ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಹಿರಿಯ ಮುಖಂಡ ಸೈಯದ್ ಸೈಫುಲ್ಲಾರ ಪುತ್ರ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಸಾಧಿಕ್
ಪೈಲ್ವಾನ್ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕಾಂಗ್ರೆಸ್ ಹೈಕಮಾಂಡ್‌ಗೆ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳ ಸಾರಾಂಶ ಇಲ್ಲಿದೆ:
ಮುಖ್ಯಾಂಶಗಳು: ಅಲ್ಪಸಂಖ್ಯಾತ ಮುಖಂಡರ ಆಗ್ರಹ
ದಾವಣಗೆರೆ ದಕ್ಷಿಣ ಕ್ಷೇತ್ರವು ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇಲ್ಲಿನ ಅಲ್ಪಸಂಖ್ಯಾತ ಮತದಾರರು ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಮುಖಂಡರ ಪ್ರಬಲ ವಾದವಾಗಿದೆ.
ಪ್ರಮುಖ ಬೇಡಿಕೆಗಳು ಮತ್ತು ಅಂಶಗಳು:
ಟಿಕೆಟ್ ಆಕಾಂಕ್ಷಿಗಳು: ಅಲ್ಪಸಂಖ್ಯಾತ ಸಮುದಾಯದಿಂದ ಈ ಕೆಳಗಿನ ಮೂವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗಿದೆ:
ಅಬ್ದುಲ್ ಜಬ್ಬಾರ್ (ವಿಧಾನ ಪರಿಷತ್ ಸದಸ್ಯರು)
ಸೈಯದ್ ಖಾಲಿದ್ ಅಹ್ಮದ್ (ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ)
ಸಾಧಿಕ್ ಪೈಲ್ವಾನ್
ಐತಿಹಾಸಿಕ ಬೆಂಬಲ: ಕಳೆದ ನಾಲ್ಕು ಬಾರಿ ಡಾ. ಶಾಮನೂರು ಶಿವಶಂಕರಪ್ಪ ಅವರು ಸ್ಪರ್ಧಿಸಿದಾಗಲೂ ಮುಸ್ಲಿಂ ಸಮುದಾಯವು ಒಗ್ಗಟ್ಟಿನಿಂದ ಬೆಂಬಲಿಸಿ ಅವರ ಗೆಲುವಿಗೆ ಕಾರಣವಾಗಿತ್ತು.
ಪ್ರಾತಿನಿಧ್ಯದ ಹಕ್ಕು: ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳದೆ, ಅಧಿಕಾರ ಹಂಚಿಕೆಯಲ್ಲೂ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮುಖಂಡರು ತಿಳಿಸಿದ್ದಾರೆ.
ಸಚಿವರಿಗೆ ಮನವಿ: ದಾವಣಗೆರೆ ಉತ್ತರ ಶಾಸಕ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಬೇಕು ಎಂದು ಮುಖಂಡರು ಕೇಳಿಕೊಂಡಿದ್ದಾರೆ.
ಹಲವು ದಶಕಗಳಿಂದಲೂ ಕಾಂಗ್ರೆಸ್ ಪಕ್ಷವನ್ನು ಅಲ್ಪಸಂಖ್ಯಾತ ಸಮುದಾಯವು ಬೆಂಬಲಿಸಿಕೊಂಡು ಬರುತ್ತಿದೆ. ಡಾ. ಶಾಮನೂರು ಶಿವಶಂಕರಪ್ಪರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವಾದಾಗಿನಿಂದ ಸ್ಪರ್ಧೆ ಮಾಡುತ್ತಿದ್ದರು. ಆಗ ಅಲ್ಪಸಂಖ್ಯಾತ ಸಮುದಾಯವು ಶಾಮನೂರು ಶಿವಶಂಕರಪ್ಪರನ್ನು ಬೆಂಬಲಿಸಿ ಗೆಲ್ಲಿಸಿದೆ. ನಾಲ್ಕು ಬಾರಿ ಈ ಕ್ಷೇತ್ರದಿಂದ ಕಣಕ್ಕಿಳಿದು ಶಿವಶಂಕರಪ್ಪರು ಶಾಸಕರಾಗಿದ್ದರು. ಈಗ ಅವರ ನಿಧನದಿಂದ ಉಪಚುನಾವಣೆ ಎದುರಾಗುತ್ತಿದ್ದು, ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕೇವಲ ಮತ ಹಾಕಿಸಿಕೊಳ್ಳಲ್ಲಷ್ಟೇ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯ ಬಳಸಿಕೊಳ್ಳಬಾರದು. ಅವಕಾಶ ಇದ್ದಾಗ ಬೆಳೆಸಬೇಕು. ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ ಗೆಲುವು ಖಚಿತ. ಆದ್ದರಿಂದ ಸಮುದಾಯದ ಅಬ್ದುಲ್ ಜಬ್ಬಾರ್, ಸೈಯದ್ ಖಾಲಿದ್ ಅಹ್ಮದ್, ಸಾಧಿಕ್ ಪೈಲ್ವಾನ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರಲ್ಲಿ ಒಬ್ಬರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು. ಸಚಿವರೂ ಆಗಿದ್ದಾರೆ. ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದರಾಗಿದ್ದಾರೆ. ಹಾಗಾಗಿ, ಮಲ್ಲಿಕಾರ್ಜುನ್ ಅವರೇ ಹೈಕಮಾಂಡ್ ಮೇಲೆ ಒತ್ತಡ ಹೇರಿ
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಸತ್ತರ್ ಸಾಬ್, ಮೊಹಮ್ಮದ್ ಜಬೀವುಲ್ಲಾ, ತಮನ್ನಾ ರಫಿಕ್, ನಿಸಾರ್ ಅಹ್ಮದ್, ಫಾರೂಕ್, ಬಾಷಾ ಮತ್ತಿತತರು ಹಾಜರಿದ್ದರು.
- Abdul Jabbar
- Congress Ticket Demand
- DAVANAGERE NEWS
- Davanagere South Bypoll
- Karnataka Politics
- Minority Community
- Muslim Leaders
- Sadiq Pailwan
- Shamanur Shivashankarappa
- SS Mallikarjun
- Syed Khalid Ahmed
- ಅಬ್ದುಲ್ ಜಬ್ಬಾರ್
- ಅಲ್ಪಸಂಖ್ಯಾತ ಸಮುದಾಯ
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಟಿಕೆಟ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಶಾಮನೂರು ಶಿವಶಂಕರಪ್ಪ
- ಸಾಧಿಕ್ ಪೈಲ್ವಾನ್
- ಸೈಯದ್ ಖಾಲಿದ್ ಅಹ್ಮದ್





Leave a comment