ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

On: October 14, 2025 9:51 PM
Follow Us:
ಚನ್ನಗಿರಿ
---Advertisement---

SUDDIKSHANA KANNADA NEWS/DAVANAGERE/DATE:14_10_2025

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದ ಹೊರವಲಯದಲ್ಲಿರುವ ಜೆ ಎಚ್ ಪಟೇಲ್ ನಗರಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಭೇಟಿ ನೀಡಿದರು.

READ ALSO THIS STORY: ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತೀದ್ದಾರೆಯೇ?, ನಿಮ್ಮ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆಯೇ?, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆಯೇ? ಎಂದು ಸಾರ್ವಜನಿಕರನ್ನು ಉಮಾ ಪ್ರಶಾಂತ್ ಅವರು ಕೇಳಿದರು. ಇದಕ್ಕೆ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಇಲ್ಲಿನ ಬೀದಿಗಳಿಗೆ ಸಂಚರಿಸಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು. ಸಾರ್ವಜನಿಕರ ವಿಶೇಷವಾಗಿ ಮಹಿಳೆಯರೊಂದಿಗೆ ಮಾತನಾಡಿ ಕುಂದುಕೊರತೆಗಳನ್ನು ಆಲಿಸಿದರು. ಅಲ್ಲಿಯ ಮಕ್ಕಳೊಂದಿಗೆ ಬೆರೆತರು. ಅವರೊಟ್ಟಿಗೂ ಮಾತನಾಡಿ ಪೊಲೀಸರು ಅಂದರೆ ಭಯ ಅಲ್ಲ, ಭರವಸೆ ಎಂಬುದನ್ನು ತಿಳಿಸಿದರು.

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಸೈಬರ್ ಸುರಕ್ಷತೆ, ತುರ್ತು ಸಹಾಯವಾಣಿ ಹಾಗೂ ವಿವಿಧ ಜಾಗೃತಿಗಳು ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಫೋನ್ ನಂಬರ್ ಗಳನ್ನು ಒಳಗೊಂಡ ಪೋಸ್ಟ್ ರ್ ಅನ್ನು ಮನೆಗಳಿಗೆ ಅಂಟಿಸಿ ಯಾವುದೇ ತುರ್ತು ಸಂಧರ್ಭದಲ್ಲಿ 112 ಕ್ಕೆ ಕರೆ ಮಾಡಿ. ನಿಮ್ಮ ಸಮಸ್ಯೆಗಳು, ನಿಮ್ಮ ಪ್ರದೇಶದ ಸಮಸ್ಯಗಳು ಇದ್ದರೆ ಮನೆ ಮನೆಗೆ ಪೊಲೀಸ್ ಸ್ಟಿಕ್ಕರ್ ನಲ್ಲಿ ನೀಡಲಾಗಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿಸಬಹುದು. ಅಲ್ಲದೇ ಬೀಟ್ ವಾಟ್ಸಾಪ್ ಗ್ರೂಪ್ ಗಳಲ್ಲಿ ಮಾಹಿತಿ ನೀಡಬಹುದು. ನಿಮ್ಮ ನಿಮ್ಮ ಬೀಟ್ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ಯಾವುದೇ ಸಮಸ್ಯಗಳಿದ್ದರೂ ಮಾಹಿತಿ ನೀಡುವಂತೆ ಉಮಾ ಪ್ರಶಾಂತ್ ಅವರು ತಿಳಿಸಿದರು.

ಸಾರ್ವಜನಿಕರೊಂದಿಗೆ ಮಾತನಾಡಿ ಪ್ರತಿ ಒಂದು ಬೀಟ್ 30 ರಿಂದ 40 ಜನ ಜವಾಬ್ದಾರಿಯುತ ನಾಗರಿಕರನ್ನ ಬೀಟ್ ಸದಸ್ಯರಾಗಿ ಮಾಡಿದ್ದಾರೆ. ನೀವು ಬೀಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ನಿಮ್ಮ ಕರ್ತವ್ಯ. ನಿಮ್ಮ ಬೀಟ್ ನ ಯಾವುದೇ ಪ್ರದೇಶದ ಸಮಸ್ಯೆಯ ಬಗ್ಗೆ ವಾಟ್ಸಾಪ್ ಗ್ರೂಪ್ ನಲ್ಲಿ ಮಾಹಿತಿ ನೀಡಿ. ಬೇರೆ ಊರಿಂದ ಬಂದು ಮಾದಕ ವಸ್ತುಗಳು, ಗಾಂಜಾ ಆಗಲಿ, ಡ್ರಗ್ಸ್ ಆಗಲಿ ಇಂತ ಏನಾದರೂ ಚಟುವಟಿಕೆಗಳು ಇದ್ದರೆ ನೀವು ದಯವಿಟ್ಟು ನಮಗೆ ಪೊಲೀಸರಿಗೆ ತಿಳಿಸಬೇಕು ಎಂದು ಹೇಳಿದರು.

ಜವಾಬ್ದಾರಿಯುತ ನಾಗರಿಕ ಆಗಿರುವ ಎಲ್ಲರಿಗೂ ಬೀಟ್ ಸದಸ್ಯನಾಗಲು ಅವಕಾಶವಿದೆ. ನಿಮ್ಮ ಪ್ರದೇಶದ ಸಮಸ್ಯೆ ಯಾವುದೇ ಇದ್ದರೆ ಗ್ರೂಪ್ ನಲ್ಲಿ ಹಾಕಿ ಮಹಿತಿ ನೀಡಿ. ನಮ್ಮವರು ಪ್ರತಿ ಮನೆಗೂ ಭೇಟಿ ಮಾಡಿ ಸಮಸ್ಯಗಳನ್ನು ಆಲಿಸುತ್ತಾರೆ. ಯಾರಿಗೆ ಕೂಡ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೊಡುವ ಅವಶ್ಯಕತೆ ಇಲ್ಲ. ಸೈಬರ್ ಕ್ರೈಂಗೆ ಸಂಬಂಧಿಸಿದ ಡ್ರಗ್ಸ್ ಗೆ ಸಂಬಂಧಿಸಿದ ಮಹಿಳೆಯರ ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಜನರಿಗೆ ಪೊಲೀಸರಲ್ಲಿ ಹೆಚ್ಚು ವಿಶ್ವಾಸವನ್ನ ಬೆಳೆಸುವ ನಿಟ್ಟಿನಲ್ಲಿ ನೀವು ನಮ್ಮ ಜೊತೆಯಲ್ಲಿ ಸೇರಿ ಕೆಲಸ ಮಾಡುವ ನಿಟ್ಟಿನಲ್ಲಿ ನಿಮ್ಮ ಸ್ಥಳೀಯ ಮಾಹಿತಿ ನೀಡಿ ಬೆಂಬಲಿಸಿ ಎಂದು ಹೇಳಿದರು.

ಈಗ ಪೊಲೀಸರು ಕೂಡ ಜನ ಸ್ನೇಹಿ ಆಗಿದ್ದಾರೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಚಾಲನೆ ನೀಡಲಾಗಿದೆ. ಒಂಟಿ ಮಹಿಳೆಯರು ಇರಬಹುದು, ವಯಸ್ಸಾದಂತಹ ತಂದೆ ತಾಯಂದಿರು ಸಿಂಗಲ್ ಪೇರೆಂಟ್ ಅವರಿಗೆ ಏನಾದರೂ ಸಮಸ್ಯೆಗಳು ಇರಬಹುದು, ಮನೆಗೆ ಪೊಲೀಸರು ಭೇಟಿ ನೀಡಿದಾಗ ನಿಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಎಂದು ಸೂಚಿಸಿದರು.

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗಬೇಕು, ಸರಿಯಾಗಿ ನಿರ್ವಹಣೆ ಆಗಬೇಕಾದರೆ ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ. ನಾವು ನಿಮ್ಮ ಕ್ಷೇಮವನ್ನ ವಿಚಾರಿಸಲಿಕ್ಕೆ ಬರುತ್ತೇವೆ. ಈ ಒಂದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನ ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತರುವಲ್ಲಿ ನೀವೆಲ್ಲರೂ ಕೂಡ ಸಹಕಾರ ನೀಡಬೇಕು ಎಂದು ಹೇಳಿದರು.

ನಿಮ್ಮ ಮನೆಗಳ ಹೊರಗಡೆ, ವ್ಯವಹಾರ ಸ್ಥಳಗಳಲ್ಲಿ ಹಾಗೂ ನಿಮ್ಮ ಬೀದಿಗಳಲ್ಲಿ ಸಿಸಿಟಿವಿ ಗಳನ್ನು ಅಳವಡಿಸಿ, ಇದರಿಂದ ಅಪರಾಧಗಳನ್ನು ತಡೆಯಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ತುಂಬಾ ಸಹಕಾರಿಯಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಲೋಕ ಸ್ಪಂದನಾ
ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿದ್ದು, ಸಾರ್ವಜನಿಕರು ಠಾಣೆಗಳಿಗೆ ಭೇಟಿ ನೀಡಿದಾಗ ಪೊಲೀಸರ ಕಾರ್ಯದ ಬಗ್ಗೆ, ಪೊಲೀಸರ ಸ್ಪಂದನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಇದರಿಂದ ಸಾರ್ವಜನಿಕರೊಂದಿಗೆ ಪೊಲೀಸರ ವರ್ತನೆ, ಸ್ಪಂದನೆ, ಪೊಲೀಸರ ಕಾರ್ಯಗಳ ಬಗ್ಗೆ ನಿಗಾವಹಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಬಾಲ್ಯ ವಿವಾಹವನ್ನು ಅಥವಾ ಪೋಕ್ಸೋ ಕಾಯ್ದೆಯನ್ನ ಸರಿಯಾದ ನಿಟ್ಟಿನಲ್ಲಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಹೆಣ್ಣುಮಕ್ಕಳಿಗೆ ಶಿಕ್ಷಣವನ್ನ ಕೊಡಿಸಿ. ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡಿ. ಅವರನ್ನು ಸಮಾನತೆಯಿಂದ ನೋಡಿ. ನೀವು ಅವರಿಗೆ ಧೈರ್ಯ ತುಂಬಬೇಕು. ಈ ಮನೆಮನೆ ಪೊಲೀಸ್ ಕಾರ್ಯಕ್ರಮ ಯಶಸ್ವಿಯಾಗಲು ನೀವೆಲ್ಲರೂ ಕೈ ಜೋಡಿಸಿ. ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ. ನಮ್ಮ ಕರ್ತವ್ಯದ ಜೊತೆಗೆ ನೀವು ಕೈ ಜೋಡಿಸಿ ಎಂದರು.

ಈ ಸಂದರ್ಭದಲ್ಲಿ ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಶ್, ಪಿಎಸ್ ಐ ಸುರೇಶ್ ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಐಪಿಎಸ್

ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಪತ್ನಿ ಬಂಧನದವರೆಗೆ ಅಂತ್ಯಕ್ರಿಯೆ ನೆರವೇರಿಸಲ್ಲ: ಮೃತ ಎಎಸ್ಐ ಸಂದೀಪ್ ಕುಟುಂಬ ಪಟ್ಟು!

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

Leave a Comment