SUDDIKSHANA KANNADA NEWS/ DAVANAGERE/ DATE: 07-09-2023
ದಾವಣಗೆರೆ (Davanagere): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಸೆಪ್ಟೆಂಬರ್ 8 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51 ರಲ್ಲಿ ವಿವಿಧ ಹುದ್ದೆಗಳ ಆಯ್ಕೆಗಾಗಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಈ ಆಯ್ಕೆ ಸಂದರ್ಶನದಲ್ಲಿ ಹಲವು ಖಾಸಗಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರಿಗೆ ಸದ್ಯಕ್ಕೆ ರಿಲೀಫ್, ಎಡದಂಡೆ ನಾಲೆ ನೀರು ಬಂದ್, ಬಲದಂಡೆ ನಾಲೆಯಲ್ಲಿ ನೀರು ಯಥಾಸ್ಥಿತಿ: ಆತಂಕಪಡಬೇಕಿಲ್ಲ ರೈತರು ಎಂದ ಮಧು ಬಂಗಾರಪ್ಪ
ಆಸಕ್ತ ಅಭ್ಯರ್ಥಿಗಳು ನಿಗಧಿತ ಸ್ಥಳ ಮತ್ತು ಸಮಯಕ್ಕೆ ಸರಿಯಾಗಿ ಆಧಾರ್ ಕಾರ್ಡ್‍ನೊಂದಿಗೆ 5 ಸೆಟ್ ಬಯೋಡಾಟಾ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 63615 50016, 08192 259446 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ರವೀಂದ್ರ. ಡಿ ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಮಾರಾಟ:
ದಾವಣಗೆರೆ(Davanagere)ಯ ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡಕರ್) ನಿಗಮದ ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 20 ರವರೆಗೆ ಅಪ್ಪಟ ಚರ್ಮದ ವಸ್ತುಗಳನ್ನು ರಿಯಾಯಿತಿ
ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಹೊಸ ಮಾದರಿಯ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್ ಮಹಿಳೆಯರ ಪರ್ಸ್, ವ್ಯಾನಿಟಿ ಬ್ಯಾಗ್‍ಗಳು ಶೇಕಡಾ 20 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ನಿಗಮವು ಗಣೇಶ ಹಬ್ಬದ ಪ್ರಯುಕ್ತ ಈ ರಿಯಾಯಾತಿ ನೀಡುತ್ತಿದ್ದು ಗ್ರಾಹಕರು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಮಾರಾಟ ಮಳಿಗೆ, ಟೆನ್ನಿಸ್ ಕೋರ್ಟ್ ಕಾಂಪ್ಲೆಕ್ಸ್, ಎ.ವಿ.ಕೆ ಕಾಲೇಜು ರಸ್ತೆ, ಇಲ್ಲಿಗೆ ಭೇಟಿ ನೀಡಿ ಖರೀದಿಸಬಹುದು ಎಂದು ಜಿಲ್ಲಾ ಸಂಯೋಜಕ ಹಾಗೂ ವ್ಯವಸ್ಥಾಪಕ ಗಂಗಾಧರ್ ತಿಳಿಸಿದ್ದಾರೆ.