Home ದಾವಣಗೆರೆ ಮೇ 4ಕ್ಕೆ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ವಿಜಯೋತ್ಸವ ಖಚಿತ: ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ವಿಶ್ವಾಸ
ದಾವಣಗೆರೆಬೆಂಗಳೂರು

ಮೇ 4ಕ್ಕೆ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ವಿಜಯೋತ್ಸವ ಖಚಿತ: ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ವಿಶ್ವಾಸ

Share
ದಾವಣಗೆರೆ
Share

ದಾವಣಗೆರೆ: ಮೇ. 4 ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಅಂದು ಬಿಜೆಪಿಯು ಗೆಲುವಿನ ನಗೆ ಬೀರಲಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಮಾಲಿ ಮಾಡುತ್ತಿದ್ದವರ ಮಗ ವಿಧಾನಸಭೆ ಪ್ರವೇಶ ಮಾಡಬೇಕೆಂಬ ಆಸೆ ಕ್ಷೇತ್ರದ ಜನರಲ್ಲಿದೆ. ಈ ಬಾರಿ ನನ್ನನ್ನು ಆಶೀರ್ವದಿಸಿ, ವಿಧಾನಸಭೆಗೆ ಕಳುಹಿಸಿಕೊಡುತ್ತಾರೆ
ಎಂದು ಹೇಳಿದರು.

ನಾನು ಯಾರ ಹೆಸರು ಹೇಳುವುದಿಲ್ಲ. ನನ್ನ ವಿರೋಧಿ ಏನಿದ್ದರೂ ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಸೋಲಿಸುವುದಷ್ಟೇ ನನ್ನ ಗುರಿ. ಎಲ್ಲಾ ಕಡೆಗಳಿಂದಲೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮುಸ್ಲಿಂ ಸಮುದಾಯದ ಯುವಕರು ಪಕ್ಷದ ತತ್ವ, ಸಿದ್ಧಾಂತ
ಒಪ್ಪಿ ಬರುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಇತಿಹಾ ಬರೆಯಲಿದೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *