SUDDIKSHANA KANNADA NEWS/ DAVANAGERE/ DATE:27-09-2023
ದಾವಣಗೆರೆ(Davanagere): ದಾವಣಗೆರೆ ಸಪ್ತಗಿರಿ ಕಾಲೇಜಿನವರು ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಿದ್ದರು. ಗುಂಪು ಆಟಗಳಲ್ಲಿ ಟೆನಿಸ್ ವಾಲಿಬಾಲ್ ಪಂದ್ಯಗಳನ್ನು ನಡೆಸಲು ಎಸ್ ಕೆ ಎ ಎಚ್ ಮಿಲತ್ ಪದವಿ ಪೂರ್ವ ಕಾಲೇಜಿಗೆ ಜವಾಬ್ದಾರಿ ನೀಡಲಾಗಿತ್ತು. ಇಂದು ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ಈ ಸುದ್ದಿಯನ್ನೂ ಓದಿ:
Davanagere: ಹೂಡಿಕೆದಾರರು ಹೋಟೆಲ್, ರೆಸಾರ್ಟ್ ಸ್ಥಾಪಿಸಿ: ಸಾವಿರಾರು ಜನರಿಗೆ ಉದ್ಯೋಗ ನೀಡಿ
ಬಾಲಕರು ಮತ್ತು ಬಾಲಕಿಯರು ಭಾಗವಹಿಸಿ ಬಾಲಕಿಯರ ವಿಭಾಗದಲ್ಲಿ ಎಸ್. ಕೆ. ಎ. ಎಚ್. ಮಿಲತ್ ಕಾಲೇಜ್ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ಸಿದ್ದಗಂಗಾ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು.
ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಸಿದ್ದಗಂಗಾ ಪದವಿ ಪೂರ್ವ ಕಾಲೇಜ್ ಪಡೆದರೆ, ಎಸ್ ಕೆ ಎಚ್ ಮಿಲತ್ ಕಾಲೇಜು ದ್ವಿತೀಯ ಬಹುಮಾನ ಪಡೆಯಿತು. ಈ ಟೆನ್ನಿಸ್ ವಾಲಿಬಾಲ್ ಪಂದ್ಯದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಟೆನ್ನಿಸ್ ವಾಲಿಬಾಲ್ ಪಂದ್ಯದಲ್ಲಿ ಗೆದ್ದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮಿಲತ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸೈಯದ್ ಸೈಫುಲ್ಲಾ, ಜಂಟಿ ಕಾರ್ಯದರ್ಶಿ ಸೈಯದ್ ಖಾಲಿದ್ ಅಹಮದ್ ಅವರು, ಆಡಳಿತ ಮಂಡಳಿ ಅಧಿಕಾರಿ ಸೈಯದ್ ಅಲಿ ಮತ್ತು ಎಸ್ ಕೆ ಎ ಎಚ್ ಮಿಲತ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಝುಲ್ಕರ್ ನೈನ್ ಹಾಗೂ ದೈಹಿಕ ಉಪನ್ಯಾಸಕ ರೋಷನ್ ಜಮೀರ್ ಅಭಿನಂದಿಸಿದ್ದಾರೆ.