Home ದಾವಣಗೆರೆ ಭ್ರಷ್ಟ, ಮನೆಹಾಳ ಕಾಂಗ್ರೆಸ್ ತೊಲಗಿಸಲು, ಲಂಚದ ಸರ್ಕಾರ ಕಿತ್ತೊಗೆಯಲು ಬಿಜೆಪಿ ಬೆಂಬಲಿಸಿ: ಆರ್. ಅಶೋಕ್
ದಾವಣಗೆರೆಬೆಂಗಳೂರು

ಭ್ರಷ್ಟ, ಮನೆಹಾಳ ಕಾಂಗ್ರೆಸ್ ತೊಲಗಿಸಲು, ಲಂಚದ ಸರ್ಕಾರ ಕಿತ್ತೊಗೆಯಲು ಬಿಜೆಪಿ ಬೆಂಬಲಿಸಿ: ಆರ್. ಅಶೋಕ್

Share
ಆರ್. ಆಶೋಕ್
Share

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಬಾರಿ ಬಿಜೆಪಿ ಗೆಲ್ಲಿಸಿ. ಮಾದರಿ ಕ್ಷೇತ್ರವನ್ನಾಗಿಸಲು ಬಿಜೆಪಿ ಶ್ರಮಿಸಲಿದೆ. ಅಭಿವೃದ್ಧಿ ವಿರೋಧಿ, ಭ್ರಷ್ಟ, ಮನೆಹಾಳ ಕಾಂಗ್ರೆಸ್ ತೊಲಗಿಸಲು, ಲಂಚದ ಸರ್ಕಾರ ಕಿತ್ತೊಗೆಯಲು ಬಿಜೆಪಿ ಬೆಂಬಲಿಸಿ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಮನವಿ ಮಾಡಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದಲ್ಲಿ ಒಂದೇ ಮನೆಯವರಿಗೆ ಅಧಿಕಾರ ಸಿಕ್ಕರೆ ದರ್ಪ ಹೆಚ್ಚುತ್ತೆ. ಜನರಿಗೆ ಸ್ಪಂದಿಸುವುದಿಲ್ಲ. ಅವರು ಮಾತನಾಡುವ ಶೈಲಿ ಸಹ ಬದಲಾಗುತ್ತೆ. ಈ ಸರ್ವಾಧಿಕಾರ ದಿಕ್ಕರಿಸಿ ಬಿಜೆಪಿ ಬೆಂಬಲಿಸಿ. ಕ್ಷೇತ್ರದಲ್ಲಿ ದಲಿತ ಮುಖಂಡನನ್ನು ಗುರುತಿಸಿ ಬಿಜೆಪಿ ಟಿಕೆಟ್ ನೀಡಿದೆ. ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಮನೆಯ ಮಗನಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.

ದಕ್ಷಿಣ ಕ್ಷೇತ್ರದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆ, ಕುಡಿಯವ ನೀರು, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ, ನಗರ ನಿರ್ವಹಣೆ, ಶಿಕ್ಷಣ ಮುಂತಾದವುಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಸಿದ್ದರಾಮಯ್ಯ ಅವರು ಮಜಾರಾಮಯ್ಯ ಆಗಿದ್ದಾರೆ. ಅವರು ಸಮಾಜವಾದಿಯಲ್ಲ. ಅವರು ದಾಖಲೆಯ ಬಜೆಟ್ ಮಂಡಿಸಿದ್ದರೂ ಕರ್ನಾಟಕದ ಆರ್ಥಿಕ ಸ್ಥಿತಿ ಐಸಿಯುನಲ್ಲಿ ಇದೆ. ಆರ್ಥಿಕ ಶಿಸ್ತು ದಾಟಿ ಮ್ಯಾಜಿಕ್ ಮಾಡಿ ನಿಲ್ಲಿಸಿದ್ದಾರೆ. ಅವರು ಘೋಷಿಸಿದ ಗ್ಯಾರಂಟಿಗಳ ಹಣವನ್ನೂ ಸರಿಯಾಗಿ ನೀಡಲಿಲ್ಲ. ಎಲ್ಲ ಗ್ಯಾರಂಟಿಗಳ ಹಣವನ್ನೂ ಲಪಟಾಯಿಸಿದ್ದಾರೆ. ಅಭಿವೃದ್ಧಿ ಮಾಡದೆ ಸಾಲ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಯಾವ ಮುಖ ಇಟ್ಟುಕೊಂಡು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಬೈಯುತ್ತಾರೆ. ಸಿದ್ದರಾಮಯ್ಯ ಅವರದ್ದು ಫೋನ್ ಪೇ ಸರ್ಕಾರ, ಲಂಚದ ಸರ್ಕಾರ. ಬಿಜೆಪಿಯವರು ಇದ್ದಾಗ ಅಭಿವೃದ್ಧಿ ಇಲ್ಲ ಅಂತ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಕಾಂಗ್ರೆಸ್ ಬಂದಾಗ ಮಾತ್ರ ಒಂದೇ ಒಂದು ಬಸ್ ಸ್ಟ್ಯಾಂಡ್ ಕಟ್ಟಿಲ್ಲ. ಬಸ್‍ಗಳಿಲ್ಲ, ಶಿಕ್ಷಕರ ನೇಮಕ ಆಗಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದರು.

ಅಲ್ಪಸಂಖ್ಯಾತರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ದ್ರೋಹ ಬಗೆದಿದೆ. ಅವರ ಮತಗಳು ಬಿಜೆಪಿಗೆ ಸಿಗಲಿವೆ ಎಂಬ ವಿಶ್ವಾಸ ಇದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ತ್ರಿಭಾಷಾ ಸೂತ್ರ ತಂದ ಪುಣ್ಯಾತ್ಮರು ಯಾರು. ಗಾಂಧಿ ಅವರು ಮೂವತ್ತು ವರ್ಷ ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ನೆಹರು ಮತ್ತು ಇಂದಿರಾ ಅವರು ಹಿಂದಿ ಪ್ರಚಾರ ಆಗಲು ಪ್ರೋತ್ಸಾಹಿಸಿದ್ದರು. ಈಗ ಇವರೇ ಹಿಂದಿ ಕಡ್ಡಾಯ ಅಲ್ಲ ಅಂತಿದ್ದಾರೆ. ನರೇಗಾ ಹೆಸರು ಬದಲಾಯಿಸಿದ್ದಕ್ಕೆ ಬಾಯಿ ಬಾಯಿ ಬಡಕೊಂಡವರು ಈಗ ಹಿಂದಿ ಕಡ್ಡಾಯ ಅಲ್ಲ ಅಂದಾಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಹಿಂದಿ ಕಡ್ಡಾಯ ಅಲ್ಲ ಎಂದು ಪರೀಕ್ಷೆ ವೇಳೆ ಹೇಳುವ ಬದಲು ಶಾಲೆ ಆರಂಭದಲ್ಲೇ ಹೇಳಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *