ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ: ತ್ಯಾಜ್ಯ ಸುರಿದು ಕಟ್ಟಿದ ದಂಡ 10.77ಲಕ್ಷ‌

On: January 4, 2025 9:30 PM
Follow Us:
---Advertisement---

ದಾವಣಗೆರೆ: ಎಲ್ಲೆಂದರಲ್ಲಿ ಘನ ತ್ಯಾಜ್ಯ ಎಸೆಯುವುದು, ಕಸಕ್ಕೆ ಬೆಂಕಿ ಹಚ್ಚುವುದು ಹಾಗೂ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡದಿರುವುದೂ ಸೇರಿದಂತೆ ತ್ಯಾಜ್ಯ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸುವವರಿಂದ ಮಹಾನಗರ ಪಾಲಿಕೆಯು 1 ವರ್ಷದ ಅವಧಿಯಲ್ಲಿ 310,77,200 ದಂಡ ಸಂಗ್ರಹಿಸಿದೆ.

2024ರ ಜನವರಿಯಿಂದ ಡಿಸೆಂಬರ್ ವರೆಗೆ ಪಾಲಿಕೆಯ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಒಟ್ಟು 297 ಪ್ರಕರಣಗಳನ್ನು ದಾಖಲಿಸಿಕೊಂಡು ತ್ಯಾಜ್ಯ ಬಿಸಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.

ರಸ್ತೆ ಬದಿಗಳಲ್ಲಿ, ವೃತ್ತಗಳಲ್ಲಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವವರು, ಎಲ್ಲೆಂದರದಲ್ಲಿ ಕಸಕ್ಕೆ ಬೆಂಕಿ ಹಚ್ಚುವವರು, ಕಟ್ಟಡದ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡದಿರುವವರು, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿರುವವರ ವಿರುದ್ಧ ಆರೋಗ್ಯ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ದಂಡ ಸಂಗ್ರಹಿಸುತ್ತಿದ್ದಾರೆ.

‘ಬಹುತೇಕ ಬಡಾವಣೆಗಳಲ್ಲಿ ನಿತ್ಯವೂ ಮನೆಗಳ ಬಳಿಯೇ ಪಾಲಿಕೆಯ ವಾಹನಗಳು ಕಸ ಸಂಗ್ರಹಿಸಲು ತೆರಳುತ್ತಿವೆ. ಆದರೂ, ಕೆಲವರು ತ್ಯಾಜ್ಯವನ್ನು ವಾಹನಗಳಿಗೆ ನೀಡುವುದಿಲ್ಲ. ಬದಲಾಗಿ ರಾತ್ರಿ ಇಲ್ಲವೇ ಮುಂಜಾನೆ ಎಲ್ಲೆಂದರಲ್ಲಿ ಸುರಿಯುತ್ತಾರೆ. ಇದರಿಂದ ನಗರದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ. ಇದನ್ನು ತಡೆಯಲು ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡವನ್ನೂ ವಿಧಿಸಲಾಗುತ್ತಿದೆ’ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು,

ಪಾಲಿಕೆಯಿಂದ ದಂಡದ ಪ್ರಯೋಗ ಹೆಚ್ಚುತ್ತಲೇ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ಪ್ರಮಾಣ ಇಳಿಮುಖವಾಗಿದೆ.
ಜನವರಿಯಲ್ಲಿ 446 ಪ್ರಕರಣ, ಫೆಬ್ರುವರಿ- 531, ಏಪ್ರಿಲ್- 507, ಮೇ- 456, ಜೂನ್- 531, ಜುಲೈ- 561 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ.

ಆ ಬಳಿಕ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ದಂಡ ವಿಧಿಸಿದ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿಲ್ಲ. ಮಾರ್ಚ್‌ನಲ್ಲಿ ಅತೀ ಕಡಿಮೆ 209 ಪ್ರಕರಣ (146,700 ದಂಡ) ಹಾಗೂ ಆಗಸ್ಟ್‌ ನಲ್ಲಿ ಅತಿ ಹೆಚ್ಚು 661 ಪ್ರಕರಣಗಳು (F1,42,800 ದಂಡ) ಕಂಡು ಬಂದಿವೆ. 2025ರ ಜ.3ರ ವರೆಗೆ 10 ಪ್ರಕರಣಗಳಲ್ಲಿ 14,200 ದಂಡ ಸಂಗ್ರಹಿಸಲಾಗಿದೆ.

ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಪ್ಪಿಸಲೆಂದೇ ಪಾಲಿಕೆಯು ಪ್ರಮುಖ ಸ್ಥಳಗಳಲ್ಲಿ 13 ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಜೊತೆಗೆ ನಗರದಲ್ಲಿ ಸ್ಮಾರ್ಟ್‌ಸಿಟಿಯಿಂದ ಅಳವಡಿಸಿರುವ ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿರುವ ದೃಶ್ಯಾವಳಿಯ ನೆರವನ್ನೂ ಪಡೆಯುತ್ತಿದೆ. ರಾತ್ರಿ ವೇಳೆ ಹೆಚ್ಚು ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಪಾಲಿಕೆಯ ಸೂಪರ್‌ವೈಸರ್‌ಗಳು ಕಾವಲು ಕಾಯುವ ಕೆಲಸವನ್ನೂ ಮಾಡುತ್ತಿದ್ದಾರೆ.
ತ್ಯಾಜ್ಯದ ವಿಚಾರದಲ್ಲಿ ನಿಯಮ ಉಲ್ಲಂಘಿಸುವವರು ‘ಕ್ಯಾಶ್ ಇಲ್ಲ’, “ಎಟಿಎಂ ಕಾರ್ಡ್ ಇಲ್ಲ’ ಎಂದೆಲ್ಲ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವಾಗಿದೆ. 45 ವಾರ್ಡ್‌ಗಳ ವ್ಯಾಪ್ತಿಯಲ್ಲಿ 19 ಜನ ಆರೋಗ್ಯ ನಿರೀಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಬ್ಬ ಆರೋಗ್ಯ ನಿರೀಕ್ಷಕರು 2-3 ವಾರ್ಡ್‌ಗಳ ಉಸ್ತುವಾರಿಯ ಹೊಣೆ ಹೊತ್ತಿದ್ದಾರೆ. ಎಲ್ಲರ ಬಳಿಯೂ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರಗಳಿವೆ. ನಗದು, ಎಟಿಎಂ ಕಾರ್ಡ್ ಇಲ್ಲವೇ ಯುಪಿಐ (ಪೋನ್‌ಪೇ, ಗೂಗಲ್‌ಪೇ ಹಾಗೂ ಇನ್ನಿತರ) ಮೂಲಕವೂ ಆರೋಗ್ಯ ನಿರೀಕ್ಷಕರು ದಂಡ ಸಂಗ್ರಹಿಸುತ್ತಿದ್ದಾರೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment