ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ನಮ್ಮವರಿಗೆ ಅನ್ಯಾಯವಾದ್ರೆ ಸುಮ್ಮನಿರಬೇಕಾ? ಸಿಡಿದೆದ್ದ ಶಾಮನೂರು ಶಿವಶಂಕರಪ್ಪ, ರಾಜ್ಯದಲ್ಲಿ ವೀರಶೈವ ಲಿಂಗಾಯತರೇ ಹೆಚ್ಚಿರುವುದು, ನಾನು ಯಾರಿಗೂ ಹೆದರಲ್ಲ: ಸಿಎಂಗೆ ಎಸ್ಎಸ್ ಟಾಂಗ್

On: October 1, 2023 4:03 AM
Follow Us:
SHAMANURU SHIVASHANKARAPPA ANGRY
---Advertisement---

SUDDIKSHANA KANNADA NEWS/ DAVANAGERE/ DATE:01-10-2023

ದಾವಣಗೆರೆ (Davanagere): ರಾಜ್ಯ ರಾಜಕಾರಣದಲ್ಲಿ ಸೋಲರಿಯದ ಸರದಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ. ಇದುವರೆಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಎಲ್ಲಾ ಚುನಾವಣೆಯಲ್ಲಿ ಗೆದ್ದು ಬಂದಿರುವ ಹಿರಿಯ ನಾಯಕ. ಭಾರತದ ರಾಜಕೀಯ ಇತಿಹಾಸದಲ್ಲಿ 93 ವರ್ಷ ವಯಸ್ಸಿನ ಶಾಸಕರು ಇಷ್ಟೊಂದು ಸಕ್ರಿಯ ರಾಜಕಾರಣದಲ್ಲಿ ಇರುವುದು ಎಸ್. ಎಸ್. ಮಾತ್ರ. ಶಾಮನೂರು ಶಿವಶಂಕರಪ್ಪ ಅವರು ಮಾತನಾಡುವುದು ಕಡಿಮೆ. ಆದ್ರೆ, ಮಾತನಾಡಿದರೆ ಅದು ಸಿಡಿಗುಂಡು ಆಗಿರುತ್ತದೆ.

CM SIDDARAMAI

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆಯಲ್ಲಿ ನೂರಾರು ವರ್ಷಗಳಿಂದ ನಡೆಯುತ್ತಿದೆ ಆಂಜನೇಯ ಸ್ವಾಮಿ ಎಡೆ ಪರವು: ಪರವು ಮಾಡಿದ ದಿನ ಬರುತ್ತೆ ವರ್ಷಧಾರೆ… ಇದು ಭಜರಂಗಿ ಪವಾಡ…!

ಹೌದು. ಈಗ ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ ಸಿಡಿದಿದ್ದೆರುವ ಶಾಮನೂರು ಶಿವಶಂಕರಪ್ಪರು ಹಿರಿಯ ರಾಜಕಾರಣಿ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಅತ್ಯಂತ ಹಿರಿಯ, ಅನುಭವಿ ಶಾಸಕರು. ಸಿಎಂ ಸಿದ್ದರಾಮಯ್ಯರ ವಿರುದ್ಧ ಸ್ಫೋಟಕ ಹೇಳಿಕೆ ನೀಡಿರುವ ಶಾಮನೂರು ಶಿವಶಂಕರಪ್ಪ ಅವರು, ಸಚಿವ ಸ್ಥಾನ ನೀಡಿಕೆ ವಿಚಾರದಲ್ಲಿ ಅನ್ಯಾಯ ಆಗಿದೆ ಎಂದು ನಾನು ಹೇಳಿಲ್ಲ. ನಮ್ಮ ಸಮುದಾಯದ ಅಧಿಕಾರಿಗಳ ಕಡೆಗಣನೆ ಮಾಡಲಾಗಿದೆ. ಅಧಿಕಾರಿಗಳ ನಿಯೋಜನೆ ಹಾಗೂ ಹುದ್ದೆ ಕೊಡುವಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ.

ನಮ್ಮ ಸಮಾಜದ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯರ ಜೊತೆ ಮಾತನಾಡುತ್ತೇನೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರೇ ಹೆಚ್ಚಿದ್ದಾರೆ. ಶಾಸಕರೂ ಹೆಚ್ಚಿದ್ದಾರೆ. ನಾವು ಬೇರೆಯವರ ಸಹಕಾರ
ಪಡೆದು ಸರ್ಕಾರ ರಚನೆ ಮಾಡಬಹುದು. ಅಷ್ಟು ಶಕ್ತಿ ನಮಗಿದೆ. ನನಗೇನೂ ಯಾರ ಭಯ ಇಲ್ಲ. ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ನಾನು ಯಾರಿಗೂ ಹೆದರಬೇಕು ಎಂದೇನಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯರ ವಿರುದ್ಧ ಗುಡುಗಿದ್ದಾರೆ.

ಗೃಹ ಸಚಿವ ಜಿ. ಪರಮೇಶ್ವರ್ ಅವರು ಲಿಂಗಾಯತ ಸಮುದಾಯದ ಅಧಿಕಾರಿಗಳ ಕಡೆಗಣನೆ ಮಾಡಿಲ್ಲ ಎಂಬ ಹೇಳಿಕೆ ನೀಡಿರುವ ಕುರಿತಂತೆ ಖಾರವಾಗಿ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ ಅವರು, ಜಿ., ಪರಮೇಶ್ವರ್ ಅವರು ಸಚಿವರಾಗಿ ಸರ್ಕಾರದಲ್ಲಿದ್ದಾರೆ. ಹಾಗಾಗಿಯೇ ಅವರು ಹಾಗೆ ಹೇಳುತ್ತಾರೆ. ಹೊರಗೆ ಬರಲಿ, ಅವ್ರೂ ಅವರ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಸರ್ಕಾರ ಸರಿ ಇಲ್ಲ ಎಂದು ನಾನು ಹೇಳುತ್ತಿಲ್ಲ. ಸರ್ಕಾರದಲ್ಲಿರುವವರು ಸರ್ಕಾರದ ಪರವಾಗಿ ಮಾತನಾಡುತ್ತಾರೆ ಎಂದಷ್ಟೇ ಹೇಳುತ್ತೇನೆ. ವಿರುದ್ಧವಾಗಿರುವವರು ಸತ್ಯ ಹೇಳುತ್ತಾರೆ. ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ
ಅಸಮಾಧಾನ ಇರುವುದು ನಿಜ. ಅದಕ್ಕೆ ಬಹಿರಂಗವಾಗಿ ಹೇಳಿದ್ದೇನೆ. ನಮ್ಮವರಿಗೆ ಅನ್ಯಾಯವಾದ್ರೆ ಸುಮ್ಮನೆ ಕೂರಬೇಕಾ? ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕಲ್ವಾ ಎಂದು ಹೇಳಿದರು.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಅಧಿಕಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ. ನಮಗೇನೂ ಮಾಡುತ್ತಾರೆ. ಅಧಿಕಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ. ಕಡೆಗಣನೆ ಮಾಡದೇ ಅಧಿಕಾರಿಗಳಿಗೆ ಸೂಕ್ತ ಹುದ್ದೆ ಕೊಡಬೇಕು ಎಂಬುದಷ್ಟೇ ನಮ್ಮ ಒತ್ತಾಯ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ತಿಳಿದಿದ್ದನ್ನು ಹೇಳಿದ್ದಾರೆ. ಪ್ರಮಾಣ ವಚನ ತೆಗೆದುಕೊಳ್ಳುವಾಗ ಡಿ. ಕೆ. ಶಿವಕುಮಾರ್ ಗೆ ಜೈ ಎಂದು ಹೇಳಿದ್ದಾನಲ್ವಾ. ಡಿಕೆಶಿ ಶಿಷ್ಯ ಅವನು. ಅವರೇ ಬೆಳೆಸಿರುವುದು ಅವನನ್ನು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕೈಗೆ ಸಿಗುವುದಿಲ್ಲ, ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ವಿಚಾರ ನನಗೇನೂ ಗೊತ್ತಿಲ್ಲ. ನೀವು ಅವರಿಗೆ ಕೇಳಬೇಕು ಎಂದರು.

ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ವಿಚಾರ ಸಂಬಂಧ ನನಗೇನೂ ಗೊತ್ತಿಲ್ಲ. ಮೇಲಿನವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷಕ್ಕೆ ಸೇರಿಸಿಕೊಳ್ಳಲು ನಾನು ಕೆಪಿಸಿಸಿ ಅಧ್ಯಕ್ಷನೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment