಿಎಫ್ (ANTF) ತಂಡವು ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೋಮೆ ಲೇಔಟ್‌ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಮ್ಮದ್ ಸಾಹಿಲ್ (23) ಎಂಬಾತನನ್ನು ಬಂಧಿಸಿ, ಆತನಿಂದ 300 ಗ್ರಾಂ ಗಾಂಜಾ ಹಾಗೂ 1,100 ರೂ. ನಗದು ವಶಪಡಿಸಿಕೊಂಡಿದೆ.

ಆರೋಪಿ ಮಹಮ್ಮದ್ ಸಾಹಿಲ್ ಮೇಲೆ ಈಗಾಗಲೇ ಕೆಟಿಜೆ ನಗರ ಮತ್ತು ಆರ್‌ಎಂಸಿ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ (NDPS Act) ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಗಾಂಜಾ ಮಾರಾಟಗಾರನ ಬಂಧನ: ಕೆಟಿಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಮಹಮ್ಮದ್ ಸಾಹಿಲ್ ವಶಕ್ಕೆ; 300 ಗ್ರಾಂ ಗಾಂಜಾ ಸೀಜ್.

ಮಾದಕ ದ್ರವ್ಯ ವ್ಯಸನಿಗಳ ಮೇಲೆ ದಾಳಿ: ಎಎನ್‌ಟಿಎಫ್ ತಂಡವು ಕಳೆದ ಒಂದು ವಾರದಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯ ಸೇವಿಸುತ್ತಿದ್ದ ಒಟ್ಟು 22 ಜನ ವ್ಯಸನಿಗಳ ವಿರುದ್ಧವೂ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದೆ.

ಠಾಣಾವಾರು ಪ್ರಕರಣಗಳ ವಿವರ:

ಬಡಾವಣೆ ಪೊಲೀಸ್ ಠಾಣೆ: 8 ಜನ

ಸಂತೆಬೆನ್ನೂರು ಪೊಲೀಸ್ ಠಾಣೆ: 6 ಜನ

ಕೆಟಿಜೆ ನಗರ ಪೊಲೀಸ್ ಠಾಣೆ: 4 ಜನ

ವಿದ್ಯಾನಗರ ಪೊಲೀಸ್ ಠಾಣೆ: 3 ಜನ

ಗಾಂಧಿನಗರ ಪೊಲೀಸ್ ಠಾಣೆ: 1 ಜನ

ಮಾದಕ ದ್ರವ್ಯ ಜಾಲದ ವಿರುದ್ಧ ಜಿಲ್ಲೆಯಲ್ಲಿ ಇಲಾಖೆಯಿಂದ ಕಠಿಣ ಮುಂದುವರಿಯಲಿದ್ದು, ಯುವಜನತೆಯನ್ನು ದುಶ್ಚಟಗಳಿಂದ ರಕ್ಷಿಸಲು ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles