ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

DAVANAGEREಯಲ್ಲಿ ಹಾಫ್ , ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸ್ತೀರಾ: ಈ ಸ್ಟೋರಿ ನೋಡ್ಲೇಬೇಕು!

On: February 22, 2025 9:19 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-02-2025

ದಾವಣಗೆರೆ (Davanagere): ಹಾಫ್ ಹೆಲ್ಮೆಟ್, ಐಎಸ್ಐ (ISI mark) ಮಾರ್ಕ್ ಇಲ್ಲದ, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸ್ತೀರಾ. ಹಾಗಾದ್ರೆ ಈ ಸ್ಟೋರಿ ನೋಡ್ಲೇಬೇಕು.

ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹಾಫ್ ಹೆಲ್ಮೆಟ್, ಗುಣಮಟ್ಟ ಇಲ್ಲದ ಕಾಟಾಚಾರಕ್ಕೆ ಎಂಬಂತೆ ಧರಿಸಿ ವಾಹನ ಚಲಾಯಿಸುವವರಿಗೆ ಇನ್ಮುಂದೆ ದಂಡ ಬೀಳುವುದು ಫಿಕ್ಸ್.

ಶುಕ್ರವಾರ ಮತ್ತು ಶನಿವಾರದಂದು ದಾವಣಗೆರೆ ನಗರದಲ್ಲಿ ಬರೋಬ್ಬರಿ 2 ಸಾವಿರ ಹಾಫ್ ಹೆಲ್ಮೆಟ್ ಮತ್ತು ಗುಣಮಟ್ಟ ಇಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: 

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಇಸ್ಪೀಟ್ ಅಡ್ಡೆ ಮೇಲೆ ಸಿಇಎನ್ ದಾಳಿ, 26 ಜನರ ಬಂಧನ – 24.86 ಲಕ್ಷ ರೂ. ವಶ!

ಮೋಟಾರ್ ಸೈಕಲ್ ಚಾಲಕರಿಗೆ ನಗರದ ಪ್ರಮುಖ ವೃತ್ತಗಳಾದ ಅರುಣಾ ಥಿಯೇಟರ್, ಸಂಗೊಳ್ಳಿ ರಾಯಣ್ಣ, ಎಸಿ ವೃತ್ತ, ಎಂ ಜಿ ವೃತ್ತ, ಗಡಿಯಾರ ಕಂಬ ವೃತ್ತಗಳಲ್ಲಿ ಹಾಫ್ ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚರಿಸುವ ಮೋಟಾರ್ ಸೈಕಲ್ ಚಾಲಕರಿಗೆ ಸುರಕ್ಷಿತಾ ದೃಷ್ಟಿಯಿಂದ ಅವುಗಳನ್ನು ಧರಿಸದಂತೆ ಸೂಚನೆ ನೀಡಲಾಯಿತು.

ಪ್ಲಾಸ್ಟಿಕ್ ಹೆಲ್ಮೆಟ್ / ಹಾಫ್ ಹೆಲ್ಮೆಟ್ ಬದಲಾಗಿ ಐಎಸ್ಐ ಗುಣಮಟ್ಟದ ಸುರಕ್ಷಿತಾ ಹೆಲ್ಮೆಟ್ ಗಳನ್ನು ಧರಿಸಿ ಮೋಟಾರ್ ಸೈಕಲ್ ಚಲಾಯಿಸಿ ಅಪಘಾತದಂತ ಸಂದರ್ಭದಲ್ಲಿ ತಮ್ಮ ಜೀವನ ಹಾನಿಯನ್ನು ತಡೆಯಬೇಕು ಎಂದು ಅರಿವು ಮೂಡಿಸಲಾಯಿತು.

ಕಳೆದೆರಡು ದಿನಗಳಲ್ಲಿ ಸುಮಾರು 2000 ಪ್ಲಾಸ್ಟಿಕ್, ಹಾಫ್ ಹೆಲ್ಮೆಟ್ ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಕೇವಲ ಈ ಬಾರಿ ಐಎಸ್ಐ ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಧರಿಸಿದವರಿಗೆ ಹಾಗೂ
ಪ್ಲಾಸ್ಟಿಕ್ ಹೆಲ್ಮೆಟ್, ಹಾಫ್ ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೆ ತಿಳುವಳಿಕೆ ನೀಡಿ ಹಾಗೆ ಕಳುಹಿಸಲಾಯಿತು.

ಈ ವಿಶೇಷ ಕಾರ್ಯಚರಣೆಯು ಭಾನುಾರ ಮತ್ತು ಸೋಮವಾರವೂ ಮುಂದುವರಿಯಲಿದೆ. ಸೋಮವಾರದಿಂದ ಐಎಸ್ಐ ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಧರಿಸಿ ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ದಂಡ ವಿಧಿಸುವುದು ಖಚಿತ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.

ಎಸ್ಪಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್ ಮತ್ತು ಜಿ. ಮಂಜುನಾಥ ಹಾಗೂ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರಂತೆ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ

ಸಿದ್ದರಾಮಯ್ಯರ ದುರಂಹಕಾರಿ ವರ್ತನೆಗೆ ಸ್ವಾಭಿಮಾನಿ ಅಧಿಕಾರಿ ಸ್ವಯಂನಿವೃತ್ತಿಗೆ ನಿರ್ಧಾರವಂತೆ!

ಕಾನೂನು

ತಕ್ಷಣ ಭೂಸ್ವಾಧೀನ ಕಾನೂನು ಹಿಂಪಡೆಯಿರಿ: ಸಿಎಂಗೆ ಪಂಡಿತಾರಾಧ್ಯ ಶ್ರೀಗಳ ಬಹಿರಂಗ ಮನವಿ

ಜುಲೈ 5ಕ್ಕೆ ಸಿದ್ಧಣ್ಣ ಜನುಮದಿನ: ಸರ್ವ ಜನಾಂಗದ ಪ್ರೀತಿಯ ಸರದಾರ.. ಬಿಜೆಪಿ ಕಟ್ಟಾಳು, ನಿಷ್ಠಾವಂತ ಡಾ. ಜಿ.ಎಂ. ಸಿದ್ದೇಶ್ವರ: ಬಾಡದ ಆನಂದರಾಜ್

ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ, ಈ ರಾಶಿಯ ದಂಪತಿಗಳಿಗೆ ಎಲ್ಲಾ ಇದ್ದರೂ ಮನಶಾಂತಿ ಇಲ್ಲ

Leave a Comment