ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯನ್ನು ಪಾಲಿಕೆಯ ಪ್ರಧಾನ ಕಚೇರಿಯಲ್ಲಿ ತೆರೆಯಲಾಗಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 26 ರವರೆಗೆ ಇಲ್ಲಿ ನಡೆಯಲಿದೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳೊಂದಿಗೆ ಹೆಚ್ಚಿನ ಸಂಖ್ಯೆಯ ವಾಹನಗಳು ಮತ್ತು ಬೆಂಬಲಿಗರು ಆಗಮಿಸುವ ಸಂಭವ ಇರುವುದರಿಂದ, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಹಾನಗರ ಪಾಲಿಕೆಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ಘೋಷಿಸಿದ್ದಾರೆ.
ಚುನಾವಣಾ ಸಂಬಂಧಿತ ಮಾಹಿತಿಗಾಗಿ ಸಾರ್ವಜನಿಕರು ಚುನಾವಣಾ ಶಾಖೆ: 08192-252899, ಆಯುಕ್ತರ ಕಚೇರಿ: 08192-252793, ಮತದಾರರ ನೊಂದಣಾಧಿಕಾರಿಗಳು: 08192-236566 ಇ-ಮೇಲ್: ero.dvg.cmc@gmail.com ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- 100 Meters Prohibited Area
- April 9 Polling
- Davanagere City Corporation
- DAVANAGERE NEWS
- Davanagere South By-Election 2026
- Election Commission Karnataka
- Nomination Process
- ಕರ್ನಾಟಕ ಉಪಚುನಾವಣೆ ಅಪ್ಡೇಟ್ಸ್.
- ಚುನಾವಣಾ ನಿಯಮಗಳು
- ದಾವಣಗೆರೆ ದಕ್ಷಿಣ ಉಪಚುನಾವಣೆ
- ನಾಮಪತ್ರ ಸಲ್ಲಿಕೆ
- ನಿಷೇಧಿತ ಪ್ರದೇಶ
- ಮಹಾನಗರ ಪಾಲಿಕೆ ದಾವಣಗೆರೆ
- ಸಂತೋಷ್ ಕುಮಾರ್ ಚುನಾವಣಾಧಿಕಾರಿ





Leave a comment