Home ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: 2.31 ಲಕ್ಷ ಮತದಾರರಿಂದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ; ಮಾರ್ಚ್ 24ರೊಳಗೆ ಹೆಸರು ನೋಂದಣಿಗೆ ಅವಕಾಶ
Home

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: 2.31 ಲಕ್ಷ ಮತದಾರರಿಂದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ; ಮಾರ್ಚ್ 24ರೊಳಗೆ ಹೆಸರು ನೋಂದಣಿಗೆ ಅವಕಾಶ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿದ್ದು, ಇದರಲ್ಲಿ 234 ನಗರ ವ್ಯಾಪ್ತಿಯಲ್ಲಿದ್ದರೆ, 50 ಗ್ರಾಮೀಣ ಭಾಗದಲ್ಲಿವೆ.

ಒಟ್ಟು 284 ಮತಗಟ್ಟೆಗಳಲ್ಲಿ ಪುರುಷ 1,13,654, ಮಹಿಳೆಯರು 1,17,986, ತೃತೀಯ ಲಿಂಗಿಗಳು 43 ಸೇರಿ ಒಟ್ಟು 2,31,683 ಮತದಾರರಿದ್ದಾರೆ. ಇದರಲ್ಲಿ ಪುರುಷರು 1,452 ಪುರುಷ, 1,322 ಮಹಿಳಾ ಸೇರಿ ಒಟ್ಟು 2,774 ಯುವ ಮತದಾರರಿದ್ದಾರೆ, ವಿಶೇಷ ಚೇತನರಲ್ಲಿ ಪುರುಷರು 1,379, ಮಹಿಳೆಯರು 1,139 ಒಟ್ಟು 2,518 ವಿಶೇಷ ಚೇತನ ಮತದಾರರಿದ್ದಾರೆ. 85 ವರ್ಷಗಳಿಗಿಂತ ಹೆಚ್ಚು ವಯೋಮಾನದ 928 ಪುರುಷರು, 1,138 ಮಹಿಳೆಯರು ಸೇರಿ ಒಟ್ಟು 2,066 ಮತದಾರರಿದ್ದಾರೆ, ಇವರುಗಳಿಗೆ ಮನೆಯಿಂದಲೇ ಅಂಚೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ

ಕೇವಲ ಎಪಿಕ್ ಕಾರ್ಡ್ ಹೊಂದಿದ್ದರೆ ಮಾತ್ರ ಮತ ಚಲಾಯಿಸಲು ಸಾಧ್ಯವಿಲ್ಲ, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿದ ಅಂತಿಮ ದಿನಾಂಕದ 10 ದಿನಗಳ ಮೊದಲೇ ಅಂದರೆ ಮಾರ್ಚ್ 24 ರೊಳಗೆ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ನಾಮಪತ್ರ ಸಲ್ಲಿಸಿದ ದಿನದಿಂದ ಫಲಿತಾಂಶ ಘೋಷಣೆಯಾಗುವವರೆಗೆ ಎಲ್ಲಾ ವೆಚ್ಚಗಳ ಲೆಕ್ಕಪತ್ರವನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಪ್ರತಿ ಅಭ್ಯರ್ಥಿಯು ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಗರಿಷ್ಠ ವೆಚ್ಚದ ಮಿತಿಯನ್ನು ರೂ. 40 ಲಕ್ಷಗಳಿಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಮ್ಮ ವೆಚ್ಚದ ವಿವರಗಳನ್ನು ನೋಡಿಕೊಳ್ಳಲು ಒಬ್ಬ ‘ಚುನಾವಣಾ ವೆಚ್ಚ ಏಜೆಂಟ್’ ಅನ್ನು ನೇಮಿಸಿಕೊಳ್ಳಬಹುದು.

ಚುನಾವಣೆ ಉಸ್ತುವಾರಿಗಾಗಿ 3 ಅಧಿಕಾರಿಗಳ 8 ಫ್ಲೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಸರ್ವೆಲೆನ್ಸ್ ತಂಡ, ವೀಡಿಯೋ ವೀಕ್ಷಕರ ತಂಡ, ಲೆಕ್ಕಪತ್ರ ತಂಡ ಸೇರಿದಂತೆ ದಕ್ಷಿಣ ಕ್ಷೇತ್ರದ ಎಲ್ಲಾ ಗಡಿ ಸೇರಿದಂತೆ 12 ಕಡೆ ಚೆಕ್- ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಎಸ್.ಐ ಒಳಗೊಂಡ ಪೊಲೀಸ್, ಅಬಕಾರಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷವೊಡ್ಡುವ ಬಗ್ಗೆ, ಅನಧಿಕೃತ ಮದ್ಯ ಮಾರಾಟ, ಹಣ ಹಂಚಿಕೆ ಇತ್ಯಾದಿ ಅಂಶಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ವೆಚ್ಚ ಮೇಲ್ವಿಚಾರಣಾ ನಿಯಂತ್ರಣ ಕೊಠಡಿ ಮತ್ತು ಕರೆ ಕೇಂದ್ರ ಪ್ರಾರಂಭಿಸಲಾಗಿದೆ. ಮತದಾರರ ಪಟ್ಟಿಯ ಬಗ್ಗೆ ಹಾಗೂ ವೆಚ್ಚಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ದೂರುಗಳಿಗೆ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1950 ಕರೆ ಮಾಡಿ, ದೂರು ನೀಡಬಹುದಾಗಿದೆ.

ಸಿವಿಜಿಲ್ ಆಪ್ ಬಳಸಿ:

ಮುಕ್ತ, ನ್ಯಾಯಸಮ್ಮತ, ಚುನಾವಣೆಗಾಗಿ ಸಿ.ವಿಜಿಲ್ ಮೊಬೈಲ್ ಅಪ್ಲಿಕೇಷನ್ ಬಳಸಿ ಅಭ್ಯರ್ಥಿ, ರಾಜಕೀಯ ಪಕ್ಷಗಳ ಮುಖಂಡರು ಮತದಾನ ಮಾಡಲು ಆಮಿಷವೊಡ್ಡಿದಲ್ಲಿ, ಲಂಚ, ಉಡುಗೊರೆ ನೀಡಿದಲ್ಲಿ ವಾಸ್ತವದ ಫೋಟೋ ಮತ್ತು ವೀಡಿಯೋ ತುಣುಕುಗಳನ್ನು ಅಪ್‍ಲೋಡ್ ಮಾಡುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಬಹುದಾಗಿದೆ. ಈ ಅಪ್‍ಡೌನ್ ಲೋಡ್ ಮಾಡಿಕೊಂಡು ಅಕ್ರಮ ತಡೆಗೆ ಸಾರ್ವಜನಿಕರು ಮುಂದಾಗಬೇಕು

ನೋಟಾಗೆ ಅವಕಾಶ:

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹಾಗೂ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಇಚ್ಚೆ ಇಲ್ಲದಿದ್ದಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಕೆಳಗೆ ನೋಟಾ ಒತ್ತಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪಾರದರ್ಶಕತೆಗಾಗಿ ಮತದಾನದ ದಿನದಂದು ಅಂತರ್ಜಾಲ ಬಳಸಿ ಮತಗಟ್ಟೆಗಳಿಂದ ವೆಬ್ಕಾಸ್ಟಿಂಗ್ ಮಾಡಲಾಗುವುದು. ಪೇಯ್ಡ್ ನ್ಯೂಸ್ ವಿರುದ್ಧ ಎಂ.ಸಿ.ಎಂ.ಸಿ ಸಮಿತಿ ನಿಗಾ ವಹಿಸಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಅಥವಾ ಸುಳ್ಳು ಸುದ್ದಿ ಹರಡುವ ಯೂಟ್ಯೂಬಸ್ರ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *