SUDDIKSHANA KANNADA NEWS/ DAVANAGERE/ DATE:26-09-2023
ದಾವಣಗೆರೆ (Davanagere): ನಗರದ ವಿನೋಬನಗರದ 2ನೇ ಮುಖ್ಯ ರಸ್ತೆಯ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 31 ನೇ ವರ್ಷದ ಗಣೇಶೋತ್ಸವ ಮೆರವಣಿಗೆಯು ಅದ್ಧೂರಿಯಾಗಿ ನೆರವೇರಿತು. ಯುವಕ,ಯುವತಿಯರ
ನೃತ್ಯ ಎಲ್ಲರ ಗಮನ ಸೆಳೆಯಿತು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದರು.
ಈ ಸುದ್ದಿಯನ್ನೂ ಓದಿ:
ಹೋರಾಟಕ್ಕೆ ಸಿಕ್ಕ ಫಲ, ಹತ್ತು ದಿನ ನಿಲುಗಡೆ ಬೇಡ, ನೂರು ದಿನಗಳ ಕಾಲ ಭದ್ರಾ ಡ್ಯಾಂ (Bhadra Dam) ನೀರು ಹರಿಸಿ: ರೈತ ಮುಖಂಡರ ಆಗ್ರಹ
ವಿನಾಯಕ ಮೂರ್ತಿಯ ಮೆರವಣಿಗೆಗೆ ಎಸ್. ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಈ ವೇಳೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್, ಪಾಲಿಕೆ ಸದಸ್ಯ ಎ. ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಈ ವೇಳೆ ಮಾತನಾಡಿದ ಅವರು, ನಾನು ವಿನೋಬನಗರದ ಗಣೇಶೋತ್ಸವಕ್ಕೆ ಕಳೆದ 28 ವರ್ಷಗಳಿಂದಲೂ ಬರುತ್ತಿದ್ದೇನೆ. 1995ರಿಂದಲೂ ಟ್ರ್ಯಾಕ್ಟರ್ ಓಡಿಸುತ್ತಿದ್ದೇನೆ. ಈ ಮೂಲಕ ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇನೆ. ಮೊದಲು ಪ್ರಾರಂಭ ಮಾಡಿದ್ದು ಸಿದ್ಧಾರ್ಥ್. ಈಗ ಅವರಿಲ್ಲ. ಆವಾಗಿನಿಂದಲೂ ಬರುತ್ತಿದ್ದೇನೆ. ಕೆಲವರು ಇಂಥ ಹಬ್ಬಗಳಲ್ಲಿ ಬೆಂಕಿ ಹಚ್ಚೋದು. ಏನೇನೋ ಮಾಡೋದನ್ನು ಮಾಡುತ್ತಾರೆ. ಆದ್ರೆ, ಇಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ, ಮುಸಲ್ಮಾನರು, ಹಿಂದೂಗಳೆಲ್ಲರೂ ಸೇರಿಕೊಂಡು ಮೆರವಣಿಗೆ ನಡೆಸುತ್ತಿದ್ದಾರೆ. ಇದು ಖುಷಿಯ ವಿಚಾರ ಎಂದರು.
ಮೆರವಣಿಗೆಯಲ್ಲಿ ಮಸೀದಿಯ ಸಮೀಪ ಸಮಿತಿಯವರು ಹೂವಿನ ಹಾರ ಹಾಕಿ ಸ್ವಾಗತಿಸುವುದು ವಿಶೇಷ. ವೀರಗಾಸೆ, ಸಮಾಳ, ನಾಸಿಕ್ ಬಾಂಡ್ ಗಣೇಶನ ಮೆರವಣಿಗೆಗೆ ರಂಗು ತಂದಿತು.
ವಿನಾಯಕ ಮೂರ್ತಿಯನ್ನು 2 ನೇ ಮುಖ್ಯ ರಸ್ತೆಯ ಮೂಲಕ ಪಿ. ಬಿ. ರಸ್ತೆ, ಅರುಣ ಸರ್ಕಲ್ ನಿಂದ ರಾಂ ಅಂಡ್ ಕೋ ವೃತ್ತದ ಮೂಲಕ ಒಂದನೇ ಮೇನ್ ನಲ್ಲಿನ ಚೌಡೇಶ್ವರಿ ದೇವಸ್ಥಾನ ಹಾಗೂ ಪಿಬಿ ರಸ್ತೆಯ ಮೂಲಕ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.