SUDDIKSHANA KANNADA NEWS/ DAVANAGERE/ DATE:21-08-2023
ದಾವಣಗೆರೆ(Davanagere): ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಒಟ್ಟಿಗೆ ಕಾಣಿಸಿಕೊಂಡರು.
ನಗರದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ 6ನೇ ವರ್ಷದ ಹಿಂದೂ ಮಹಾಗಣಪತಿಯ ಧ್ವಜ ಸ್ತಂಭ ಪೂಜಾ ಕಾರ್ಯಕ್ರಮ ಭಕ್ತಿಯಿಂದ ಜರುಗಿತು. ಈ ವೇಳೆ ಉಭಯ ನಾಯಕರು ಪರಸ್ಪರ ಮಾತನಾಡಿದರು. ಕುಶಲೋಪಚರಿ
ವಿಚಾರಿಸಿದರು. ಇದು ನೆರೆದಿದ್ದವರ ಗಮನ ಸೆಳೆಯಿತು. 2013ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ರವೀಂದ್ರನಾಥ್ ಅವರ ವಿರುದ್ಧ ಗೆದ್ದಿದ್ದರು. 2018ರಲ್ಲಿ ಮಲ್ಲಿಕಾರ್ಜುನ್ ವಿರುದ್ಧ ರವೀಂದ್ರನಾಥ್ ಅವರು ಗೆದ್ದಿದ್ದರು. 2023ರಲ್ಲಿ
ರವೀಂದ್ರನಾಥ್ ಅವರು ಸ್ಪರ್ಧೆ ಮಾಡಿರಲಿಲ್ಲ.
ಈ ಸುದ್ದಿಯನ್ನೂ ಓದಿ:
Parrots Problem: ಘೀಳಿಟ್ಟು ಬರುತ್ತಿದೆ ಲಕ್ಷಾಂತರ ಗಿಳಿಗಳ ಹಿಂಡು: “ಈ ಪ್ರದೇಶಗಳಿಗೆ” ಬಂದು ಮೆಕ್ಕೆಜೋಳ ನಾಶಪಡಿಸುವುದ್ಯಾಕೆ..? ಕಾಳು ಕುಕ್ಕಿ ತಿನ್ನುವ ಗಿಳಿಗಳಿಂದ ಹಿಂಡುತ್ತಿದೆ ರೈತರ ಕರುಳು…!
ಈ ಬಾರಿ ಶಕ್ತಿಪೀಠಗಳಲ್ಲಿ ಒಂದಾಗಿರುವ ಕೇದಾರನಾಥ ಮಹಾಮಂಟಪ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 12ರಿಂದ 13 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು
ಈ ಬಾರಿಯೂ 26 ದಿನಗಳ ಕಾಲ ಗಣಪತಿಯ ಆರಾಧನೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಧ್ಜಜಸ್ತಂಭದ ಪ್ರತಿಷ್ಠಾಪನೆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಹೆಚ್. ಶಿವಯೋಗಿಸ್ವಾಮಿ,
ಮಹಾನಗರ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್, ಜೊಳ್ಳಿ ಗುರುಮೂರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಕೆ.ಬಿ. ಶಂಕರನಾರಾಯಣ, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಅನಿಲ್ ಕುಮಾರ್,
ಮಂಜುನಾಥ್, ಮೋಹನ್ ಜೊಳ್ಳಿ ಮತ್ತಿತರರಿದ್ದರು.